ಟೆಂಪೋ ಹರಿದು ಕಾರ್ಮಿಕ ಸಾವು

ಬೆಂಗಳೂರು

          ವೇಗವಾಗಿ ಬಂದ ಟೆಂಫೋ ಟ್ರಾವಲರ್ ಹರಿದು ರಸ್ತೆ ದಾಟುತ್ತಿದ್ದ ಕಾರ್ಮಿಕರೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

          ಮೃತಪಟ್ಟವರನ್ನು ಚೊಕ್ಕಸಂದ್ರದ ಮುಖೇಶ್ (35)ಎಂದು ಗುರುತಿಸಲಾಗಿದೆ.ಪೀಣ್ಯದ ಸ್ಟೀಲ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಮುಖೇಶ್,ಭಾನುವಾರ ರಾತ್ರಿ 7.45ರ ವೇಳೆ ಮನೆಗೆ ಹೋಗಲು ಜಾಲಹಳ್ಳಿ ಟಿವಿಎಸ್ ಕ್ರಾಸ್‍ನ 100 ಅಡಿ ರಸ್ತೆಯನ್ನು ದಾಟುತ್ತಿದ್ದಾಗ ವೇಗವಾಗಿ ಬಂದ ಟೆಂಪೋ ಟ್ರಾವಲರ್ ಹರಿದು ಗಂಭೀರವಾಗಿ ಗಾಯಗೊಂಡ ಮುಖೇಶ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

        ಪ್ರಕರಣ ದಾಖಲಿಸಿರುವ ಪೀಣ್ಯ ಸಂಚಾರ ಪೊಲೀಸರು ಟೆಂಪೋ ಟ್ರಾವಲರ್ ಚಾಲಕ ಜಗದೀಶ್‍ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆಂದು ಡಿಸಿಪಿ ಸೌಮ್ಯಾರಾಣಿ ತಿಳಿಸಿದ್ದಾರೆ.

ಪೇಂಟರ್ ಆತ್ಮಹತ್ಯೆ

        ಪತ್ನಿಯನ್ನು ಮಾಂಸ ತರಲು ಕಳುಹಿಸಿ ಕುಡಿದ ಅಮಲಿನಲ್ಲಿದ್ದ ಪೇಯಿಂಟರ್ ರಾಜು ಎಂಬಾತ ಥಿಂಕರ್‍ನಿಂದ ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವ ದುರ್ಘಟನೆ ಗಂಗಮ್ಮನ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣನಗರದಲ್ಲಿ ಭಾನುವಾರ ನಡೆದಿದೆ.

        ಗಂಗಮ್ಮನ ಗುಡಿಯ ಕಲ್ಯಾಣನಗರದ ರಾಜು (35), ಸಂಜೆ 6ರ ವೇಳೆ ಪತ್ನಿಯನ್ನು ಮಾಂಸ ತರಲು ಅಂಗಡಿಗೆ ಕಳುಹಿಸಿದ್ದಾನೆ. ಕುಡಿದ ಅಮಲಿನಲ್ಲಿದ್ದ ಆತ, ಪೇಯಿಂಟ್‍ಗೆ ಬಳಸುವ ಥಿಂಕರ್‍ಗೆ ಬೆಂಕಿ ಹಚ್ಚಿದ್ದಾನೆ.ಬೆಂಕಿಯು ಇಡೀ ಮನೆ ಆವರಿಸಿ ರಾಜು ಸುಟ್ಟು ಹೋಗಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಪ್ರಕರಣ ದಾಖಲಿಸಿರುವ ಗಂಗಮ್ಮ ಗುಡಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap