ಹೊಳಲ್ಕೆರೆ:
ಮಾನವ ಸಹಜವಾಗಿ ಹುಟ್ಟಿನಿಂದ ಪಡೆದಿರುವ ನೈಸರ್ಗಿಕವಾದ ಮಾನವಹಕ್ಕುಗಳ ರಕ್ಷಣೆಗೆ ಸಂವಿಧಾನ, ಸರಕಾರ ಮತ್ತು ನ್ಯಾಯಾಂಗ ವಿವಿಧ ಅಧಿನಿಯಮಗಳಡಿ ಭದ್ರತೆ ನೀಡಿದೆ. ಹಕ್ಕುಗಳ ಉಲ್ಲಂಘನೆಯಾದರೆ ನ್ಯಾಯಯುತ ಹಕ್ಕಿಗಾಗಿ ನ್ಯಾಯಾಲಯಕ್ಕೆ ಬನ್ನಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರೇಮ ವಸಂತರಾವ್ ಪವಾರ್ ತಿಳಿಸಿದರು.
ಪಟ್ಟಣದ ಕೊಟ್ರೆನಂಜಪ್ಪ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾಸಮಿತಿ, ಅಭಿಯೋಜಕರ ಇಲಾಖೆ, ವಕೀಲರ ಸಂಘ, ಕೊಟ್ರೆ ನಂಜಪ್ಪ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಮಾನವ ಹಕ್ಕುಗಳ ರಕ್ಷಣೆಗಾಗಿ ವಿಶ್ವ ಸಂಸ್ಥೆಯ ಘೋಷಣೆಗೆ ಸಹಿ ಹಾಕಿನಿಂದಲೂ ಒಳಪಟ್ಟಿದ್ದರು 1993ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು 2005ರಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ಥಾಪಿಸುವ ಮೂಲಕ ಗುರುತರ ಜವಾಬ್ದಾರಿ ವಹಿಸಲಾಗಿದೆ ಎಂದರು.
ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಿದರೆ ಯಾರ ಹಕ್ಕುಗಳು ಉಲ್ಲಂಘನೆ ಆಗುವುದಿಲ್ಲ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿ ಮತ್ತೊಬ್ಬರ ಮಾನಹಾನಿ ಮಾಡಿದರೆ ಶಿಕ್ಷೆ ಆಗುತ್ತದೆ. ವಿಶ್ವಕ್ಕೆ ಮಾದರಿಯಾಗಿರುವ ನಮ್ಮ ಕ್ರಿಯಾಶೀ¯ ನ್ಯಾಯಾಂಗ ವ್ಯವಸ್ಥೆ ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಿಕೊಡುವಲ್ಲಿ ಹೆಸರುವಾಸಿಯಾಗಿದೆ. ಹಕ್ಕುಗಳ ಉಲ್ಲಂಘನೆಯಾದಾಗ ಬಾಧಿತರು ನ್ಯಾಯಾಲಯಕ್ಕೆ ಬಂದು ದೂರು ಸಲ್ಲಿಸಬೇಕೆಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರವಿಕುಮಾರ್ ವಿ. ಮಾತನಾಡಿ ನೆಲ್ಸನ್ ಮಂಡೇಲಾ ಹೇಳಿದ ಹಾಗೆ ಮನುಷ್ಯತ್ವವನ್ನು ರಕ್ಷಣೆ ಮಾಡುವವನು ಮಾನವನು ಎನ್ನುವ ಹಾಗೆ ಯಾವುದೇ ವ್ಯಕ್ತಿಯ ಗೌರವಕ್ಕೆ ಧಕ್ಕೆ ಆಗದಂತೆ ವರ್ತಿಸಬೇಕು. ಸಂವಿಧಾನ ರಚನಾಕಾರರು ಸಮಾನತೆ, ಗೌರವದಿಂದ ಬದುಕುವ ಹಕ್ಕು ನೀಡಿದ್ದಾರೆ. ಪ್ರತಿಯೊಬ್ಬರನ್ನು ಗೌರವಿಸಿ, ನಿಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸಿ ಎಂದು ಹೇಳಿದರು.
ವಕೀಲರಾದ ಎಸ್.ವೇದಮೂರ್ತಿ ಮಾನವ ಹಕ್ಕುಗಳ ಕಾಯ್ದೆ ಕುರಿತು, ವಕೀಲರಾದ ಎಸ್.ವಿಜಯ್ ಕಾಲ್ಕೆರೆ ನ್ಯಾಯಾಲಯದಿಂದ ಮಾನವ ಹಕ್ಕುಗಳ ರಕ್ಷಣೆ ಕುರಿತು. ಉಪನ್ಯಾಸ ನೀಡಿದರು.
ಈ ಸಚಿದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಜಿ.ಇ.ರಂಗಸ್ವಾಮಿ, ಅಪರ ಸರ್ಕಾರಿ ವಕೀಲರಾದ ಡಿ.ಜಯಣ್ಣ ಮಾತನಾಡಿದರು.
ವಕೀಲರ ಸಂಘದ ಉಪಾದ್ಯಕ್ಷ ಆರ್.ಜಗದೀಶ್, ಕಾರ್ಯದರ್ಶಿ ಜಿ.ಪಿ.ಪ್ರದೀಪ್ ಕುಮಾರ್, ಎಪಿಪಿ ಡಿ.ಪ್ರಶಾಂತ್ ಕುಮಾರ್, ಕೊಟ್ರೆ ನಂಜಪ್ಪ ಕಾಲೇಜಿನ ಪ್ರಾಚಾರ್ಯ ಹರ್ಷಿತಾ, ವಕೀಲರಾದ ಸತ್ಯನಾರಾಯಣ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
