2 ತಿಂಗಳಲ್ಲಿ ಯಶ್ ತಾಯಿ ಮನೆ ಖಾಲಿ ಮಾಡಬೇಕು ಹೈಕೋರ್ಟ್ ಸೂಚನೆ…!!

ಬೆಂಗಳೂರು:

     ರಾಕಿಂಗ್ ಸ್ಟಾರ್  ಯಶ್ ಅವರು ಈ ಮುಂಚೆ ವಾಸವಾಗಿದ್ದ ಕತ್ರಿಗುಪ್ಪೆಯ ಬಾಡಿಗೆ ಮನೆಯನ್ನು ಖಾಲಿ ಮಾಡಲು ಹೈಕೋರ್ಟ್‌ ಎರಡು ತಿಂಗಳು ಕಾಲಾವಕಾಶ ನೀಡಿ ಆದೇಶ ನೀಡಿದೆ.

      ಮನೆ ಖಾಲಿ ಮಾಡಲು ಕನಿಷ್ಠ  ತಮಗೆ 6 ತಿಂಗಳಾದರು ಕಾಲಾವಕಾಶ ನೀಡಬೇಕು ಎಂದು ಪುಷ್ಪಾ(ಯಶ್ ತಾಯಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾ.ಬಿ.ವಿ.ನಾಗರತ್ನ ಹಾಗೂ ನ್ಯಾ.ಬಿ.ಎಂ.ಶ್ಯಾಮ್‌ ಪ್ರಸಾದ್‌ ಅವರಿದ್ದ ವಿಭಾಗೀಯ ಪೀಠ ಮಾ.31ರೊಳಗೆ ಮನೆ ಖಾಲಿ ಮಾಡಬೇಕು ಎಂದು ನ್ಯಾಯಪೀಠ ಆದೇಶ ನೀಡಿತ್ತು ಆದರೆ, 6 ತಿಂಗಳು ಕಾಲಾವಕಾಶ ಕೋರಿ ಪುಷ್ಪಾ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

      ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಹೈಕೋರ್ಟ್‌ ಆದೇಶದಂತೆ ಇದೇ ತಿಂಗಳ 31ರಂದು ಮನೆ ಖಾಲಿ ಮಾಡಬೇಕಿದೆ. ಆದರೆ, ಪುಷ್ಪಾ ಅವರು ಹಾಸನದಲ್ಲಿ ಮನೆ ನಿರ್ಮಿಸುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳಲು 6 ತಿಂಗಳು ಸಮಯ ಹಿಡಿಯಬಹುದು. ಹೀಗಾಗಿ ಮನೆ ಖಾಲಿ ಮಾಡಲು ನೀಡಿದ್ದ ಕಾಲಾವಕಾಶವನ್ನು ಮತ್ತೆ 6 ತಿಂಗಳಿಗೆ ವಿಸ್ತರಿಸಬೇಕೆಂದು ಮನವಿ ಮಾಡಿದರು. ಆದರೆ, 6 ತಿಂಗಳು ಕಾಲಾವಕಾಶ ನೀಡಲು ಮನೆ ಮಾಲೀಕ ಡಾ. ಮುನಿಪ್ರಸಾದ್‌ ಒಪ್ಪಿಲ್ಲ.

      ಕೊನೆಗೆ 2 ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಲು ಸಮ್ಮಿತಿಸಿದರು. ಅದರಂತೆ ಮೇ 31ರೊಳಗೆ ಮನೆ ಖಾಲಿ ಮಾಡಲು ಕಾಲಾವಕಾಶ ನೀಡಿ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಮುಂದೂಡಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap