ಯೋಧರ ನೆನಪಿಗಾಗಿ ತಾಲ್ಲೂಕಿನಲ್ಲಿ ಯೋಧ ಕಪ್ ಆಯೋಜನೆ : ಪರಮೇಶ್ವರ್

ಕೊರಟಗೆರೆ

        ಭಾರತ ದೇಶದ ಸುರಕ್ಷತೆಗೆ ಮತ್ತು ಶಾಂತಿ ನೆಮ್ಮದಿಗೆ ತಮ್ಮ ಜೀವನವನ್ನು ಅರ್ಪಿಸುತ್ತಿರುವ ಸೈನಿಕರ ನೆನಪಿಗಾಗಿ ಕ್ರೀಡೆಯಲ್ಲಿ ಯೋಧ ಕಪ್‍ ಎಂದು ಹೆಸರಿಟ್ಟು ನೆಸುತ್ತಿರುವುದು ಅವರಿಗೆ ನೀಡಿರುವ ಗೌರವರಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

       ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವಕಾಲೇಜು ಮೈದಾನದಲ್ಲಿ ಯೋಧ ಕಪ್ ನ ಕ್ರೀಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ ನಮ್ಮದೇಶದಲ್ಲಿರೈತರ ಮತ್ತು ಸೈನಿಕರ ಸೇವೆ ಮತ್ತುತ್ಯಾಗಕ್ಕೆ ಬೆಲೆ ಕಟ್ಟಲುಯಾರಿದಲೂ ಸಾದ್ಯವಿಲ್ಲ, ದೇಶದ ಸುರಕ್ಷತೆಗಾಗಿ ರಕ್ಷಣೆಗಾಗಿ ಗಡಿ ಕಾಯುವ ಸೈನಿಕನಿಗೆ ನಾಳಿನ ಜೀವನದ ಬಗ್ಗೆ ಪ್ರಾಣದ ಬಗ್ಗೆ ಯೋಜನೆ ಮಾಡದೆ ದೇಶಕ್ಕಾಗಿ ಜೀವನವನ್ನೆ ಮುಡಿಪಾಗಿ ಡುತ್ತಾರೆ, ಅಂತಹ ಸೈನಿಕರನ್ನು ನೆನೆದು ಅವರ ಹೆಸರಿನಲ್ಲಿ ನನ್ನ ಕ್ಷೇತ್ರ ಕೊರಟಗೆರೆಯಲ್ಲಿ ಕ್ರೀಕೆಟ್ ಪಂದ್ಯಾವಳಿ ನಡೆಸುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು ಕ್ರೀಡಾ ಪಟುಗಳಲ್ಲಿ ದೇಶದ ಸೈನಿಕರ ಬಗ್ಗೆ ದೇಶದ ಬಗ್ಗೆ ಗೌರವಯುತವಾಗಿ ಇರಬೇಕು ಇಂದಿನ ಯುವಕರಲ್ಲಿ ಈ ನಡವಳಿಕೆ ಶಿಸ್ತು ಮತ್ತು ಸಂಯಮವನ್ನು ಹೇಳಿಕೊಡುತ್ತದೆ ಎಂದರು.

      ಕೊರಟಗೆರೆ ಪಟ್ಟಣದ ಪದವಿ ಪೂರ್ವಕಾಲೇಜು ಮೈದಾನದಲ್ಲಿ ಈಗಾಗಲೆ 4.5 ಕೋಟಿ ರೂಗಳ ಸುಸರ್ಜಿತ ಒಳಾಂಗಣ ಕ್ರೀಡಾಂಗಣವನ್ನು ಮಂಜೂರು ಮಾಡಿದ್ದು ಕಾಮಗಾರಿ ಪ್ರಾರಂಭವಾಗುತ್ತಿದೆ, ಅದೇ ರೀತಿಯಾಗಿ ಪ್ರಸ್ತುತ ಹಾಲಿ ಇರುವ ಕ್ರೀಡಾಂಗಣದ ಮೈದಾನವನ್ನು ಉತ್ತಮ ರೀತಿಯಲ್ಲಿ ಸುಸರ್ಜಿತ ಗೊಳಿಸುವ ಕೆಲಸವನ್ನು ಮುಂಬರುವ ದಿನಗಳಲ್ಲಿ ಮಾಡಲಾಗುವುದು, ಯುವಕರು ಹೆಚ್ಚಿನ ರೀತಿಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಮಾನಸಿಕ ಹಾಗೂ ದೈಹಿಕವಾಗಿ ಸದೃಡರಾಗುವುದರೊಂದಿಗೆ ಶೈಕ್ಷಣಿಕವಾಗಿ ಪ್ರಗತಿಯಲ್ಲಿ ವಿಶೇಷ ಕ್ರೀಡಾ ಮೀಸಲಾತಿಯಲ್ಲಿ ಸರ್ಕಾರಿ ಉದ್ಯೋಗಗಳನ್ನು ಪಡೆದು ಜೀವನವನ್ನು ರೂಪಿಸಿಕೊಳ್ಳಬಹುದು ಸರ್ಕಾರವು ಯುವಕರಿಗೆ ಮತ್ತು ವಿದ್ಯಾರ್ಥಿಗಳಗೆ ನೀಡುತ್ತಿರುವ ಸವಲ ತ್ತುಗಳನ್ನು ಬಳಸಿಕೊಳ್ಳುವ ಜವಾಬ್ದಾರಿ ಯುವಕರ ಮೇಲಿದೆ ಎಂದರು.

     ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯ ದಿನೇಶ್, ಯುವಕಾಂಗ್ರೆಸ್‍ಅಧ್ಯಕ್ಷ ವಿನಯ್‍ಕುಮಾರ್, ಮಾಜಿ ಪ.ಪಂ.ಸದಸ್ಯ ಅಶ್ವತ್ಥ ನಾರಾಯಣ್ , ಕ್ರೀಡಾಕೂಟದ ಆಯೋಜಕರಾದ ರಮೇಶ್, ರವಿಕುಮಾರ್, ಅರವಿಂದ್, ಕೆ.ಎಲ್.ಮಂಜುನಾಥ್, ಮಧು, ಗೋಪಿನಾಥ್, ಪ್ರದೀಪ್‍ಕುಮಾರ್, ನಂದೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು . ಕಾರ್ಯಕ್ರಕ್ಕೂ ಮುನ್ನಾ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೊರಟಗೆರೆ ಕ್ಷೇತ್ರದ ನಿಟ್ರಹಳ್ಳಿ ಆದಿಲಕ್ಷ್ಮೀ ಸಂಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಆದಿ ಲಕ್ಷ್ಮೀದೇವಾಲಯಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

     ಈ ಸಂದರ್ಬಧಲ್ಲಿ ಮಠದ ನೀಲಕಂಠಾಆಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು, ಮಾರ್ಗ ಮಧ್ಯ ಅಕ್ಕಿರಾಂಪುರ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಕುಡಿಯುವ ನೀರು ಮತ್ತು ಮೂಲಭೂತ ಸಾಲಭ್ಯಗಳ ಬಗ್ಗೆ ಚರ್ಚಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap