ಹಕ್ಕುಗಳಿಗೆ ಕಾರ್ಮಿಕರು ಸಿಡಿದು ನಿಲ್ಲಬೇಕು: ಮುಜೀಬ್

ತುಮಕೂರು

    ಕೈಗಾರಿಕೆಗಳು ಹೆಚ್ಚು ಹೆಚ್ಚು ಸ್ಥಾಪನೆಯಾದಂತೆ ಉದ್ಯೋಗದ ಅವಕಾಶಗಳು ದೊರೆಯುತ್ತವೆ, ಕಾರ್ಮಿಕ ವರ್ಗದ ಹಕ್ಕುಗಳನ್ನು ಪಡೆಯಲು ತ್ಯಾಗ ಬಲಿದಾನಗಳನ್ನು ಮಾಡಿ ಕಾರ್ಮಿಕ ವರ್ಗದ ಐಕ್ಯತೆಯನ್ನು ಸಾರಿದ ಕಾರ್ಮಿಕ ವರ್ಗ ಸಂಭ್ರಮದಿಂದ ಆಚರಿಸುವ ದಿನವೇ ಮೇ ಕಾರ್ಮಿಕ ದಿನಾಚರಣೆಯಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್‍ಮುಜೀಬ್ ತಿಳಿಸಿದರು.

    ವಿಶ್ವ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಫಿಟ್ ವೆಲ್ ಪೋರ್ಜಿಂಗ್ ಕಾರ್ಮಿಕರ ಸಂಘ ಸಿಐಟಿಯು ಅಂತರಸನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು ಚಳುವಳಿಗೆ ಮಾನ್ಯತೆ ನೀಡದೆ ಇರುವ ಬಂಡವಾಳಶಾಹಿ ನೀತಿಗಳ ವಿರುದ್ದ ತಮ್ಮ ಹಕ್ಕುಗಳಿಗಾಗಿ ಕಾರ್ಮಿಕ ವರ್ಗ ಸಿಡಿದು ನಿಲ್ಲುತ್ತದೆ, ಕಾರ್ಮಿಕ ಸಂಘವನ್ನು ಮಾನ್ಯತೆ ಮಾಡಿರುವ ಆಡಳೀತ ಮಂಡಳಿಗೆ ಅಬಿನಂದನೆಗಳನ್ನು ಸಲ್ಲಿಸಿದ ಅವರು ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ನೀಡಬೇಕು ಸಿಐಟಿಯು ಸಂಘಟನೆ ಕೈಗಾರಿಕೆಗಳು ಉಳಿಯಬೇಕು, ಎನ್ನುವ ದೃಷ್ಠಿಕೋನವನ್ನು ಹೊಂದಿದ್ದು ಆಡಳಿತ ಮಂಡಳಿಯು ಕಾರ್ಮಿಕರ ಸಮಸ್ಯೆಗಳನ್ನು ಆಲಿಸಬೇಕು ಎಂದು ತಿಳಿಸಿದರು

      ಫಿಟ್ ವೆಲ್ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಸುಜಿತ್ ಟಿ.ಆರ್ ಮಾತನಾಡಿ, ತುಮಕೂರು ನಗರ ದಿನೇ ದಿನೇ ಬೆಳೆಯುತ್ತಿದ್ದು ಕೈಗಾರಿಕೆಗಳು ಹೆಚ್ಚು ಹೆಚ್ಚು ತುಮಕೂರಿನ ಕಡೆ ಮುಖ ಮಾಡುತ್ತಿವೆ ರಾಜದಾನಿಗೆ ಹತ್ತಿರವಾಗಿರುವ ತುಮಕೂರು ಬೆಳೆಯುತ್ತಿರುವ ನಗರವಾಗಿದ್ದು ಇಲ್ಲಿ ಉದ್ಯೋಗದ ಸೃಷ್ಠಿಯೂ ಸಹ ಹೆಚ್ಚುತ್ತಿದೆ ಐಟಿಐ, ಡಿಪ್ಲೋಮೊ ಮಾಡಿರುವ ಯುವಕರು ಗ್ರಾಮೀಣ ಭಾಗಗಳಿಂದ ಬರುವ ಯುವಕರು ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದಾರೆ ಕೈಗಾರಿಕೆಗಳು ಬೆಳೆದಂತೆ ಉದ್ಯೋಗಗಳು ಹೆಚ್ಚು ಹೆಚ್ಚು ಸೃಷ್ಠಿಯಾಗುತ್ತವೆ ಇದರಿಂದ ಕೈಗಾರಿಕೆಗಳನ್ನು ನಡೆಸುವ ಮಾಲೀಕರು, ಉದ್ಯೋಗ ಮಾಡುವ ಕಾರ್ಮಿಕರ ಬದುಕುಗಳು ಅಸನಾಗುತ್ತವೆ ಕೈಗಾರಿಕೆಯ ಮಾಲೀಕ ಮತ್ತು ಕಾರ್ಮಿಕರ ಸಂಬಂಧ ತಂದೆ ಮಕ್ಕಳ ಸಂಬಂದವಿದ್ದತೆ ನಾವು ಒಂದು ಕುಟುಂಬವಾಗಿ ಮುಂದೆ ಸಾಗಬೇಕಾಗಿದೆ ಎಂದರು

      ಸಿಐಟಿಯು ತಾಲ್ಲೂಕು ಅಧ್ಯಕ್ಷ ಬಿ. ಷಣ್ಮುಖಪ್ಪ ಮಾತನಾಡಿ, ಕಾರ್ಮಿಕರು ಪ್ರತಿ ದಿನ ಶ್ರಮವಹಿಸಿ ದುಡಿಯುವವರಾಗಿದ್ದು ಕಾರ್ಮಿಕರ ಶ್ರಮ ಮಾಲೀಕರು ಅಭಿವೃದ್ಧಿಯಾಗಲು ಸಹಕಾರಿಯಾಗಿದೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಎಲ್ಲರೂ ಪಾಲಿಸಬೇಕಾಗಿದೆ ಎಂದರು

     ಫಿಟ್ ವೆಲ್ ಕಾರ್ಮಿಕ ಸಂಘದ ಅಧ್ಯಕ್ಷರು ಸಿ.ಎಸ್. ಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರಮವಹಿಸಿ ದುಡಿದ ಕೆಲಸಕ್ಕೆ ತಕ್ಕ ಕೂಲಿ, ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ಪಡೆಯಲು ಯಾವುದೇ ಕಾನೂನುಗಳು ಇಲ್ಲದೆ ದುಡಿದ ಕೆಲಸಕ್ಕೆ ಕೂಲಿಯೂ ಸಿಗದೆ, ಸೂರ್ಯನ ಬೆಳಕನ್ನೂ ನೋಡದೆ ದುಡಿಯುತ್ತಿದ್ದ ಕಾರ್ಮಿಕರಿಗೆ 8 ಗಂಟೆ ಕೆಲಸ ಮತ್ತು ಕಾರ್ಮಿಕರಿಗೆ ವಿಶ್ರಾಂತಿಗಾಗಿ ಹೋರಾಟ ನಡೆಸಿದ ಕಾರ್ಮಿಕರ ತ್ಯಾಗ ಬಲಿದಾನಗಳನ್ನು ನೆನೆಯಬೇಕಾಗಿದೆ ಅವರು ನಡೆಸಿದ ಹೋರಾಟದ ಫಲವಾಗಿ ಇಂದು ಕಾರ್ಮಿಕರು ಸುಖ ಜೀವನವನ್ನು ನಡೆಸುವಂತಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ರಘುಸ್ವಾಮಿ ಆರ್.ಎಸ್ ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap