ಕೊರಟಗೆರೆ
ಎತ್ತಿನಹೊಳೆ ಕಾಮಗಾರಿ ಮಾಡುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಟ್ರ್ಯಾಕ್ಟರ್ ಹಿಂಬದಿಯಿಂದ ಡಿಕ್ಕಿ ಹೊಡೆದು ಸ್ಥಳದಲ್ಲಿಯೆ ಮೃತ ಪಟ್ಟ ಘಟನೆ ಗುರುವಾರ ನಡೆದಿದೆ.
ತಾಲ್ಲೂಕಿನ ಕೋಳಾಲ ಹೋಬಳಿ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ಎಸ್.ಗೊಲ್ಲಹಳ್ಳಿ-ಎಲೆರಾಂಪುರ ಮಾರ್ಗ ಮಧ್ಯೆ ಎತ್ತಿನಹೊಳೆ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಶಿವರಾಜು(50) ಮೃತಪಟ್ಟಿದ್ದಾನೆ.
ಮೃತಪಟ್ಟ ಶಿವರಾಜು ಮೂಲತಃ ಹಾಸನ ಜಿಲ್ಲೆಯ ಕೊಟಾಯಾ ಗ್ರಾಮದ ನಂಜೇಗೌಡರ ಮಗ. ಎಲೆರಾಂಪುರ ಬಳಿಯಲ್ಲಿ ಪ್ರಸ್ತುತ ಎತ್ತಿನಹೊಳೆ ಕಾಮಗಾರಿ ನಡೆಸುತ್ತಿರುವ ಎಸ್‍ಎನ್‍ಸಿ ಕಂಪನಿಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು.ಕಾರ್ಮಿಕ ಕೆಲಸ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಗೆ ಬಂದ ಟ್ರ್ಯಾಕ್ಟರ್ ಕಾರ್ಮಿಕನ ಮೇಲೆ ಹರಿದಿದೆ. ಸ್ಥಳಕ್ಕೆ ಪಿಎಸೈ ನವೀನಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ