ಗ್ರಾಹಕರ ಹಕ್ಕುಗಳ ದಿನಾಚರಣೆ ಜಾಗೃತಿ ಮೂಲಕ ಗ್ರಾಹಕರ ಸಂರಕ್ಷಣೆಗೆ ನ್ಯಾಯಾಂಗ ಇಲಾಖೆ ಬದ್ದ.

ಚಳ್ಳಕೆರೆ

      ಪ್ರತಿಯೊಬ್ಬ ಗ್ರಾಹಕ ತಾನು ಖರೀದಿಸುವ ವಸ್ತುಗಳಿಗೆ ಅಂಗಡಿಯಿಂದ ರಶೀದಿ ಪಡೆದು ವಸ್ತುಗಳನ್ನು ಖರೀದಿಸಬೇಕು. ಒಂದು ವೇಳೆ ನೀವು ಖರೀದಿಸಿದ ವಸ್ತುಗಳು ಕಳಪೆಯಿಂದ ಕೂಡಿದ್ದಲ್ಲಿ ಅವರ ವಿರುದ್ದ ದಾವೆ ಹೂಡಿ ನಿಮಗೆ ಆದ ತೊಂದರನ್ನು ಸರಿಪಡಿಸಲು ಗ್ರಾಹಕರ ನ್ಯಾಯಾಲಯ ಸಹಕಾರಿಯಾಗಲಿದೆ ಎಂದು ಇಲ್ಲಿನ ಹಿರಿಯ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶ ದೇವೇಂದ್ರ ಪಂಡಿತ್ ತಿಳಿಸಿದರು.

       ಅವರು, ಶನಿವಾರ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು, ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ಚಳ್ಳಕೆರೆ ವಕೀಲರ ಸಂಘ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

       ಇತ್ತೀಚಿನ ಕೆಲವು ವರ್ಷಗಳಲ್ಲಿ ಅಂಗಡಿ ಮತ್ತು ಕಾರ್ಖಾನೆಗಳಲ್ಲಿ ಸಿಗುವ ವಸ್ತುಗಳು ಗುಣಮಟ್ಟದಲ್ಲಿ ಸುಧಾರಣೆ ಕಾಣದಿದ್ದರೂ ಅವುಗಳಿಗೆ ಹೆಚ್ಚಿನ ದರವನ್ನು ಅಂಗಡಿ ಮಾಲೀಕ ನಿಗದಿ ಪಡಿಸುತ್ತಾನೆ. ಖರೀದಿಸುವ ಸಂದರ್ಭದಲ್ಲಿ ವಸ್ತುವಿನ ಉತ್ಪಾದನೆ ದಿನಾಂಕ, ಮಾರುಕಟ್ಟೆ ದರ ಹಾಗೂ ವಸ್ತುವಿನ ಅಂತಿಮ ಬಳಕೆಯ ದಿನಾಂಕವನ್ನು ನಮೂದಿಸಲಾಗಿರುತ್ತದೆ. ಇವುಗಳನ್ನು ತಿಳಿದೇ ಗ್ರಾಹಕರ ಖರೀದಿಸಬೇಕಾಗುತ್ತದೆ. ಗ್ರಾಹಕರಿಗೆ ಏನಾದರೂ ತೊಂದರೆ ಎನ್ನಿಸಿದಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಬಹುದಾಗಿದೆ ಎಂದರು.

        ಅಪರ ಸಿವಿಲ್ ನ್ಯಾಯಾಧೀಶ ಮನು ಪಾಟೀಲ್, ಸೇವೆ ತೆಗೆದುಕೊಳ್ಳುವ ಮತ್ತು ಸೇವೆ ಪಡೆಯುವ ಇಬ್ಬರ ಕಾರ್ಯವೂ ಇಲ್ಲಿ ಮುಖ್ಯವಾಗಿದೆ. ಗ್ರಾಹಕರ ಸೇವೆ ಪಡೆಯುವವನಾದರೆ ಉತ್ಪಾದಕ ಸೇವೆ ನೀಡುವವನಾಗುತ್ತಾನೆ. ಎರಡೂ ವರ್ಷದಲ್ಲಿ ವಿಶ್ವಾಸ ಮತ್ತು ಗೌರವ ಹೆಚ್ಚಾಗಿದ್ದು, ಗ್ರಾಹಕ ಆಪೇಕ್ಷೆ ಪಡೆಯುವ ರೀತಿಯಲ್ಲೇ ವಸ್ತುಗಳನ್ನು ನೀಡಿದಲ್ಲಿ ಗ್ರಾಹಕರ ಸಂತೃಪ್ತನಾಗುತ್ತಾನೆ. ಹೆಚ್ಚಿನ ಹಣ ಪಡೆದಲ್ಲಿ ತೊಂದರೆಗೆ ಒಳಗಾಗುತ್ತಾನೆ. ಹಾಗಾಗಿ ಈ ಕಾಯ್ದೆ ಜಾರಿಯಲ್ಲಿ ಜಾಗೃತಿ ವಹಿಸಬೇಕು ಎಂದರು.

       ಗ್ರಾಹಕರ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿದ ಜಿ.ಎಂ.ಆನಂದಪ್ಪ, ಗ್ರಾಹಕರ ಸಂರಕ್ಷಣೆ ಕಾನೂನಿನ ಬಗ್ಗೆ ಬಹಳಷ್ಟು ಜನರಿಗೆ ಇನ್ನೂ ತಿಳಿದಿಲ್ಲ. ಈ ಕಾನೂನು ಖರೀದಿಸುವವ ಪರವಾಗಿದೆ. ಅಂಗಡಿ ಮಾಲೀಕ ಬಿಲ್ ನೀಡದೇ ಸುಳ್ಳು ಹೇಳಿದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ. 1986ರಿಂದ ಈ ಕಾನೂನು ಜಾರಿಯಲ್ಲಿದ್ದು, ಚಿತ್ರದುರ್ಗದಲ್ಲಿ ಜಿಲ್ಲಾ ಮಟ್ಟದ ಗ್ರಾಹಕರ ನ್ಯಾಯಾಲಯ ಕಾರ್ಯನಿರ್ವಹಿಸುತ್ತದೆ ಎಂದರು. ಇಲ್ಲಿ ಮುಖ್ಯವಾಗಿ ಗ್ರಾಹಕನೇ ಹೆಚ್ಚು ತೊಂದರೆಗೆ ಈಡಾಗುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು. ಈ ನ್ಯಾಯಾಲಯದಲ್ಲಿ ದಾವೆ ಹೂಡಲು ಖರೀದಿಸಿದ ವಸ್ತುವಿಗೆ ಕಡ್ಡಾಯವಾಗಿ ಬಿಲ್ ಪಡೆಯಬೇಕು.

      ಇದರ ಆಧಾರದ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಿ, ನಿಮಗೆ ಆದ ನಷ್ಟವನ್ನು ಕಂಪನಿ ಮೂಲಕ ಕೊಡಿಸಲು ಸಹಕಾರಿಯಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಭ್ಳೆ ಮಾತನಾಡಿ, ಗ್ರಾಹಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಈ ಕಾನೂನು ಜಾರಿಗೆ ತರಲಾಗಿದೆ.

        ಅನೇಕ ಸಂದರ್ಭದಲ್ಲಿ ಗ್ರಾಹಕ ತಾನು ಖರೀದಿಸಿದ ವಸ್ತುವಿಗೆ ಬಿಲ್ ಪಡೆಯುವುದಿಲ್ಲ, ಬಿಲ್ ಪಡೆದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಉಂಟಾದಲ್ಲಿ ಮಾಲೀಕನ ಮೇಲೆ ಮೊಕದ್ದಮೆ ದಾಖಲಿಸಬಹುದಾಗಿದೆ. ಇದರ ಮೂಲ ಉದ್ದೇಶ ಯಾವುದೇ ಹಂತದಲ್ಲೂ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಎದುರಾಗಬಾರದು. ಗ್ರಾಹಕ ತಾನು ಖರೀದಿಸಿದ ವಸ್ತುವನ್ನು ಅದರ ಮೌಲ್ಯಕ್ಕೆ ಅನುಗುಣವಾಗಿ ಬಳಸುವಂತಿರಬೇಕೆಂದರು. ಪ್ರಾರಂಭದಲ್ಲಿ ಕೆ.ಹನುಮಂತಪ್ಪ, ಸ್ವಾಗತಿಸಿದರು, ವಕೀಲ ತಿಪ್ಪೇಸ್ವಾಮಿ ನಿರೂಪಿಸಿದರು. 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap