ಜಗಳೂರು :
ಅಣಬೂರು ಗ್ರಾಮದ ಗುಡ್ಡದ ಆಂಜನೇಯ ದೇವಸ್ಥಾನಕ್ಕೆ ಯಾತ್ರಿನಿವಾಸ ಹಾಗೂ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾತಿಗೆ ಶ್ರಮಿಸಲಾಗುವುದು ಎಂದು ಶಾಸಕ ಎಸ್.ವಿ.ರಾಮಚಂದ್ರ ಭರವಸೆ ನೀಡಿದರು.ತಾಲೂಕು ಅಣಬೂರು ಗ್ರಾಮದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಹಿಂದೆ ನನ್ನ ಅವಧಿಯಲ್ಲಿ ಸಿಸಿ ರಸ್ತೆ, ಚರಂಡಿ, ಹೈಮಾಸ್ಟ್ ದೀಪ ಸೇರಿದಂತೆ ಸಾಕಷ್ಟು ಅಭಿವೃದ್ದಿಗಳನ್ನು ಮಾಡಿದ್ದೇನೆ. ಸರ್ಕಾರದ ನಿರ್ಲಕ್ಷತೆಯಿಂದ ಜಗಳೂರು ತಾಲ್ಲೂಕು ಬರಪೀಡಿತ ಪ್ರದೇಶ ಪಟ್ಟಿಯಿಂದ ಬಿಟ್ಟು ಹೋಗಿದೆ. ಮಳೆ ಇಲ್ಲದೇ ಕ್ಷೇತ್ರದ ಜನರು ಗುಳೆ ಹೋಗುತ್ತಿದ್ದು, ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ, ಆದ್ದರಿಂದ ಇನ್ನೊಂದು ವರ್ಷದಲ್ಲಿ ಗಾರ್ಮೆಂಟ್ ಕಾರ್ಖಾನೆ ನಿರ್ಮಿಸುವ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಲಾಗುವುದು ಹೇಳಿದರು. ಮಾಜಿ ಶಾಸಕರು ಬರ ಪೀಡಿತ ಪಟ್ಟಿಯಿಂದ ಜಗಳೂರು ಬಿಟ್ಟಿರುವುದಕ್ಕೆ ಜನಪ್ರತಿನಿಧಿಗಳೇ ಕಾರಣ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಅವರದ್ದೇ ಸರ್ಕಾರವಿದೆ ಕ್ಷೇತ್ರದ ಬಗ್ಗೆ ಕಾಳಜಿ ಇದ್ದರೆ ಅವರ ಸರ್ಕಾರದ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸೇರ್ಪಡೆಗೊಳಿಸಲಿ, 5 ವರ್ಷಗಳ ಕಾಲ ಕ್ಷೇತ್ರವನ್ನು ಲೂಟಿ ಮಾಡಿದ್ದಾರೆ ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ವಿರುದ್ದ ಆರೋಪಿಸಿದರು.
ಕೆಲವೇ ತಿಂಗಳಲ್ಲಿ ಸಂಸದರ ಚುನಾವಣೆ ಬರಲಿದ್ದು ನನ್ನ ಹಾಗೂ ಮೋದಿ ಕೈ ಬಲಪಡಿಸಲು ಕ್ಷೇತ್ರದ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕಾಗಿದೆ. ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇಲ್ಲದಿದ್ದರೂ ಹೋರಾಟ ಮಾಡುವ ಮೂಲಕ ಭದ್ರಾ ಮೇಲ್ದಂಡೆ ಯೋಜನೆಯನ್ನು ತಾಲೂಕಿಗೆ ತಂದೇ ತರುತ್ತೇನೆ, ಈ ಹಿಂದೆ ಅಧಿಕಾರ ಇಲ್ಲದಿದ್ದರೂ 5 ವರ್ಷ ನಿಮ್ಮ ಜೊತೆಯಲ್ಲೇ ಇದ್ದೇನೆ, ಗೆದ್ದರೂ ನಿಮ್ಮ ಜೊತೆಯಲ್ಲೇ ಇದ್ದೇನೆ, ಈ ರಾಮಚಂದ್ರ ನಿಮ್ಮ ಮನೆ ಮಗ, ಚುನಾವಣೆ ಸಂದರ್ಭದಲ್ಲಿ ನನ್ನನ್ನು ಸೋಲಿಸಲು ಇಲ್ಲಸಲ್ಲದ ಆರೋಪ ಮಾಡಿದರು ಇಂದು ಮನೆ ಸೇರಿದ್ದಾರೆ ಎಂದು ಹೇಳಿದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 45 ಕ್ಕೂ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದ ಅಭವೃದ್ದಿಗೆ ಶ್ರಮಿಸುತ್ತಿದ್ದಾರೆ. ದೇಶದ ಉಳಿವಿಗಾಗಿ ಮತ್ತು ಅಭಿವೃದ್ದಿಗಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡಬೇಕಾಗಿದೆ. ಪಕ್ಷ ಯಾರಿಗೇ ಟಿಕೇಟ್ ನೀಡಿದರು ಪಕ್ಷದ ಗೆಲುವಿಗೆ ಶ್ರಮಿಸಬೇಕು. ಕ್ಷೇತ್ರದ ಕೆರೆಗಳಿಗೆ ಕಾಲುವೆ ಮೂಲಕ ನೀರು ಹರಿಸಲು ಶ್ರಮಿಸಲಾಗುವುದು. ಚಿತ್ರದುರ್ಗದಿಂದ ಹೊಸಪೇಟೆಗೆ 4 ಪಥದ ರಸ್ತೆ ಅಭಿವೃದ್ದಿಗೆ 1300 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಲು ಶ್ರಮಿಸಲಾಗಿದೆ ಎಂದರು.
ಶಾಸಕ ಎಸ್.ವಿ.ರಾಮಚಂದ್ರ ಅವರನ್ನು ಅತ್ಯಂತ ಮತಗಳನ್ನು ಗೆಲ್ಲಿಸಿದ್ದು, ಇಂದು ಶಾಸಕರಾಗಿದ್ದಾರೆ, ಈ ಗೆಲುವಿನ ಹಿಂದೆ ಅವರ ಪತ್ನಿ ಇಂದಿರಾರಾಮಚಂದ್ರ ಅವರ ಶ್ರಮ ಹೆಚ್ಚಿದೆ ಎಂದು ಹೇಳಿದರು. ಕ್ಷೇತ್ರದಲ್ಲಿ ಶಾಸಕ ಎಸ್.ವಿ.ರಾಮಚಂದ್ರಪ್ಪನ ಶಾಸಕ ಸ್ಥಾನ ಹೋಗುತ್ತದೆ ಎಂದು ಗಾಳಿ ಸುದ್ದಿ ಹರಿದಾಡುತ್ತಿದ್ದು, ಇದಕ್ಕೆಲ್ಲ ಕಿವಿಗೊಡಬೇಡಿ, ಇನ್ನು 5 ವರ್ಷಗಳ ಕಾಲ ರಾಮಚಂದ್ರನೇ ಶಾಸಕ ಎಂದು ಹೇಳಿದರು.
ಈ ವೇಳೆ ಅಣಬೂರು ಗ್ರಾಮಸ್ಥರು ಶಾಸಕ ಎಸ್.ವಿ.ರಾಮಚಂದ್ರ ಹಾಗೂ ಇಂದಿರಾರಾಮಚಂದ್ರ ಅವರನ್ನು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಅಣಬೂರು ಮಠದ ಕೊಟ್ರೇಶ್ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಸದಸ್ಯ ಸಿದ್ದೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಡಿ.ವಿ.ನಾಗಪ್ಪ, ನಿವೃತ್ತ ಶಿಕ್ಷಕ ರುದ್ರಮುನಿ, ಎಸ್ಟಿ ಮೋರ್ಚದ ಅಧ್ಯಕ್ಷ ನಿಜಲಿಂಗಪ್ಪ, ಸೋಮನಹಳ್ಳಿ ಶ್ರೀನಿವಾಸ್, ಗ್ರಾಮ ಪಂಚಾಯ್ತಿ ಸದಸ್ಯರಾದ ಗುಡ್ಡಪ್ಪ, ಜಯ್ಯಣ್ಣ, ತಿಪ್ಪೇಶ್, ಗ್ರಾಮಸ್ಥರಾದ ಎಂ.ಎಸ್.ಪಟೇಲ್, ಉಮೇಶ್, ರಾಜಣ್ಣ, ಮಲ್ಲಿಕಾರ್ಜುನ್, ವಿನೋದ್, ಅಣ್ಣಪ್ಪ ಶಿವಕುಮಾರ್ ಸೇರಿದಂತೆ ನಾಗೇಂದ್ರ, ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ