ಶಿರಾ:
ಆಕಸ್ಮಿಕವಾಗಿ ಸಿಡಿಮದ್ದೊಂದು ಸ್ಪೋಟಗೊಂಡ ಪರಿಣಾಮ ಯುವಕನೊಬ್ಬ ತೀವ್ರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ಶಿರಾ ನಗರದಲ್ಲಿ ನಡೆದಿದೆ.
ಶಿರಾ ನಗರದ ಸಪ್ತಗಿರಿ ಬಡಾವಣೆಯ ಸಂತೇ ಮೈದಾನದಲ್ಲಿನ ಖಾಲಿ ಜಾಗದಲ್ಲಿ ಯುವಕನೊಬ್ಬ ಕೋರೆಯ ಬಂಡೆಗಳನ್ನು ಸೀಳುವ ನಿಷ್ಕ್ರಿಯಗೊಂಡ ಸಿಡಿಮದ್ದಿನ ತಂತಿಗಳನ್ನು ಕೂಡಿಟ್ಟು ತಂದು ಅವುಗಳನ್ನು ಬೆಂಕಿಯಲ್ಲಿ ಸುಟ್ಟು ತಂತಿಗಳನ್ನು ಬಿಡಿಸಿಕೊಂಡು ಮಾರಾಟಮಾಡಲು ತಂತಿಯನ್ನು ಕೂಡಿಡಲು ಯತ್ನಿಸಿದ್ದನು.
ಸುಟ್ಟುಕಕರಲಾದ ಕೋರೆ ಬಂಡೆಯ ಸಿಡಿಮದ್ದಿನ ತಂತಿಗಳ ಮದ್ಯದಲ್ಲಿ ನಿಷ್ಕ್ರಿಯಗೊಳ್ಳದ ಸಿಡಿಮದ್ದು ಇದ್ದಿದ್ದರಿಂದ ಬೆಂಕಿ ತಗುಲಿದ ಕೂಡಲೇ ಸಿಡಿಮದ್ದು ಸ್ಪೋಟಿಸಿದೆ. ಅಲ್ಲಿಯೇ ಇದ್ದ ಯುವಕ ವೆಂಕಟೇಶ್(22)ನಿಗೆ ಸಿಡಿಮದ್ದು ಸಿಡಿದ ಪರಿಣಾಮ ಆತನ ಕಾಲು, ತೊಡೆಯ ಭಾಗಕ್ಕೆ ತೀವ್ರವಾದ ಗಾಯಗಳಾಗಿದ್ದು ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಗಿದೆ.
ಸಿಡಿಮದ್ದು ಸಿಡಿದ ಸ್ಥಳಕ್ಕೆ ಡಿ.ಎಸ್.ಪಿ. ವೆಂಕಟಸ್ವಾಮಿ, ಸಿ.ಪಿ.ಐ. ರಂಗಶ್ಯಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಗಳವಾರ ಹೊರತುಪಡಿಸಿದರೆ ಉಳಿದಂತೆ ಎಲ್ಲಾ ದಿನಗಳಲ್ಲೂ ಈ ಸಂತೇ ಮೈದಾನವು ಕಸ ವಿಲೇವಾರಿ ಘಟಕವೇ ಆಗಿ ಪರಿಣಮಿಸುತ್ತಿದ್ದು ಈ ಜಾಗದಲ್ಲಿ ಗುಜರಿಯಿಂದ ತಂದ ತ್ಯಾಜ್ಯ ವಸ್ತುಗಳನ್ನು, ಟೈರ್‍ಗಳನ್ನು ಸುಡಲಾಗುತ್ತಿದೆ. ಈ ಕೂಡಲೇ ಇದಕ್ಕೆಲ್ಲಾ ಕಡಿವಾಣ ಹಾಕುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ