ತುರುವೇಕೆರೆ:
ಸ್ಥಳೀಯ ಪಟ್ಣಣ ಪಂಚಾಯತ್‍ನ ಸ್ಥಾಯಿ ಸಮಿತಿಯ ಅದ್ಯಕ್ಷರಾಗಿ ಟಿ.ಪಿ.ಮಹೇಶ್(ಯಜಮಾನ್) ಅವಿರೋಧವಾಗಿ ಮೂರನೇ ಬಾರಿಗೆ ಮರು ಆಯ್ಕೆಗೊಂಡರು.
ಪಟ್ಣಣದ 1 ನೇ ವಾರ್ಡ್‍ನ ಸದಸ್ಯರಾಗಿ ಆಯ್ಕೆಯಾಗಿರುವ ಯಜಮಾನ್ ಮಹೇಶ್ ಚುನಾಯಿತ ಸದಸ್ಯರ ನಡುವಿನ ಒಡಂಬಡಿಕೆಯಂತೆ ಕಳೆದ ಕೆಲ ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರು. ರಾಜೀನಾಮೆಯಿಂದ ತೆರವಾಗಿದ್ದ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷೆ ಪಟ್ಟರು. ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಅಂತಿಮವಾಗಿ ಯಜಮಾನ್ ಮಹೇಶ್‍ರವರಿಗೆ ಮತ್ತೆ ಸ್ಥಾಯಿ ಸಮಿತಿ ಅದ್ಯಕ್ಷಗಾದಿ ಒಲಿದು ಬಂತು. ಚುನಾವಣಾಧಿಕಾರಿಯಾಗಿ ಮುನಿಯಪ್ಪ ಕರ್ತವ್ಯ ನಿರ್ವಹಿಸಿದರು.
ಸ್ಥಾಯಿ ಸಮಿತಿ ಅದ್ಯಕ್ಷರಾಗಿ ಪುನರಾಯ್ಕೆಗೊಂಡ ಯಜಮಾನ್ ಮಹೇಶ್‍ರವರನ್ನು ಪ.ಪಂ.ಅಧ್ಯಕ್ಷ ಲಕ್ಷ್ಮೀನರಸಿಂಹ, ಮಾಜಿ ಅಧ್ಯಕ್ಷ ಟಿ.ಎನ್.ಶಶಿಶೇಖರ್, ಶ್ರೀನಿವಾಸ್, ನವ್ಯಪ್ರಕಾಶ್, ತಬಸುಮ್, ನಾಮಿನಿ ಸದಸ್ಯರಾದ ರುದ್ರೇಶ್, ಕೃಷ್ಣಮೂರ್ತಿ ಹಾಗು ಆತ್ಮೀಯರಾದ ಗಣೇಶ್, ಬಸವೇಶ್ವರ ಸಂಘದ ಅದ್ಯಕ್ಷ ಮಲ್ಲಿಕಾರ್ಜುನ್, ಬಾಬು, ದೇವರಾಜು, ನರೇಂದ್ರ ಸೇರಿದಂತೆ ಇತರರು ಅಭಿನಂದಿಸಿ ಶುಭ ಹಾರೈಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ