ಒಮ್ಮೆ ಬರೆಯುವುದು ಹತ್ತು ಬಾರಿ ಓದಿಗೆ ಸಮ

ಹುಳಿಯಾರು

     ಒಮ್ಮೆ ಬರೆಯುವುದು 10 ಬಾರಿ ಓದಿಗೆ ಸಮನಾಗಿದ್ದು ವಿಷಯ ಕಂಠಪಾಠ ಮಾಡುವುದಕ್ಕಿಂದ ಓದಿದ ವಿಷಯವನ್ನು ಒಮ್ಮೆ ಬರೆಯಿರಿ ಎಂದು ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಸನ್ನಕುಮಾರ್ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

        ಹುಳಿಯಾರಿನ ಟಿಆರ್‍ಎಸ್‍ಆರ್ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸಾಂಸ್ಕøತಿಕ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

       ಇತ್ತೀಚಿನ ದಿನಗಳಲ್ಲಿ ಗ್ರಾಫಾಲಜಿ ಟೆಕ್ನಿಕ್ ಓದು ಹೆಚ್ಚು ಜನಪ್ರಿಯ ಮತ್ತು ಉಪಯುಕ್ತವಾಗುತ್ತಿದೆ. ಬಹುತೇಕ ಟಾಪರ್ಸ್ ಗ್ರಾಫಾಲಜಿ ಟೆಕ್ನಿಕ್‍ನಲ್ಲೇ ಓದುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಗ್ರಾಫಾಲಜಿ ಟೆಕ್ನಿಕ್ ಓದು ಎಂದರೆ ಯಾವುದೇ ವಿಷಯದ ಒಂದು ಪಾಠವನ್ನು ಮಾತ್ರ ಸಂಪೂರ್ಣ ಓದಿ ನಂತರ ಪುಸ್ತಕ ಮುಚ್ಚಿಟ್ಟು ಓದಿದ ಅಷ್ಟೂ ಪಾಠವನ್ನು ಬರೆಯುವುದಾಗಿದೆ. ಬರೆಯುವ ಮದ್ಯೆ ಓದಿದ ಪಾಠ ಮರೆತರೆ ಪುನಃ ಮತ್ತೆ ಪಾಠ ಓದಿ ನಂತರ ಬರೆಯಬೇಕು. ಹೀಗೆ ಸಂಪೂರ್ಣ ಒಂದೂ ತಪ್ಪಿಲ್ಲದೆ, ಯಾವುದನ್ನೂ ಬಿಡದೆ ಬರೆಯುವಷ್ಟರ ಮಟ್ಟಿಗೆ ಸಿದ್ಧವಾಗಬೇಕು ಎಂದು ವಿವರಿಸಿದರು.

         ಹುಳಿಯಾರು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಲ್.ಆರ್.ಚಂದ್ರಶೇಖರ್ ಅವರು ಮಾತನಾಡಿ ಸ್ಮಾರ್ಟ್ ಪೋನ್‍ನಲ್ಲಿ ಸನ್ಯಾಸಿಯ ವ್ರತ ಭಂಗ ಮಾಡುವಷ್ಟು ಅಶ್ಲೀಲ ಮೆಸೇಜ್‍ಗಳು, ವಿಡಿಯೋಗಳು ಬರುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸ್ಮಾರ್ಟ್ ಪೋನ್‍ಗಳೇ ಮಕ್ಕಳ ಸ್ನೇಹಿತರಾಗುತ್ತಿದ್ದಾರೆ. ಇದು ಆತಂಕಕಾರಿ ವಿಷಯವಾಗಿದ್ದು ಪೋಷಕರು ಎಚ್ಚರ ವಹಿಸದಿದ್ದರೆ ಮಕ್ಕಳು ಪೋಷಕರ ಕೈಗೆ ಸಿಗದಂತ್ತಾಗುತ್ತಾರೆ ಎಂದು ಎಚ್ಚರಿಸಿದರು.

         ವಾಸವಿ ವಿದ್ಯಾ ಸಂಸ್ಥೆ ಉಪಾಧ್ಯಕ್ಷ ಎಸ್.ನಟರಾಜಗುಪ್ತಾ ಅವರು ಮಾತನಾಡಿ ಕಳೆದು ಹೋದ ಸಮಯ ಏನೇ ಕೊಟ್ಟರೂ ಸಿಗುವುದಿಲ್ಲ. ಹಾಗಾಗಿ ಪ್ರತಿದಿನ ಪ್ರತಿ ಕ್ಷಣ ಸಮಯದ ಸದ್ಬಳಕೆ ಮಾಡಿಕೊಂಡವರು ಸಾಧಕರಾಗಿ ಹೊರ ಹೊಮ್ಮುತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿತ್ಯ ತಮ್ಮ ಖಾತೆಗೆ ಜಮೆ ಆಗುವ 24 ಗಂಟೆಗಳನ್ನು ತಮ್ಮ ವಿದ್ಯಾಭ್ಯಾಸಕ್ಕೆ ಹೇಗೆ ಬಳಕೆ ಮಾಡಿಕೊಳ್ಳಬೇಕೆಂಬ ಪ್ಲಾನ್ ಮಾಡಿಕೊಂಡು ಓದುವುದು ಒಳಿತು ಎಂದರು.

          ವಾಸವಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಲ್.ಆರ್.ಬಾಲಾಜಿ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಅಂಕಗಳಿಸುವ ಯಂತ್ರಗಳನ್ನಾಗಿ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ಕೊಡಬೇಕಿದೆ. ಬಾಲ್ಯದಲ್ಲೇ ಸಂಸ್ಕಾರ ಸಿಕ್ಕರೆ ದೇಶಕ್ಕೆ ಸತ್ಪ್ರಜೆಗಳಾಗುತ್ತಾರೆ ಎನ್ನುವುದಕ್ಕೆ ಸಿದ್ಧಗಂಗಾಶ್ರೀಗಳ ಅಂತ್ಯಸಂಸ್ಕಾರದ ವೇಳೆ ಶಿವಣ್ಣ ಎನ್ನುವ ಆ ಮಠದ ವಿದ್ಯಾರ್ಥಿ ಅನ್ನ ಚಲ್ಲುವವರಿಗೆ ಅನ್ನದ ಮಹತ್ವ ತಿಳಿಸುತ್ತಿದ್ದದ್ದು ನಿದರ್ಶನ ಎಂದರು.

          ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಟಿ.ಎಲ್.ಬಾಲೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕರುಗಳಾದ ಕೆ.ಎಂ.ಗಂಗಾಧರಯ್ಯ, ಮಹೇಶ್, ಸಹಕಾರ್ಯದರ್ಶಿ ಎಂ.ಎಸ್.ನಾಗರಾಜು, ಕೋಶಾಧ್ಯಕ್ಷ ಟಿ.ಎಸ್.ರವೀಂದ್ರ, ನಿರ್ದೇಶಕರುಗಳಾದ ಎಂ.ಎಸ್.ವಸಂತಕುಮಾರ್, ಟಿ.ಎಸ್.ಪ್ರಶಾಂತ್, ಟಿ.ಕೆ.ಅಜಯ್, ಚೇತನ್, ಬಿ.ಆರ್.ಪ್ರವೀಣ್, ಲಕ್ಷ್ಮೀರಾಜ್, ಶಿಲ್ಪಬಾಲಾಜಿ, ಅನುಷಾ, ಚಂದನಾ, ಉಮಾನಾಗರಾಜ್ ಮತ್ತಿತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link