ಪಾವಗಡ
ಅಮ್ಮಾ ಅತ್ಯಂತ ಸುಂದರವಾದ ಗಟ್ಟಿಯಾದ ಶಿಲ್ಪಿ ಎಂತಹ ಒರಟು ಮಕ್ಕಳನ್ನು ತಿದ್ದಿತೀಡಿ ರೂಪ ಕೊಟ್ಟು ಸಮಾಜದಲ್ಲಿ ಸುಂದರ ಶಿಲ್ಪಿ ಮಾಡುವ ಚಾಕಚಕ್ಯತೆ ಅಮ್ಮನಿಗೆದೆ ಎಂದು ಶಿಕ್ಷಣ ಇಲಾಖೆಯ ಅಂಗವಿಕಲ ಸಂಯೋಜಕಿ ವಿಶಾಲಾಕ್ಷಿ ಯವರು ತಿಳಿಸಿದರು.
ಭಾನುವಾರ ಪಟ್ಟಣದ ರೈನ್ ಗೇಜ್ ಬಡಾವಣೆಯಲ್ಲಿರುವ ಚಿನ್ಮಯ ಇಂಟಿಗ್ರೇಟೆಡ್ ರೂರಲ್ ಡೆವಲಪ್ ಮೆಂಟ್ ಸೊಸ್ಯಟಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ತಾಯಿಗಿಂಥ- ಬಂದುವಿಲ್ಲ. ಉಪ್ಪಿಗಿಂತ ರುಚಿಯಿಲ್ಲ, ನಿಜಕ್ಕೂ ತಾಯಿಯ ನಿಸ್ವಾರ್ಥ ಸೇವೆ ಬಲು ದೊಡ್ಡದು, ಅಮ್ಮ ಅನ್ನುವ ಶಭ್ದದಲ್ಲಿ ಅಪಾರ ಶಕ್ತಿ ಇದೆ, ಮಗುವಿನ ತೊದಲ ನುಡಿಯಲ್ಲೂ ಅಮ್ಮ ಎನ್ನುತ್ತದೆ, ಅಮ್ಮಾ ಒಬ್ಬ ಶಿಕ್ಷಕಿಯಾಗಿ ಸ್ನೇಹಿತೆಯಾಗಿ ಮಕ್ಕಳಿಗೆ ದೈರ್ಯ ತುಂಬುತ್ತಾಳೆ ಎಂದು ಅಮ್ಮನ ತ್ಯಾಗದ ಬಗ್ಗೆ ತಿಳಿಸಿದರು.
ಚಿನ್ಮಯ ಸಂಸ್ಥೆಯ ಅಧ್ಯಕ್ಷ ಸತ್ಯಲೋಕೇಶ್ ಮಾತನಾಡಿ,ವಿಘ್ನಖಾರಕ ವಿನಾಯಕ ತಂದೆ- ತಾಯಿಯರನ್ನು ಮೂರು ಬಾರಿ ಪ್ರದಕ್ಷಣಿ ಹಾಕಿ, ಪ್ರಪಂಚವನ್ನೆಲ್ಲಾ ಸುತ್ತಿ ಬಂದಿದ್ದೇನೆ ಎಂದು ಸಮಸ್ಕರಿಸಿದ್ದಾನೆ , ತಾಯಿಯೇ ಮೊದಲು ಗುರುವು, ತಾಯಿಯ ಸೇವೆ ನಿಸ್ವಾರ್ಥ, ಅಮ್ಮ ತನ್ನ ಎಲ್ಲಾ ನೋವನ್ನು ಮರೆತು ಮಕ್ಕಳು ತನ್ನ ಗಂಡ ಪ್ರಪಂಚ ಎಂದು ಜೀವಿಸುತ್ತಾಳೆ, ನಾವು ನಡೆದಾಡುವಾಗ ಎಡವಿದರೂ ಅಮ್ಮಾ ಎಂದು ಕೂಗುತ್ತೇವೆ, ಸನ್ಯಾಸ ಸ್ವೀಕರಿಸಿದ ಸನ್ಯಾಸಿಯೂ ಸಹ ತಮ್ಮ ಅಮ್ಮನಿಗೆ ನಮಸ್ಕಾರ ಹೇಳುತ್ತಾನೆ, ತಾಯಿಯ ಶಕ್ತಿ ದೈವಸ್ವರೂಪ ಎಂದು ತಾಯಿಯ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಿರುಚಿತ್ರಗಳ ನಿರ್ದೇಶಕ ಶೀತಲ್, ಶಿಕ್ಷಕಿಯರಾದ ಮಂಗಳಗೌರಮ್ಮ, ಲಕ್ಷ್ಮೀದೇವಿ, ಲಕ್ಷ್ಮೀನರಸಮ್ಮ, ಕಾವೇರಿ, ಮತ್ತಿತರಿದ್ದರು. ಸಮಾರಂಭದಲ್ಲಿ ಹಾಜರಿದ್ದ ಮಕ್ಕಳಿಗೆ ಸಹಿ ವಿತರಿಸಲಾಯಿತು.