ಡ್ರಾಪ್‌ ಕೊಡುವ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದವನ ಬಂಧನ

ಬೆಂಗಳೂರು

      ಡ್ರಾಪ್ ಕೇಳಿದ ಯುವತಿಯನ್ನು ಬೈಕ್‍ನಲ್ಲಿ ಕರೆದೊಯ್ಯವಾಗ ದಾರಿ ತಪ್ಪಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನಿಸಿದ ನಾಲ್ಕು ಮಕ್ಕಳ ತಂದೆಯೊಬ್ಬ ನಂದಗುಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

      ನಂದಗುಡಿಯ ಗಂಗಾಪುರದ ಕೃಷಿಕ ರಮೇಶ್ (40) ಬಂಧಿತ ಆರೋಪಿಯಾಗಿದ್ದಾನೆ.ನಂದಗುಡಿಯ ಬೈಲನರಸಾಪುರದಲ್ಲಿ ಶುಕ್ರವಾರ ಅಡುಗೆಮನೆಯ ಸಾಮಾಗ್ರಿಗಳನ್ನು ಮಾರಾಟ ಮಾಡಲು ಬಂದಿದ್ದ 20 ವರ್ಷ ವಯಸ್ಸಿನ ರಾಮನಗರದ ಯುವತಿಯು ಸಂಜೆವರೆಗೆ ವ್ಯಾಪಾರ ಮುಗಿಸಿ ಮರಳಿ ಮನೆಗೆ ಹೊರಡಲು ಸಿದ್ಧರಾಗಿ ಬಸ್ಸಿಗೆ ಕಾಯುತ್ತಿದ್ದಳು.

      ಬಸ್ ಬರುವುದು ತಡವಾಗಿದ್ದರಿಂದ ಆತಂಕಗೊಂಡ ಆಕೆ ಟಿವಿಎಸ್ ಬೈಕಿನಲ್ಲಿ ಬರುತ್ತಿದ್ದ ಆರೋಪಿಯ ಬಳಿ ಡ್ರಾಪ್ ಕೇಳಿದಾಗ ಯುವತಿಯನ್ನು ಬೈಕ್ ಹತ್ತಿಸಿಕೊಂಡಿದ್ದ ಆರೋಪಿ ರಮೇಶ್ ಬೈಲನರಸಾಪುರದಿಂದ ಗಂಗಾಪುರಕ್ಕೆ ಹೋಗುವ ಮಾರ್ಗದಲ್ಲಿ ಅಡ್ಡ ದಾರಿ ಹಿಡಿದು ಆರೋಪಿ ತಮ್ಮದೇ ತೋಟದ ಪಂಪ್ ಹೌಸ್ ಬಳಿ ಕರೆದುಕೊಂಡು ಬಂದಿದ್ದಾನೆ.

      ನಿರ್ಜನ ಪ್ರದೇಶವಾಗಿದ್ದರಿಂದ ಅಲ್ಲಿ ಯುವತಿಯ ಕತ್ತಿನ ಮೇಲೆ ಕುಡುಗೋಲಿನಿಂದ ಹಲ್ಲೆಗೆ ಮುಂದಾಗಿ ಏಳೆದುಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಮದ್ಯದ ಅಮಲಿನಲ್ಲಿದ್ದ ಆರೋಪಿಯನ್ನು ತಳ್ಳಿ ತಪ್ಪಿಸಿಕೊಂಡ ಯುವತಿ ಗ್ರಾಮದ ಕಡೆ ಓಡಿ ಬಂದಿದ್ದು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

      ಕೃತ್ಯದ ಕುರಿತು ಯುವತಿ ನಂದಗುಡಿ ಪೊಲೀಸರಿಗೆ ದೂರು ನೀಡಿದ್ದು ದೂರು ಪಡೆದ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿ ರಮೇಶ್‍ನನ್ನು ಬಂಧಿಸಿದ್ದಾರೆ. ವಿವಾಹವಾಗಿ ನಾಲ್ಕು ಮಕ್ಕಳಿದ್ದರೂ ಆರೋಪಿಯು ಈ ಕೃತ್ಯ ನಡೆಸಿರುವುದು ಕಂಡುಬಂದಿದೆ ಎಂದು ಗ್ರಾಮಾಂತರ ಎಸ್‍ಪಿ ಡಾ.ರಾಮ್‍ನಿವಾಸ್ ಸೆಪಟ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link