ಎಂ ಎನ್ ಕೋಟೆ
ಗುಬ್ಬಿ ತಾಲ್ಲೂಕಿನ ಅದಲಗೆರೆ ಬಳಿ ಹೇಮಾವತಿ ನಾಲೆಯಲ್ಲಿ ಶನಿವಾರ ಈಜಲು ಹೋಗಿದ್ದ ಇಬ್ಬರು ಗೆಳೆಯರಲ್ಲಿ ಒಬ್ಬ ಈಜಿ ದಂಡ ಸೇರಿದ್ದು, ಮತ್ತೊಬ್ಬ ವಿವೇಕಾನಂದ (18) ಎಂಬಾತ ನೀರಿನಲ್ಲಿ ಮುಳುಗಿದ್ದಾನೆ.ಇದುವರೆಗೂ ಯುವಕನ ದೇಹ ಪತ್ತೆಯಾಗಿಲ್ಲ. ಚೇಳೂರು ಪೋಲೀಸರು ಹಾಗೂ ಅಗ್ನಿಶಾಮಕ ದಳದವರು ಮೃತ ದೇಹದ ಶೋಧನೆ ನಡೆಸುತ್ತಿದ್ದಾರೆ.
ಚೇಳೂರು ಪಿಎಸ್ ಐ ವಿಜಯ್ ಕುಮಾರ್ ಮಾತನಾಡಿ, ಹೇಮಾವತಿ ನಾಲೆಯಲ್ಲಿ ನೀರು ರಭಸವಾಗಿ ಹರಿಯುತ್ತಿರುವು ದರಿಂದ ಯುವಕನ ಮೃತ ದೇಹ ಪತ್ತೆಯಾಗುವುದು ಕಷ್ಟಕರವಾಗಿದೆ. ಆದರೂ ಅಗ್ನಿಶಾಮಕ ದಳದವರು ಯುವಕನ ಮೃತ ದೇಹಕ್ಕಾಗಿ ತೀವ್ರ ಶೋಧನೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ನೀರಿನಲ್ಲಿ ಮುಳುಗಿರುವ ಯುವಕ ಕುಂದರನಹಳ್ಳಿ ಗ್ರಾಮದ ಸಿದ್ದಭೈರಯ್ಯ ನವರ ಮಗ ವಿವೇಕಾನಂದ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ತಹಸೀಲ್ದಾರ್ ಮಮತ ಭೇಟಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ