ಜನವರಿ 08-09 ರಂದು ಭಾರತ್ ಬಂದ್‍ಗೆ ತಾಲ್ಲೂಕು ಕಾರ್ಮೀಕ ಒಕ್ಕೂಟಗಳ ಬೆಂಬಲ

ತಿಪಟೂರು :

       ದೇಶದ ಕಾರ್ಮಿಕರು, ರೈತರನ್ನು ಹಾಗೂ ಜನಸಾಮಾನ್ಯರನ್ನು ಬಾದಿಸುತ್ತಿರುವ ಸಮಸ್ಯೆಗಳುನ್ನು ಬಗೆಹರಿಸಲು ಒತ್ತಾಯಿಸಿ ರಾಷ್ಟ್ರದಾದ್ಯಂತ ಜನವರಿ 08 ರಂದು ಸಂಪೂರ್ಣ ಬಂದ್ ಮತ್ತು 09 ರಂದು ರಸ್ತೆಬದಿಯಲ್ಲಿ ಸಭೆಗಳನ್ನು ನಡೆಸಿ ಜನರನ್ನು ಜಾಗೃತಿಗೊಳಿಸಲಾಗುವುದೆಂದು ಸಿ.ಐ.ಟಿ.ಯು ನ ಅಲ್ಲಾಬಕಾಶ್ ತಿಳಿಸಿದರು.

       ಇಂದು ನಗರದ ರೈತಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಇಂದು ನಮ್ಮ ರಾಷ್ಟ್ರವು ಬೆಲೆ ಏರಿಕೆ ರಾಷ್ಟ್ರದಾದ್ಯಂತ ಜೆ.ಸಿ.ಟಿ.ಯು ಭಾರತದಾದ್ಯಂತ ಬಂದ್‍ಗೆ ಕರೆನೀಡಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿಕ್ರಿಯಾ ಸಮಿತಿ, ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಜೀವವಿಮನಾ ನೌಕರರ ಸಂಘ, ಅಂಗನವಾಡಿ ನೌಕರರ ಸಂಘ, ಹಮಾಲರ ಸಂಘ, ಅಕ್ಷರ ದಾಸೋಹ ಸಂಘ, ಗ್ರಾ.ಪಂ ನೌಕರರ ಸಂಘ, ಮುಂತಾದ ಸಂಘಟನೆಗಳು ಬೆಂಬಲವನ್ನು ಸೂಚಿಸಿದ್ದು ಬಂದ್‍ಅನ್ನು ಯಶಸ್ವಿಗೊಳಿಸಿ ತಾಲ್ಲೂಕಿನ ವರ್ತಕರು, ಹೋಟೆಲ್, ಬೀದಿ ಬದಿ ವ್ಯಾಪಾರಿಗಳು ಸಹಕರಿಸಬೇಕೆಂದು ಕೋರಿದರು.

       ಇದೇ ವೇಳೆ ಮಾತನಾಡಿದ ಪ್ರಾಂತ ರೈತ ಸಂಘದ ಚನ್ನಬಸವಣ್ಣ ನಮ್ಮ ತಾಲ್ಲೂಕು ಬರದಿಂದ ಕೂಡಿದ್ದು ನೀರಿಗೆ ಹಾಹಾಕಾರ ಪಡುವಂತಹ ಸನ್ನಿವೇಶವನ್ನು ತಲುಪುತ್ತಿದ್ದು ಈಗಿರುವ ನೀರಿನಲ್ಲಾದರು ಕೆರೆಗಳನ್ನು ತುಂಬಿಸಿಕೊಳ್ಳುವ ಪ್ರಯತ್ನವನ್ನುಮಾಡಿ ಅದರಿಂದ ಅಂತರ್ಜಲ ಅಭಿವೃದ್ಧಿಗೆ ತಾಲ್ಲೂಕು ಆಡಳಿತ ಕ್ರಮ ತೆಗೆದುಕೊಳ್ಳಬೇಕು. ಮತ್ತು ರೈತರಿಗೆ ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಉತ್ಪಾದನಾ ವೆಚ್ಚದ 1.5 ಪಟ್ಟು ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿಗೊಳಿಸಿ ಎಲ್ಲಾ ರೈತರುಗಳ ಸಾಲವನ್ನು ಕೇಮದ್ರ ಸರ್ಕಾರ ಕೂಡಲೇ ಮನ್ನಾಮಾಡಬೇಕೆಂದು ಆಗ್ರಹಿಸಿದರು.

         ಅಂಗನವಾಡಿ ನೌಕರರ ಸಂಘದ ಅನಸೂಯ ಮಾತನಾಡಿ ನಾವೀಗ ಕೇವಲ 2700 ರೂಗಳಿಗೆ ದುಡಿಯುತ್ತಿದ್ದೇವೆ, ಕೇಂದ್ರ ಸರ್ಕಾರವೇ ತಿಳಿಸಿರುವಂತೆ ಸಾಮಾನ್ಯ ಜೀವನ ಸಾಗಿಸಲು ಕನಿಷ್ಟ 18000 ರೂಗಳ ಅವಶ್ಯಕತೆ ಇದೆ ನಾವು ಹೇಗೆ ಈ 2700 ರೂಗಳಲ್ಲಿ ಜೀವನಸಾಗಿಸುವುದು ಆದ್ದರಿಂದ ಎಲ್ಲಾ ಅಸಂಘಟಿತ ಕಾರ್ಮೀಕರಿಗೂ ತಿಂಗಳಿಗೆ 18000 ರೂಗಳ ವೇತನವನ್ನು ಶೀಘ್ರವಾಗಿ ಜಾರಿಗೊಳಿಸಬೇಕು. ಈಗ ಸರ್ಕಾರವು ಪ್ರಾಥಮಿಕ ಶಾಲೆಗಳಲ್ಲಿ ಲೋಯರ್ ಮತ್ತು ಅಪ್ಪರ್ ಕೀಂಡರ್‍ಗರ್ಟನ್ ತೆರೆಯುತ್ತಿರುವುದು ಅಂಗನವಾಡಿಗಳನ್ನು ಮುಚ್ಚಿಸುವಂತಹ ಹುನ್ನಾರವಾಗಿದೆ ಆದರೆ ಆದೇ ತರಬೇತಿಯನ್ನು ನಮಗೇ ನೀಡಿ ನಾವೇ ನಡೆಸಿಕೊಂಡು ಹೋಗುತ್ತೇವೆ ಯಾವುದೇ ಕಾರಣಕ್ಕೂ ಇದು ಜಾರಿಯಾಗಬಾರದೆಂದು ಒತ್ತಾಯಿಸಿದರು.

           ಕೇಂದ್ರ ಸರ್ಕಾರವು ಈಗ ಸಾರಿಗೆ ರಂಗವನ್ನು ಕಾರ್ಪೋರೇಟರ್ ಕಂಪನಿಗಳಿಗೆ ಪರಭಾರೆ ಮಾಡುಲು ಮೋಟಾರು ವಾಹನಗಳ ವಿಮೆಯನ್ನು ಒಂದು ಸಾವಿರೂ ಗಳನ್ನು ಹೆಚ್ಚಿಸಿದ್ದು ಅದನ್ನು ಶೀಘ್ರವಾಗಿ ಹಿಂಪಡೆಯಬೇಕು ಇಂದು ದ್ವಿಚಕ್ರವಾಹನಗಳನ್ನೇ ಹೆಚ್ಚಾಗಿ ಅವಲಂಭಿಸಿರುವ ಮಾದ್ಯಮವರ್ಗದವರ ಬುಡವನ್ನೇ ಕಡಿದಂತಾಗಿದೆ ಎಂದರು.ಪತ್ರಿಕಾ ಘೋಷ್ಟಿಯಲ್ಲಿ ಶ್ರೀಕಾಂತ್, ತಾಲ್ಲೂಕು ಬಿಸಿಯೂಟ ನೌಕರರ ಸಂಘದ ಲಕ್ಷ್ಮಿದೇವಿ, ಹಮಾಲರ ಸಂಘದ ಮಂಜುನಾಥ್.ಟಿ.ಆರ್ ಮುಂತಾದವರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link