ತುಮಕೂರು
ನಗರದ ವಿದ್ಯೋದಯ ಕಾನೂನು ಕಾಲೇಜಿನ ಐ.ಕ್ಯೂ.ಎ.ಸಿ. ವತಿಯಿಂದ ನ್ಯಾಕ್ ಮಾನ್ಯತೆಯ ಹೊಸ ನಿಯಮಗಳ ಬಗ್ಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ತುಮಕೂರು ವಿವಿ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡರು ಕಾರ್ಯಕ್ರಮ ಉದ್ಘಾಟಿಸಿ, ನ್ಯಾಕ್‍ನ ಏಳು ಮಾನದಂಡಗಳ ಬಗ್ಗೆ ಮತ್ತು ಒಂದು ಬಾರಿ ಕಾಲೇಜು ನ್ಯಾಕ್‍ಗೆ ಒಳಪಟ್ಟರೆ ಕೇಂದ್ರ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳಿಂದ ಹಣಕಾಸಿನ ನೆರವನ್ನು ಕಾಲೇಜು, ಅಧ್ಯಾಪಕರುಗಳು ಪಡೆದುಕೊಳ್ಳಬಹುದು ಎಂದು ಹೇಳಿದರು.
ಪ್ರೊ. ಹೆಚ್.ಎಸ್. ಶೇಷಾದ್ರಿರವರು, ವಿದ್ಯೋದಯ ಫೌಂಡೇಶನ್ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಪ್ರೊ. ಹೆಚ್.ಎಸ್. ಶೇಷಾದ್ರಿರವರು ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ನ್ಯಾಕ್ ಸಂಯೋಜಕರಾದ ಡಾ. ಅನಿಲ್‍ಕುಮಾರ್, ಪರಿಷ್ಕøತ ನ್ಯಾಕ್ ಮೌಲ್ಯಮಾಪನ ಮತ್ತು ಮಾನ್ಯತೆಯ ಚೌಕಟ್ಟಿನ ಬಗ್ಗೆ ವಿವರಿಸುತ್ತಾ ಹೊಸ ವಿಧಾನದಲ್ಲಿ ಪ್ರಮುಖವಾಗಿ ಎರಡು ಬಗೆಯಲ್ಲಿ ಮೌಲ್ಯಮಾಪನ ನಡೆಯುತ್ತದೆ. ಶೇ. 70 ರಷ್ಟು ಅಂಕಗಳನ್ನು ಡಿಜಿಟಲ್ ಪರಿಶೀಲನೆಗೆ ಮತ್ತು ಉಳಿದ 30 ಅಂಕಗಳನ್ನು ತಜ್ಞರ ಪೀರ್ ಸಮಿತಿ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.
ಏಳು ಮಾನದಂಡಗಳಿಂದ 121 ಕೀಲಿ ಸೂಚಿಕಗಳ ಮೂಲಕ ಮೌಲ್ಯಮಾಪನಕ್ಕೆ ಒಳಪಡುತ್ತದೆ. ಕಾಲೇಜಿನ ಪಠ್ಯಕ್ರಮ ಬೋಧನಾ ಮತ್ತು ಕಲಿಕಾ ವಿಧಾನ, ಮೌಲ್ಯಮಾಪನ, ಸಂಶೋಧನೆ, ಮೂಲಸೌಕರ್ಯ, ಗವರ್ನನ್ಸ್, ವಿದ್ಯಾರ್ಥಿ ಬೆಳವಣಿಗೆ ಕಾರ್ಯಕ್ರಮಗಳು, ನಾಯಕತ್ವ, ಹೊಸ ಮತ್ತು ಅತ್ಯುತ್ತಮ ಕಲಿಕಾ ಅಭ್ಯಾಸಗಳ ಅಳವಡಿಕೆ, ವಿದ್ಯಾರ್ಥಿಗಳಿಂದ ಬೋಧಕರ ಬೋಧನಾ ವಿಧಾನ, ಫೀಡ್ ಬ್ಯಾಕ್, ಮತ್ತು ವಿದ್ಯಾರ್ಥಿಗಳು ಎನ್.ಎಸ್.ಎಸ್., ರೆಡ್‍ಕ್ರಾಸ್ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಬೇಕು ಎಂದು ಹೇಳಿದರು.
ಪ್ರಾಂಶುಪಾಲರಾದ ಪ್ರೊ. ಕೆ. ವೆಂಕಟಾಚಲಪತಿಸ್ವಾಮಿ ಮತ್ತು ವಿದ್ಯೋದಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಚಂದ್ರಣ್ಣರವರು ಹಾಜರಿದ್ದರು.
ಐ.ಕ್ಯೂ.ಎ.ಸಿ. ಸಂಚಾಲಕರಾದ ಜಿ.ವೈ. ನಟರಾಜ ಸ್ವಾಗತಿಸಿದರು, ಅಧ್ಯಾಪಕಿ ಮಂಜುಳ ಎನ್.ಎಸ್. ನಿರೂಪಿಸಿದರು, ಅಧ್ಯಾಪಕರಾದ ಮೊಹಮ್ಮದ್ ರಫೀ ಖಾನ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
