ಪಾವಗಡ
ವಿಶ್ವ ಕಾರ್ಮಿಕ ದಿನಾಚರಣಿಯ ಪ್ರಯುಕ್ತ ಪಟ್ಟಣದ ಹೋಸ ಬಸ್ ನಿಲ್ದಾಣದ ಸಮೀಪದಲ್ಲಿ ಕಾರ್ಮಿಕ ದಿನಾಚರಣಿ ಆಚರಿಸಲಾಯಿತ್ತು.
ಶ್ರೀ ಮಾರುತಿ ಗಾರೆ ಕಾರ್ಮಿಕ ಸಂಘದ ಅದ್ಯಕ್ಷರಾದ ಮಾಬುಖಾನ್ ಮಾತನಾಡಿ ಪಟ್ಟಣದಲ್ಲಿ ಪ್ರತಿದಿನ ಐದು ಸಾವಿರಕ್ಕೂ ಹೆಚ್ಚು ದಿನಕೂಲಿ ಕಾರ್ಮಿಕರು ಕೇಲಸ ಮಾಡುತ್ತಿದ್ದು , ಸೇವೆಯ ಬದ್ರತೆ ಇಲ್ಲದೆ ಹಲವು ಕಾರ್ಮಿಕರು ಕಟ್ಟಡ ಕೇಲಸ ಮಾಡುವವೇಳೆ ಸಾವನ್ನಪ್ಪಿದ್ದು , ಹಲವು ಗಂಭೀರಗಾಯಗೊಂಡಿದ್ದು ಇಂತಹ ಕೂಲಿ ಕಾರ್ಮಿಕರಿಗೆ ಇಲಾಖೆಯಿಂದ ಇದುವರೆಗೂ ಯಾವುದೇ ಸೌಲಭ್ಯ ಸಿಗದಿರುವುದು ದುರದೃಷ್ಟಕರವಾಗಿದೆ ಎಂದು ವಿಷಾದ ವ್ಯೆಕ್ತಪಡಿಸಿದರು.
ಸಂಘದ ಕಾರ್ಯದರ್ಶಿಯಾದ ಮಲ್ಲಯ್ಯ ಮಾತನಾಡಿ ದಿನಕೂಲಿ ಹಲವು ವರ್ಷಗಳಿಂದ ಕಾರ್ಮಿಕ ಇಲಾಖೆಗೆ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ ಕಾರ್ಮಿಕರ ಸದಸ್ಯತ್ವ ಇದುವರೆಗೂ ನೀಡಿಲ್ಲ , ಇಲಾಖೆಯಿಂದ ಕಾರ್ಮಿಕರಿಗೆ ನೀಡುವ ಸೌಲಭ್ಯಗಳು ಕಾರ್ಮಿಕರ ಮಕ್ಕಳ ಮದುವೆಗೆ ಸಹಾಯದನ , ವಿದ್ಯಾರ್ಥಿ ವೇತನ , ಪಿಂಚಣಿ , ನಿವೃತ್ತಿ ವೇತನ ಇತರೆ ಯಾವುದೇ ಸೌಲಬ್ಯಗಳು ನಮ್ಮ ಕಾರ್ಮಿಕರಿಗೆ ಇದುವರೆಗೂ ಸಿಗದಿರುವುದು ದೃರದುಷ್ಟಕರವಾಗಿದ್ದು ಸರ್ಕಾರ ಈ ಬಗ್ಗೆ ಸರ್ಕಾರ ಗಮನಹರಿಸಿ ಕಾರ್ಮಿಕರ ರಕ್ಷಣೆಗೆ ನಿಲ್ಲಬೇಕಾದ ಅವಶ್ಯಕತೆ ಇದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಪದಾದಿಕಾರಿಗಳಾದ ಸಂಘದ ಮಾಜಿ ಅದ್ಯಕ್ಷರಾದ ದಾದಲೂರಪ್ಪ ,ಶಾಂತವೀರಯ್ಯ , ಶಂಕರ್ ನಾಯ್ಕ್ , ರಹಮತ್ ಹುಲ್ಲಾ , ಹನುಮಂತರಾಯಪ್ಪ ,ರಾಮಚಂದ್ರ , ಆನಂದ್ , ಕೃಷ್ಣಪ್ಪ , ಪೆದರಾಯುಡು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ