ನವದೆಹಲಿ
ಯೋಗವು ಮಾನವ ಜನಾಂಗದ ಏಳ್ಗೆಗಾಗಿ ಭಾರತವು ವಿಶ್ವಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ 2015 ರ ಜೂನ್ 21 ರಂದು ಮೊಟ್ಟಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಇದೀಗ ವಿಶ್ವದ ಬಹುತೇಕ ದೇಶಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಭಾರತವು ಇದರ ನೇತೃತ್ವ ವಹಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇದು ಭಾರತಕ್ಕೆ ಸಂದ ಗೌರವವಾಗಿದೆ ಎಂದಿದ್ದಾರೆ.
ಯೋಗವು ಬರೀ ಆಸನ, ಪ್ರಾಣಾಯಾಮ, ಸೂರ್ಯನಮಸ್ಕಾರ, ವ್ಯಾಯಾಮವಲ್ಲ. ಬದಲಿಗೆ ಜನ ದೈಹಿಕ, ಮಾನಸಿಕವಾಗಿ ಸ್ವಾಸ್ಥ್ಯ ಜೀವನ ನಡೆಸಲು ಇರುವ ಸಮಗ್ರ ಸಾಧನವಾಗಿದೆ. ವಿಶ್ವದದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಗೈಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯೋಗ ಹಿಂದೆಂದಿಗಿಂತಲೂ ಪ್ರಸ್ತುತವಾಗಿದೆ. ಯೋಗಾಭ್ಯಾಸದಿಂದ ನಮ್ಮ ಒಟ್ಟಾರೆ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಮಾನಸಿಕ ಒತ್ತಡವನ್ನು ನಿಯಂತ್ರಣಕ್ಕೆ ತರಬಹುದು. ಪ್ರಾಣಾಯಾಮದಿಂದ ಶ್ವಾಸಕೋಶ ಬಲಗೊಳ್ಳುತ್ತದೆ. ಕೊರೊನಾ ಮುಂತಾದ ವೈರಾಣುಗಳಿಂದ ರಕ್ಷಿಸಿಕೊಳ್ಳಲು ಇದು ತುಂಬಾ ಸಹಕಾರಿ. ನಮ್ಮ ಯೋಗಾಭ್ಯಾಸ ಇವತ್ತೊಂದೇ ದಿನಕ್ಕೆ ಕೊನೆಯಾಗದೆ ಜೀವನದ ಅವಿಭ್ಯಾಜ್ಯ ಅಂಗವಾಗಲಿ ಎಂದು ಆಶಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ