ಬೀದಿ ವ್ಯಾಪರಿಗಳ ಮಹಾಮಂಡಳಕ್ಕೆ ಕಾರ್ಯಗಾರ ನಡೆಯಿತು.

ಹರಪನಹಳ್ಳಿ

         ರಸ್ತೆ ಬೀದಿ ವ್ಯಾಪರಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸೌಲಭ್ಯಗಳ ಮಾಹಿತಿ ನೀಡಿಲು ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲು ಕಾರ್ಯಗಾರವನ್ನು ಅಯೋಜಿಸಲಾಗಿದೆ ಎಂದು ಪುರಸಭೆ ಅಧಿಕಾರಿ ಲೋಕ್ಯನಾಯ್ಕ್ ಹೇಳಿದರು.
ಪಟ್ಟಣದ ಗೋರ್ಕಣೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ರಸ್ತೆ ಬೀದಿ ವ್ಯಾಪರಿಗಳ ಮಹಾಮಂಡಳಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಕಾರ್ಯಗಾರವನ್ನು ಮಾಡಲಾಯಿತ್ತು.

        ಲೋಕ್ಯನಾಯ್ಕ್ ಮಾತನಾಡಿ, ಸರ್ಕಾರಗಳು ರಸ್ತೆ ಹಾಗೂ ಬೀದಿ ವ್ಯಾಪರಸ್ಥರಿಗೆ ಅರ್ಥಿಕ ಸಹಾಯ ಒದಗಿಸಲು ಯೋಜನೆಗಳನ್ನು ರೂಪಿಸಿಕೊಂಡಿದ್ದು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ನೀಡಲಾಗುವುದು ಎಂದರು. ಗೌರವಾಧ್ಯಕ್ಷ ಕೊಪ್ಪಳದ ಶಿವಣ್ಣ, ಅಧ್ಯಕ್ಷ ಜಂಗ್ಲಿ ಅಂಜಪ್ಪ, ಉಪಾಧ್ಯಕ್ಷರಾಗಿ ಕೆ.ವೀರಶ್, ಪಿ.ಬಾಬುರಾಜೇಂದ್ರ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಸಂಡೂರು ರಾಜು, ಕಾನೂನು ಸಲಹೆಗಾರ ಬೀರಾನಾಯ್ಕ್, ಜಂಟಿ ಕಾರ್ಯದರ್ಶಿ ಹೆಚ್.ವೀರೇಶಿ, ಖಜಾಂಚಿ ಎಂ.ಶಾಂತನಾಯ್ಕ್, ಸದಸ್ಯರಾದ ಸಂಡೂರು ಬಸಮ್ಮ, ಉಲ್ಲಾಸಿನಿ, ಆರ್.ಡಿ.ಅಕ್ಬರ್ ಆಯ್ಕೆಯಾಗಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap