ಸೈನಿಕರ ಶೌರ್ಯ-ಸಾಹಸ ಅವರ್ಣನೀಯ : ದೇವೇಗೌಡ

ಹಾಸನ

        ಪಾಕಿಸ್ತಾನದ ಮೇಲೆ ದಾಳಿನಡೆಸಿದ ಸೈನಿಕರ‌ ಶೌರ್ಯ- ಸಾಹಸವನ್ನು ವರ್ಣಿಸಲುಸಾಧ್ಯವಿಲ್ಲ. ಆದರೆ ಇದು ತಮ್ಮ ಸಾಧನೆ ಎಂದುಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದು ಜೆಡಿಎಸ್ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಡೆಗೆದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

        ಭಾರತ ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿಲೋಕಸಭೆ ‌ಚುನಾವಣೆ ಮುಂದೂಡುವ ಸನ್ನಿವೇಶ ನಿರ್ಮಾಣವಾಗಿಲ್ಲ. ಆದರೆ ಜಮ್ಮು‌ಕಾಶ್ಮೀರದಲ್ಲಿ ಚುನಾವಣೆಮುಂದೂಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲಎಂದಿದ್ದಾರೆ.

       ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರರುನರೇಂದ್ರ ಮೋದಿ‌ ಅವರಿಗೆ ಹೆಚ್ಚಿನ ಬಹುಮತ‌ ಕೊಟ್ಟಿದ್ದರು. ಆದರೂ ಜಮ್ಮು ಕಾಶ್ಮೀರದ ಸ್ಥಿತಿ ಶಾಂತವಾಗಿಲ್ಲ ಎಂಬಆತಂಕ ಜನರಲ್ಲಿದೆ. ರಾಷ್ಟ್ರದ ಮಹಾಜನತೆ ಎಲ್ಲವನ್ನೂನೋಡುತ್ತಿದ್ದಾರೆ. ಜನರಿಗೆ ಪ್ರಬುದ್ಧತೆ ಇದ್ದು, ಅರ್ಥಮಾಡಿಕೊಳ್ಳುವ ಶಕ್ತಿ‌ ಇದೆ ಎಂದು ಹೇಳಿದರು.

      ತಾವು ಪ್ರಧಾನಿಯಾಗಿದ್ದಾಗ ಅಧಿಕಾರಿಗಳ ಅಡೆತಡೆ ಧಿಕ್ಕರಿಸಿಜಮ್ಮು ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದನ್ನು ಸ್ಮರಿಸಿದ ದೇವೇಗೌಡರು, ಕಣಿವೆ ರಾಜ್ಯದ ಜನ ಕೇಂದ್ರ ಸರಕಾರನಮ್ಮನ್ನು ಉತ್ತಮವಾಗಿ ನಡೆಸಿ ಕೊಳ್ಳುತ್ತಿದೆ ಎನ್ನುವವಾತಾವರಣ ನಿರ್ಮಿಸಿದ್ದೆ . ಉದ್ಯೋಗ ಸೇರಿ ಹಲವುಯೋಜನೆಗಳನ್ನು ಮಂಜೂರು ಮಾಡಿ ಸಾಮಾಜಿಕ, ಆರ್ಥಿಕಅಭಿವೃದ್ಧಿಗೆ ಒತ್ತು ನೀಡಲಾಗಿತ್ತು . ಆದರೆ ಈಗಿನ‌ ಕಾಶ್ಮೀರಸ್ಥಿತಿಗೆ ಯಾರು ಕಾರಣ ಎನ್ನುವುದಕ್ಕೆ ಜನರೇ ಉತ್ತರಕೊಡಬೇಕು. ನಮ್ಮ ಐಕ್ಯತೆ ಕಾಪಾಡಿಕೊಳ್ಳುವಲ್ಲಿ ನಾವುಮುಗ್ಗರಿಸುತ್ತಿದ್ದೇವೆ ಎಂದು‌ ಕಳವಳ ವ್ಯಕ್ತಪಡಿಸಿದರು.

       ಆದರೆ ಇಂದು ದೇಶ ಸಂಕಷ್ಟದಲ್ಲಿದೆ, ಈ ವೇಳೆ ಸುಮ್ಮನೆಕೂರಲು ಆಗುವುದಿಲ್ಲ. ಪ್ರಾಣ ಕೊಡುವ ಯೋಧರು ಗಡಿಕಾಯುತ್ತಿದ್ದಾರೆ. ಅವರ ಹಿಂದೆ ನಾವಿರಬೇಕು. ಅವರಸಾಧನೆ, ಶ್ರಮವನ್ನು ನಾವು ರಾಜಕೀಯಕ್ಕೆಬಳಸಿಕೊಳ್ಳಬಾರದು. ಆದರೆ ದೇಶ ಬಿಕ್ಕಟ್ಟಿನಲ್ಲಿರುವಾಗನಾವೆಲ್ಲರೂ‌ ಪ್ರಧಾನಿ ಹಿಂದೆಯೂ ನಿಲ್ಲಬೇಕಾಗುತ್ತದೆಎಂದು ಅಭಿಪ್ರಾಯಪಟ್ಟರು.

       ಈ ಸಂದರ್ಭದಲ್ಲಿ ಟೀಕೆ‌ ಟಿಪ್ಪಣಿ ಬಿಟ್ಟು ಒಗ್ಗಟ್ಟುಕಾಯ್ದುಕೊಳ್ಳಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ದೃಢಸಂಕಲ್ಪದಿಂದ ಮುನ್ನಡೆಯಬೇಕು. ಪಾಕಿಸ್ತಾನದ ಮೇಲಿನಸಂಶಯ ನಿವಾರಣೆ ಆಗುವುದಿಲ್ಲ. ಏಕೆಂದರೆ ಅವರುಉಗ್ರರಿಗೆ ಆಶ್ರಯ ನೀಡಿ, ತಪ್ಪು ಮಾಡಿರುವ ಭಾವನೆಮೂಡಿದೆ. ಇದಕ್ಕಾಗಿಯೇ ಶಾಂತಿ ಭಿಕ್ಷೆ ಬೇಡುತ್ತಿದ್ದಾರೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap