ಹಿರಿಯೂರು :
ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಮತ್ತು ಹಿರಿಯೂರು ತಾಲ್ಲೂಕು ಯುವ ಕಾಂಗ್ರೆಸ್ ಸಮಿತಿ ವತಿಯಿಂದ ರೆಫೆಲ್ ಡೀಲ್ ಬಗೆಗಿನ ಮುಕ್ತ ಸಿ.ಬಿ.ಐ. ದುರ್ಬಳಕೆ ವಿರುದ್ಧ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಯಿತು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಧುಪಾಲೇಗೌಡ ಮಾತನಾಡಿ, ರೆಫೆಲ್ ಡೀಲ್ ನಬಗ್ಗೆ ಮುಕ್ತ ಹಾಗೂ ತನಿಖೆಯನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಮೋದಿಯವರು ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ರವರನ್ನು ಬಲವಂತದ ರಜೆಯ ಮೇಲೆ ಅಂಗಾಮಿ ನಿರ್ದೇಶಕರಾಗಿ ನೇಮಿಸಿ ಕೇಂದ್ರ ಸರ್ಕಾರ ತನ್ನ ಅಧಿಕಾರ ದುರ್ಬಳಕೆ ಮಾಡಿ ಸಿಬಿಐ ಯನ್ನು ದುರ್ಬಲ ತನಿಖಾ ಸಮಿತಿಯನ್ನಾಗಿ ಪರಿವರ್ತಿಸಿದ್ದು ಇದನ್ನು ಖಂಡಿಸಿ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾದ ರಫೀಕ್ ಉಲ್ಲಾ ಮಾತನಾಡಿ, ಮೋದಿಯನ್ನು ಓಡಿಸಿ ಸಿಬಿಐ ಉಳಿಸಿ ದೇಶದ ಕಾವಲುಗಾರ ಕಳ್ಳ ಅಂಬಾನಿ ಪ್ರೀತಿಯ ಬಲೆಗೆ ಸಿಬಿಐ ಬಲಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯವರಾದ ಮ||ಸಾಯಿದ್, ಜಿ.ದಾದಾಪೀರ್, ಅಶೋಕ್ ನಾಯ್ಡು, ವಿಕಾಸ್, ತಾಲ್ಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸಿಖಾಬತ್‍ಉಲ್ಲಾ ಷರೀಫ್, ರಂಗೇಗೌಡ, ಸಿದ್ದೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲ್ಲಟ್ಟಿ ತಿಪ್ಪೇಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಂದಿಕೆರೆ ಸುರೇಶ್ ಬಾಬು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ಚಂದ್ರಪ್ಪ, ಎಸ್.ಸಿ.ಸೆಲ್ ಗ್ರಾಮಾಂತರ ಅಧ್ಯಕ್ಷರಾದ ಜಿ.ಎಲ್.ಮೂರ್ತಿ, ಉಪಾಧ್ಯಕ್ಷರಾದ ಜ್ಞಾನೇಶ್, ಶಿವಕುಮಾರ್, ಹಿಂದುಳಿದ ವರ್ಗಗಳ ಅಧ್ಯಕ್ಷರಾದ ತರಕಾರಿ ರಘು, ಐ.ಟಿ.ಸೆಲ್ ಅಧ್ಯಕ್ಷರಾದ ಗುರು ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಸಾದತ್, ಪದ್ಮನಾಬ್, ಅಜ್ಲರ್, ಪ್ರಕಾಶ್, ಇನ್ನೂ ಹಲವಾರು ಯುವ ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.