ಬೆಂಗಳೂರು
ಸಚಿವ ಸಂಪುಟ ವಿಸ್ತರಣೆ ದಿನಾಂಕ ಘೋಷಣೆ ಮಾಡುವ ಮೂಲಕ ಸ್ವಲ್ಪಮಟ್ಟಿಗೆ ನಿರಾಳವಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ಇದೀಗ ತಮ್ಮಗಮನವನ್ನು ಬಜೆಟ್ ತಯಾರಿಯತ್ತ ಕೇಂದ್ರೀಕರಿಸಿದ್ದಾರೆ.
ಬಜೆಟ್‍ಪೂರ್ವತಯಾರಿ ಬಗ್ಗೆ ಕಳೆದ ಒಂದು ತಿಂಗಳಿನಿಂದಲೇ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸುತ್ತಿರುವ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆಯ ಒತ್ತಡಕ್ಕೆ ಸಿಲುಕಿ ಕೆಲ ದಿನಗಳ ಮಟ್ಟಿಗೆ ಈ ಸಭೆಗಳನ್ನು ಮುಂದೂಡಿದ್ದರು.
ಗುರುವಾರ ಸಂಪುಟ ವಿಸ್ತರಣೆಆಗಲಿದೆಎಂದು ಹೇಳಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಇಂದು ಉನ್ನತ ಶಿಕ್ಷಣ ಮಾಹಿತಿ, ತಂತ್ರಜ್ಞಾನ, ಜೈವಿಕತಂತ್ರಜ್ಞಾನ, ವಿಜ್ಞಾನ ಮತ್ತುತಂತ್ರಜ್ಞಾನ, ವೈದ್ಯಕೀಯ ಶಿಕ್ಷಣ, ಕೃಷಿ, ಸಾರಿಗೆ, ತೋಟಗಾರಿಕೆ ಮತ್ತುರೇಷ್ಮೆ, ವಸತಿ, ಕಂದಾಯ, ಪೌರಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳ ಇಲಾಖೆಗಳ ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವಭಾವಿ ಸಭೆಯನ್ನು ನಡೆಸಿದರು.
ಕೆಪಿಸಿಎಲ್‍ನ್ನು ಪ್ರಧಾನಕಚೇರಿ ಶಕ್ತಿಭವನದಲ್ಲಿಇಂದು ಬೆಳಿಗ್ಗೆಯಿಂದಲೇ ಮುಖ್ಯಮಂತ್ರಿಗಳು ವಿವಿಧ ಇಲಾಖೆಗಳ ಸಚಿವರು ಹಾಗೂ ಉನ್ನತಾಧಿಕಾರಿಗಳ ಜತೆ ಬಜೆಟ್ ಸಭೆ ನಡೆಸಿ ಪ್ರತಿ ಇಲಾಖೆಗಳ ಅನುದಾನ ಬೇಡಿಕೆಗಳ ಬಗ್ಗೆ ಮಾಹಿತಿಚರ್ಚೆ ನಡೆಸಿದರು.
ಈಗಾಗಲೇ ಮುಖ್ಯಮಂತ್ರಿ ಘೋಷಿಸಿರುವಂತೆ 2020-21ನೇ ಸಾಲಿನ ಅಯವ್ಯಯದಲ್ಲಿರಾಜ್ಯದ ಕೃಷಿ, ನೀರಾವರಿ ಮುಂತಾದ ವಲಯಗಳಿಗೆ ಹೆಚ್ಚಿನಒತ್ತು ನೀಡಲು ಮುಂದಾಗಿದ್ದಾರೆ. ರೈತರು ಮತ್ತು ಬಡವರ ಪರ ಬಜೆಟ್ ಮಂಡನೆ ಮಾಡುವುದಾಗಿ ಹಣಕಾಸು ಖಾತೆಯನ್ನೂ ಹೊಂದಿರುವ ಯಡಿಯೂರಪ್ಪ ಅವರು ಹೇಳಿದ್ದು, ಮಾ. 5 ರಂದು ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ.
ಸಚಿವರುಗಳ ಸಭೆ
ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ತಯಾರಿ ಸಭೆ ನಡೆಸಿರುವ ಬೆನ್ನಲ್ಲೆ ವಿವಿಧ ಸಚಿವರುಗಳೂ ಸಹ ತಮ್ಮಇಲಾಖೆಯ ಬಜೆಟ್ ಬೇಡಿಕೆ, ಬೇಕಾಗಿರುವ ಅನುದಾನ ಇವುಗಳ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಶಿಕ್ಷಣ ಮತ್ತುಕಾರ್ಮಿಕ ಸಚಿವರಾದ ಸುರೇಶ್ ಕುಮಾರ್ ತಮ್ಮ ಇಲಾಖೆಯ ಅಧಿಕಾರಿಗಳ ಜತೆ ಬಜೆಟ್ ಪೂರ್ವ ಸಭೆಯನ್ನು ನಡೆಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವಕೆ.ಎಸ್. ಈಶ್ವರಪ್ಪ ಜಿಲ್ಲಾ ಪಂಚಾಯತ್‍ನ ಸಿಇಓಗಳ ಜತೆ ಬಜೆಟ್ ಪೂರ್ವಭಾವಿ ಸಭೆಯನ್ನು ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








