ರಸ್ತೆ ಅಪಘಾತ ಯುವಕ ಸಾವು

ಹರಿಹರ :

           ಕೆಎಸ್‍ಆರ್‍ಟಿಸಿ ಬಸ್ ಜಾಲಕನ ಅಜಾಗರುಕತೆಯಿಂದ ಯುವಕ ಮೃತಪಟ್ಟ ಘಟನೆ ಬ್ಯಾಲದಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ತಾಲೂಕಿನ ಬ್ಯಾಲದಹಳ್ಳಿ ಗ್ರಾಮದಲ್ಲಿನ ಶಿವಮೊಗ್ಗಕ್ಕೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಬೆಳಿಗ್ಗೆ 11:40ರ ಸುಮಾರಿಗೆ, ಕಿಶೋರ(14) ಎಂಬುವನು ಶನಿವಾರ ತನ್ನ ಚಿಕ್ಕಪ್ಪನ ಜೊತೆಯಲ್ಲಿ ಭಾನುವಳ್ಳಿ ಗ್ರಾಮದಿಂದ ಬನ್ನೀಕೋಡು ಗ್ರಾಮಕ್ಕೆ ತೆರಳಲು ಬ್ಯಾಲದಹಳ್ಳಿ ಗ್ರಾಮದ ಕ್ರಾಸ್ ಗೆ ಬಂದು ಇಳಿದಿದ್ದಾರೆ.

          ನಂತರ ಕಿಶೋರ್ ಚಿಕ್ಕಪ್ಪ ಆಟೋ ಇಳಿದು ರಾಜ್ಯ ಹೆದ್ದಾರಿಯನ್ನು ದಾಟಲು ಮುಂದಾಗಿದ್ದಾರೆ. ಇವರ ಹಿಂಭಾಗದಲ್ಲಿ ಯುವಕ ಕಿಶೋರ್ ಕೂಡ ರಸ್ತೆ ದಾಟಲು ಮುಂದಾಗಿದ್ದಾನೆ. ಅದೇ ವೇಳೆಗೆ ಹರಿಹರ ನಗರದಿಂದ ಉಕ್ಕಡಗಾತ್ರಿಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಗ್ರಾಮಾಂತರ್ ಬಸ್ ವೇಗವಾಗಿ, ಜಾಲಕನ ಅಜಾಗರುಕತೆಯಿಂದ ಮೃತ ಯುವಕನಿಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಿಂದ 60 ಅಡಿ ಪುಟಿದು ರಸ್ತೆ ಪಕ್ಕಕ್ಕೆ ಬಿದ್ದಿದ್ದಾನೆ. ಘಟನೆ ಸಂಭವಿಸಿದ ತಕ್ಷಣ ಕೆಎಸ್‍ಆರ್‍ಟಿಸಿ ಬಸ್ ಜಾಲಕನ ಸ್ಥಳದಿಂದ ಪರಾರಿಯಾಗಿದ್ದಾನೆ.

          ಈ ಪ್ರಕರಣವು ಹರಿಹರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು, ಮೃತ ಯುವಕನನ್ನು ಅಪಘಾತ ಸ್ಥಳದಿಂದ ಹರಿಹರ ಸಾರ್ವಜನಿಕ ಆಸ್ಪತ್ರೆಗೆ ತರಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link