ವಿಶ್ವ ಕ್ಯಾನ್ಸರ್ ದಿನಾಚರಣೆ..!

ಚಳ್ಳಕೆರೆ

           ವೈದ್ಯಕೀಯ ಲೋಕದಲ್ಲಿ ಹಲವಾರು ರೋಗಗಳಿಗೆ ಔಷಧಗಳನ್ನು ಸಂಶೋಧನೆ ಮೂಲಕ ಕಂಡುಹಿಡಿದು ವ್ಯಕ್ತಿಯನ್ನು ಪ್ರಾಣಾಪಾಯದಿಂದ ಸಂರಕ್ಷಣೆ ಮಾಡಲಾಗುತ್ತದೆ. ಆದರೆ, ಇಂದಿಗೂ ಸಹ ಕ್ಯಾನ್ಸರ್ ಪೀಡಿತ ರೋಗಿಯನ್ನು ರಕ್ಷಿಸುವುದು ವೈದ್ಯಲೋಕಕ್ಕೆ ಸವಾಲಾಗಿದ್ದು, ಈ ರೋಗವನ್ನು ನಿಯಂತ್ರಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ ಎಂದು ನಗರದ ಖ್ಯಾತ ವೈದ್ಯ, ರೋಟರಿ ಕ್ಲಬ್‍ನ ಹಿರಿಯ ನಿರ್ದೇಶಕ ಡಾ.ಕೆ.ಎಂ.ಜಯಕುಮಾರ್ ತಿಳಿಸಿದರು.

            ಅವರು, ಸೋಮವಾರ ನಗರದ ಗ್ರೇಸ್ ಆರ್ಯುವೇದ ಕಾಲೇಜಿನಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಹಲವಾರು ವರ್ಷಗಳ ನಿರಂತರ ಪ್ರಯತ್ನದಿಂದ ಕ್ಯಾನ್ಸರ್ ಪೀಡಿತ ರೋಗಿಗಳನ್ನು ಪ್ರಾಥಮಿಕ ಹಂತದಲ್ಲಿದ್ದರೆ ಮಾತ್ರ ರಕ್ಷಿಸಲು ಸಾಧ್ಯವಾಗಿದೆ. ಜನತೆ ಕ್ಯಾನ್ಸರ್ ಕುರಿತು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದು ಉತ್ತಮವೆಂದರು.

            ರೋಟರಿ ಕ್ಲಬ್ ಅಧ್ಯಕ್ಷ ಸಂಜಯ್ ಬಾಲಾಜಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ರೋಟರಿ ಕ್ಲಬ್ ಇಂತಹ ಭಯಾನಕ ರೋಗಗಳ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದೆ. ನಮ್ಮ ಈ ಕಾರ್ಯಕ್ರಮದಿಂದ ಕೆಲವರಿಗಾದರೂ ಕ್ಯಾನ್ಸರ್ ರೋಗ ನಿಯಂತ್ರಣವಾದಲ್ಲಿ ನಮ್ಮ ಪ್ರಯತ್ನ ಸಾಧ್ಯವಾಗುತ್ತದೆ. ಎಲ್ಲರೂ ಇಂತಹ ಕಾರ್ಯಕ್ರಮಗಳಿಗೆ ಸದಾಕಾಲ ಸಹಕಾರ ನೀಡುವಂತೆ ಮನವಿ ಮಾಡಿದರು.

             ಈ ಸಂದರ್ಭದಲ್ಲಿ ಹಿರಿಯ ರೋಟರಿ ಸದಸ್ಯ ಜಯಪ್ರಕಾಶ್, ಡಾ.ವೀರೇಶ್, ಕಾರ್ಯದರ್ಶಿ ಕೆ.ಜಿ.ಮಂಜುನಾಥ, ಬಿ.ಸಿ.ನಾಗೇಶ್, ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಮುಂತಾದವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap