ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ

ತುಮಕೂರು

        ನಗರದ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಠ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು .ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಬ.ಹ.ರಮಕುಮಾರಿ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ತುಮಕೂರು.

      ಇಂದು ಮಹಿಳೆ ಪುರುಷರಿಗಿಂತ ಕೀಳು ಎಂಬ ತಾರತಮ್ಯವನ್ನು ಹೋಗಲಾಡಿಸಬೇಕು. ಪುರುಷರಂತೆ ಮಹಿಳೆಯು ಸಮಾನಳು ಎನ್ನುವಂತಹ ಮನೋಭಾವ ಮನೆಯಿಂದಲೆ ಪ್ರಾರಂಭವಾಗಬೇಕು. ಇಂದು ಮಹಿಳೆ ಹೊಸ ಹೊಸ ಉಧ್ಯಮಗಳನ್ನು ಸ್ಥಾಪಿಸಿ ಅಂತರಾಷ್ಟ್ರೀಯಮಟ್ಟದಲ್ಲಿ ಪ್ರಸಿದ್ಧಿಯಾಗಿರುವಂತಹ ನಿದರ್ಶನಗಳು ನಮ್ಮ ಮುಂದೆ ಇದೆ.ಇಂತಹ ಸಂದರ್ಭದಲ್ಲಿ  ಸುಧಾಮೂರ್ತಿ ಯವರು ಇಂದಿನಮಹಿಳೆಯರಿಗೆ ಆದರ್ಶರಾಗಿದ್ದಾರೆ.

      ಪ್ರತಿಯೊಬ್ಬರು ಆತ್ಮವಿಶ್ವಾಸಬೆಳೆಸಿಕೊಳ್ಳಬೇಕು. ಎಂತಹ ಸಂಧರ್ಭಗಳಲ್ಲೂ ಸಮಸ್ಯೆಗಳನ್ನು ಸವಾಲಾಗಿಸ್ವೀಕರಿಸಿ ಎದುರಿಸುವಂತಹ ಮನೋಭಾವವನ್ನು ಬೆಳೆಸಿಕೊಳ್ಳಬೇಕು.ಶಿಕ್ಷಣ ವಿಧ್ಯಾರ್ಥಿನಿಯರಿಗೆ ಆತ್ಮವಿಶ್ವಾಸವನ್ನು ಮೂಡಿಸಬೇಕು, ಈನಿಟ್ಟಿನಲ್ಲಿ ವಿದ್ಯಾವಾಹಿನಿ ಸಂಸ್ಥೆ ಇಂತಹ ಕೆಲಸವನ್ನು ಮಾಡುತ್ತಾ ಇದೆ ಎಂದುತಿಳಿಸಿದರು.ಶರ್ಮಿಳಾ  ರವರು ಮಾತನಾಡುತ್ತ 21 ನೇಶತಮಾನದಲ್ಲಿ ಮಹಿಳೆಯರ ಪಾತ್ರ ಬದಲಾಗಿದೆ. ವೃತ್ತಿ, ಸಂಸಾರ, ಎರಡನ್ನುನಿಭಾಯಿಸಬಲ್ಲೆ ಎಂದು ಮಾದರಿಯಾಗಿ ನಿಂತಿದ್ದಾರೆ. ಬಹುತೇಕ ಪ್ರಮುಖಹುದ್ದೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ರಾರಾಜಿಸುತ್ತಾರೆ ಎಂದುತಿಳಿಸಿದರು.

         ವಿದ್ಯಾವಾಹಿನಿ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರದೀಪ್ ಕುಮಾರ್ ಎನ್ ಬಿಮಾತನಾಡುತ್ತ ಮಹಿಳೆಯರಿಗೆ ಹಕ್ಕು, ತಿಳುವಳಿಕೆ, ಶಿಕ್ಷಣ, ತರಭೇತಿ, ತಂತ್ರಜ್ಞಾನ,ನೆರವು ನೀಡಿ ಸಮಾಜದಲ್ಲಿ ಸಮಾನತೆಯ ಬದಲಾವಣೆಗೆ ಅವಕಾಶ ಕಲ್ಪಿಸಬೇಕು –ಮಹಿಳೆಯರಿಗೆ ಗೌರವವನ್ನು ನೀಡಬೇಕು, ಮಹಿಳೆಯರನ್ನು ನೋಡುವಂತಹದೃಷ್ಠಿಕೋನ ಬದಲಾಗಬೇಕು ಎಂದು ತಿಳಿಸಿದರು.ಸಂಸ್ಥೆಯ ಅಧ್ಯಕ್ಷರಾದ ಕೆ ಬಿ ಜಯಣ್ಣರವರು ಕಾರ್ಯಕ್ರಮವನ್ನು ಕುರಿತುಮಾತನಾಡುತ್ತಾ ಮಹಿಳೆಯರು ಪುರುಷರಿಗೆ ಸಮಾನವಾಗಿ ದುಡಿಯುತ್ತಿದ್ದಾರೆ.

         ಅವರ ಸಾಧನೆಗೆ, ಗೌರವ ಸೂಚಿಸುವ ಸಲುವಾಗಿ ಮತ್ತು ಸಮಾಜದಅಭಿವೃದ್ಧಿಗಯಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯ ಎಂಬ ಸಂದೇಶವನ್ನುತಿಳಿಸುವ ಸಲುವಾಗಿ ಅಂತರಾಷ್ಠ್ರೀಯ ಮಹಿಳಾ ದಿನಾಚರಣೆ ಆಚರಿಸುತ್ತಿದ್ದೇವೆ.ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿವಿದ ಕಾಲೇಜುಗಳಿಂದ ವಿದ್ಯಾರ್ಥಿಗಳುಭಾಗವಹಿಸಿ ಸುಮಾರು 80 ಕ್ಕು ಹೆಚ್ಚು ಪೋಸ್ಟರ್ ಪ್ರೆಸೆಂಟೇಷನ್ಪ್ರದರ್ಶಿಸಲಾಯಿತು.ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಆಗಮಿಸಿದ ಹುಸ್ನಾಸುಲ್ತಾನ್, ಸುರೇಂದ್ರ.ಟಿ.ವಿ. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು,ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap