“ವಿಶ್ವ ಶೌಚಾಲಯ ದಿನಾಚರಣೆ”

ಹರಿಹರ :

        ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಹಾಗೂ ಎಷಿಯನ್‍ಅಭಿವೃದ್ದಿ ಬ್ಯಾಂಕ್ ನೆರವಿನ ಸಹಯೋಗದೊಂದಿಗೆಕರ್ನಾಟಕನೀರು ಸರಬರಾಜು ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ -ಜಲಸಿರಿ, ನಗರಸಭೆಹರಿಹರ ಹಾಗೂ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ  ರಾಣೇಬೆನ್ನೂರುಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂದುಬೆಳಗ್ಗೆ 10.30ಘಂಟೆಗೆಕಾಳಿದಾಸ ಪ್ರೌಡಶಾಲಾಆವರಣದಲ್ಲಿ“ವಿಶ್ವ ಶೌಚಾಲಯ ದಿನಾಚರಣೆ”ಯನ್ನು ಹಮ್ಮಿಕೊಳ್ಳಲಾಯಿತು.

        ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದನಗರಸಭೆ ಸದಸ್ಯರು ಶ್ರೀ ಬಿ ಮಹಮ್ಮದ್ ಸಿಗ್ಗಬತ್‍ವುಲ್ಲಾ ಇವರು ಮಾತನಾಡುತ್ತಾಬಯಲು ಶೌಚದಿಂದಕಾಲರಾ, ಮಲೇರಿಯಾ ಮುಂತಾದಮಾರಣಾಂತಿಕ ಕಾಯಿಲೆಗಳು ಹರಡುತ್ತಿದ್ದು ಇವುಗಳಿಂದ ಮುಕ್ತಿ ಹೊಂದಲು ಶೌಚಾಲಯವನ್ನು ಬಳಸಿ ಆರೋಗ್ಯವಂತವರಾಗಿಎಂದುಕರೆ ನೀಡಿದರು.07 ದಿನಕ್ಕಿಂತ ಹೆಚ್ಚಿಗೆ ನೀರನ್ನು ಶೇಖರಿಸಿಟ್ಟರೆ ಅದರಲ್ಲಿ ಲಾರ್ವಾ ಸೋಳ್ಳೆಗಳು ಉತ್ಪತ್ತಿಯಾಗಿ ಮಾರಣಾಂತಿಕಕಾಯಿಲೆಯಾದಡೇಗ್ಯೂಜ್ವರಹರಡಬಹುದು ಆದ್ದರಿಂದ ನೀರನ್ನು ಸುರಕ್ಷಿತವಾಗಿಡಿ,ಮುಂದಿನ ದಿನಗಳಲ್ಲಿ ನಗರಸಭೆ ವ್ಯಾಪ್ತಿಯಲ್ಲಿ 24X7 ನಿರಂತರ ನೀರು ಸರಬರಾಜುಯೋಜನೆಜಾರಿಗೆ ಬರುತ್ತಿದ್ದು ನೀರನ್ನು ಶೇಖರಣೆ ಮಾಡಿಇಡುವ ಸಂದರ್ಭಉದ್ಬವಿಸುವುದಿಲ್ಲ ನಿಮ್ಮ ನಳಗಳಲ್ಲಿ ನಿರಂತರ ನೀರು ಸರಬರಾಜುಆಗುತ್ತದೆಎಂದು ತಿಳಿಸಿದರು.

          ಶ್ರೀ ಮಾಲತೇಶ ಹೊನ್ನಮ್ಮನವರತಂಡದ ಮುಖ್ಯಸ್ಥರು ಪ್ರಾಸ್ಥಾವಿಕವಾಗಿಮಾತನಾಡುತ್ತಾಬಯಲುಬಹಿರದೆಸೆಯಿಂದ 100 ಗ್ರಾಂ ನಷ್ಟು ಮಲದಿಂದ ಸುಮಾರು 10 ಲಕ್ಷ ವೈರಾಣುಗಳು ಸೇರಿಕೊಂಡು ಮನುಷ್ಯನಆರೋಗ್ಯದ ಮೇಲೆ ದುಷ್ಪರಿಣಾಮಉಂಟು ಮಾಡುತ್ತವೆ. ನಿಮಗಿಗಾಗಲೆ ಅರಿವಿನಂತೆಕಾಲರಾ, ಮಲೇರಿಯಾ ಮುಂತಾದಭಯಾನಕ ಕಾಯಿಲೆಗಳು ಹರಡುತ್ತವೆ,ಆದ್ದರಿಂದ ಘನ ಸರ್ಕಾರದ ಯೋಜನೆಯಾದ ಸ್ವಚ್ಚ ಭಾರತ ಮಿಷನ್ ಮತ್ತು  ಅ ಯೋಜನೆಯ ಒ.ಬಿ.ಎ ಕಾರ್ಯಕ್ರಮದ ಮುಖ್ಯ ಉದ್ದೇಶ ಬಯಲು ಶೌಚಮುಕ್ತ ನಗರವನ್ನಾಗಿಸುವುದರಿಂದ ಪ್ರತಿಯೊಬ್ಬರು ಶೌಚಾಲಯವನ್ನು ಹೊಂದಿ ಅದನ್ನು ಸಮರ್ಪಕವಾಗಿ ಬಳಸಬೇಕೆಂದು ತಿಳಿಸಿದರು.

       ನಗರಸಭೆ ಸದಸ್ಯರಾದ ಶ್ರೀ ಮಹೇಶ ಕೋಡಬಾಳ ಇವರು ಮಾತನಾಡುತ್ತಾ ಮಹಿಳೆಯರ ಆತ್ಮಗೌರವಕ್ಕೆ ಶೌಚಾಲಯವನ್ನು ಬಳಸಿ ಮಹಿಳೆಯರಿಗೆ ಬಯಲು ಬಹಿರದೆಸೆಯಿಂದಾಗುವ ಅನಾಹುತಗಳ ಬಗ್ಗೆ ಮನವರಿಕೆ ಮಾಡಿ ಮಹಿಳೆಯರ ದೇಹಕ್ಕೆ ಬಟ್ಟೆ ಎಷ್ಟು ಮುಖ್ಯವೋ ಅಷ್ಟೆ ಶೌಚಾಲಯವು ಕೂಡಾ ಅತಿ ಮುಖ್ಯವಾಗಿದೆ, ಹಾಗೆ ನಿಮ್ಮ ಮಕ್ಕಳಿಗೂ ಮನೆ ಮಂದಿಗೂ ಶೌಚಾಲಯ ಬಳಕೆಯ ಮಹತ್ವವನ್ನು ತಮ್ಮ ತಮ್ಮ ಮನೆಗಳಲ್ಲಿ ತಿಳಿಸಿಬೇಕು ಎಂದರು.

        ಕಾಳಿದಾಸ ಪ್ರೌಡಶಾಲೆಯ ಸಹ ಕಾರ್ಯದರ್ಶಿಗಳಾದ ಶ್ರೀ ಎಸ್‍ ಎನ್‍ ಅಂಜನಪ್ಪ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯೊಪಾಧ್ಯಾಯರಾದ ಶ್ರೀ ಕೆ ಎಚ್ ನಿಜಲಿಂಗಪ್ಪ ಸಂಪನ್ಮೂಲ ವ್ಯಕ್ತಿಗಳಾಗಿ, ಪ್ರೌಡಶಾಲೆ ಶಿಕ್ಷಕರು, ನೀಡ್ಸ್ ಸಂಸ್ಥೆಯ ಸಿಬ್ಬಂದಿಗಳು ಹಾಗೂ 75 ವಿದ್ಯಾರ್ಥಿಗಳು ಭಾಗವಹಿಸಿದ್ದರು.

       ಕಿರಿಯ ಅಭಿಯಂತರರಾದ ಶ್ರೀ ಸುರೇಶ್ ಕ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು .ಶ್ರೀ ಬಸವರಾಜ ಸಣ್ಣಿಂಗಮ್ಮ ನವರ ಕಾರ್ಯಕ್ರಮದ ಸ್ವಾಗತ ಮಾಡಿದರು.ಶ್ರೀಮತಿ ಉಮಾಎಸ್ ಭಾವಿಮಠ ಇವರು ವಂದನಾರ್ಪಣೆ ಮಾಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap