ಕೊರಟಗೆರೆ ;-
ತಾಲೂಕಿನಲ್ಲಿ ಸಂಘಟನೆಯ ಕೊರತೆಯಿಂದ ಹಿಂದುಳಿದಿರುವ ಬಲಿಜ ಸಮುದಾಯದ ಸಂಘಟನೆಯದೃಷ್ಠಿಯಿಂದ ತಾಲೂಕುಮಟ್ಟದ ಯೋಗಿನಾರಾಯಣ ಜಯಂತೋ ತ್ಸವ ಹಾಗೂ ಸಮುದಾಯದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಾಲೂಕು ಬಲಿಜ ಸಂಘದ ಅಧ್ಯಕ್ಷ ಎನ್.ಪದ್ಮನಾಭ್ ತಿಳಿಸಿದರು.
ಅವರು ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕು ಬಲಿಜ ಸಂಘದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದ ಗ್ರಾಮಗಳಲ್ಲಿ ಬಲಿಜ ಸಮುದಾಯ ಭಾಂದವರು ವಾಸಿಸುತ್ತಿದ್ದು ಈ ಸಮುದಾಯ ಸಂಘಟನೆ ಹಾಗೂ ಅರಿವಿನ ಕೊರತೆಯಿಂದ ಸರ್ಕಾರದ ಸವಲತ್ತು ಪಡೆಯಲು ವಿಫಲರಾಗಿ ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು ಈ ನಿಟ್ಟಿನಲ್ಲಿ ಬಲಿಜ ಸಮುದಾಯದ ಸಂಘಟನೆಗಾಗಿ ಸರ್ಕಾರದಿಂದ ತಾಲೂಕಿನಲ್ಲಿ ಬಲಿಜ ಸಂಘ ನೊಂದಣಿ ಮಾಡಿಸಿದ್ದು ಸಂಘಟನೆಯೊಂದಿಗೆ ಅರಿವಿನ ಕಾರ್ಯಕ್ರಮಕ್ಕಾಗಿ ಮುಂದಿನ 2019ರ ಜೂನ್ ತಿಂಗಳಲ್ಲಿ ಬಲಿಜ ಸಮುದಾಯದ ಆರಾದ್ಯ ಕುಲದ್ಯವ ದೈವ ಕಾಲಜ್ಞಾನ ವಿರಚಿತ ಕೈವಾರ ಯೋಗನಾರಾಯಣ ಜಯಂತೋತ್ಸವ ಹಾಗೂ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಲಿಜ ಸಮಾಜದ ಮುಖಂಡ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥ್ ಮಾತನಾಡಿ ಕೊರಟಗೆರೆ ಪಟ್ಟಣದ ಸೇರಿದಂತೆ ತಾಲೂಕಿನಲ್ಲಿ ಸುಮಾರು 9 ಸಾವಿರದಿಂದ 10 ಸಾವಿರ ಜನಸಂಖ್ಯೆ ಇರುವ ಬಲಿಜ ಸಮುದಾಯ ಸಂಘಟಿತರಾಗಿ ಸರ್ಕಾರದ ಸವಲತ್ತುಗಳನ್ನು ಪಡೆಯಬೇಕಾಗಿದ್ದು
ಈ ನಿಟ್ಟಿನಲ್ಲಿ ಸಂಘ ಸ್ಥಾಪಿಸಲಾಗಿದ್ದು ಸಂಘದ ಕಾರ್ಯಕ್ರಮ ಗಳಿಗೆ ಸಮುದಾಯ ಸ್ಪದಿಸುವ ಮೂಲಕ ಬಲಿಜ ಸಮಾಜದ ಅಭಿವೃದ್ದಿಗೆ ಒಂದಾಗಬೇಕಾಗಾಗಿದ್ದು, ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಸಮುದಾಯ ಭವನ ಸೇರಿದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ವಿದ್ಯಾರ್ಥಿನಿಲಯವನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಮಯೂರಗೋವಿಂದರಾಜು ಪ್ರಾಸ್ತಾವಿಕ ನುಡಿಗಳನ್ನಾಗಿದರು ಉಪಾಧ್ಯಕ್ಷರಗುಳಾದ ಅಲಪನಹಳ್ಳಿ ವೆಂಕಟೇಗೌಡ, ಬುರುಗನಹಳ್ಳಿ ವೆಂಕಟೇಶಪ್ಪ, ತೋವಿನಕೆರೆ ಜಯರಾಂ, ಖಜಾಂಚಿ ಕೊಡ್ಲಹಳ್ಳಿ ವೆಂಕಟೇಶ್, ಸಮುದಾಯದ ಹಿರಿಯ ಶ್ರೀಕಂಠಯ್ಯ, ಮಾಜಿ ಪ.ಪಂ.ಸದಸ್ಯ ಕೆ.ಎಲ್.ಆನಂದ್, ಕೆ.ವಿ.ಪುರುಷೋತ್ತಮ್, ಕೆ.ಎನ್.ನಾಗೇಂದ್ರ, ಕೇಶವಮೂರ್ತಿ, ಶ್ರೀನಿವಾಸ್, ಮಹಿಳಾ ಸಂಘದ ಅಧ್ಯಕ್ಷೆ ಗಿರಜಮ್ಮ ಸೇರಿದಂತೆ ತಾಲೂಕಿನ ವಿವಿಧ ಹೋಬಳಿಗಳಿಂದ ಬಂದಿದ್ದ ಸಮುದಾಯದ ಮುಖಂಡರು ಉಪಸ್ತಿತರಿದ್ದರು.