ಬೆಂಗಳೂರು:
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಆಕ್ಷೇಪ.ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಇನ್ನೂ ಖಾಲಿಯಾಗಿಲ್ಲ.ಹುದ್ದೆ ತೆರವಾಗುವ ಮೊದಲೇ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ.ಮೇಲಾಗಿ ರಾಜ್ಯಾಧ್ಯಕ್ಷ ಹುದ್ದೆಗೆ ಯತ್ನಾಳ್ ಮಾತ್ರವಲ್ಲ ಹಲವು ಆಕಾಂಕ್ಷಿಗಳಿದ್ದಾರೆ. ಇದೇ ವೇಳೆ ಎಂ.ಬಿ.ಪಾಟೀಲರು ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ .
ಹಾಗಾಗಿ ಅವರು ಬಿಜೆಪಿಗೆ ಬಂದು ಮಾಡುವುದೇನಿದೆ.ಯಡಿಯೂರಪ್ಪ ಆರೋಗ್ಯವಾಗೇ ಇದ್ದಾರೆ.ಎಂ.ಬಿ.ಪಾಟೀಲರು ಬಿಜೆಪಿಗೆ ಬಂದರೂ ಅವರಿಗೆ ಇಲ್ಲಿ ಮುಖ್ಯಮಂತ್ರಿ ಹುದ್ದೆ ಸಿಗೋದಿಲ್ಲ…ಎಂ.ಬಿ.ಪಾಟೀಲರನ್ನು ಬಿಜೆಪಿಗೆ ಆಹ್ವಾನಿಸುವುದಾಗಿ ಹೇಳಿದ್ದ ಯತ್ನಾಳ್ ಗೆ ಪ್ರಭಾಕರ ಕೋರೆ ಟಾಂಗ್.