ಯುವಕರೇ ಕೃಷಿಯೆಡೆಗೆ ಮರಳಿ ಬರಬೇಕು..!!

ತಿಪಟೂರು:
 
     ಕೃಷಿಯೆತ್ತ ಯುವಜನಾಂಗವು ವಿಮುಖರಾಗುತ್ತಿರುವುದು ವಿಷಾದಕರ ಸಂಗತಿಯಾಗದೆ ಎಂದು ಪ್ರಾಧ್ಯಾಪಕ ಡಾ.ವೆಂಕಟೇಶ್ ಎಲ್.ಎಮ್ ಅಭಿಪ್ರಾಯಪಟ್ಟರು.
      “ಕೃಷಿ ಮತ್ತು ಯುವಜನಾಂಗ” ಎಂಬ ವಿಷಯ ಕುರಿತು ಮಾತನಾಡುತ್ತಾ ಇತ್ತೀಚಿನ ದಿನಮಾನಗಳಲ್ಲಿ ಯುವಕರು ಆಧುನಿಕತೆಯ ವ್ಯಾಮೋಹಕ್ಕೆ ಸಿಲುಕಿ ನಗರದೆಡೆಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ಹಳ್ಳಿಗಳು ಯುವ ಪ್ರತಿಭೆಯಿಂದ ವಂಚಿತವಾಗುತ್ತಿವೆ. ಕೃಷಿ ಪ್ರಧಾನವಾದ ಭಾರತದಂತ ದೇಶದಲ್ಲಿ ಯುವಜನಾಂಗವು ಕೃಷಿ ಲಾಭದಾಯಕವಲ್ಲ ಎಂದು ವಿಮುಖರಾಗುತ್ತಿರುವುದು ಆತಂಕಕಾರಿ ವಿಚಾರ. ಯುವಕರು ಸುಲಭದ ದುಡಿಮೆಯ ಹರಸಿ ದೂರದ ನಗರಗಳಿಗೆ ಹೋಗಿ ಬದುಕು ಕಟ್ಟಿಕೊಳ್ಳಲಾರದೆ ಅತಂತ್ರ ಸ್ಥಿತಿಯಿಂದ ಮಾನಸಿಕವಾಗಿ ದ್ವಂದ್ವ ನಿಲುವುಗಳಿಂದ ನರಳುತ್ತಿದ್ದಾರೆ.
     
        ಇಂತಹ ಬೇಳವಣಿಗೆಗಳಿಂದ ಗ್ರಾಮಗಳು ಮರುಭೂಮಿಯಂತಾಗುತ್ತಿದ್ದು, ದೇಶಕ್ಕೆ ಅನ್ನ ಹಾಕಿ ಕೂಗುವ ಗೋಳು ಯಾರಿಗೂ ಕೇಳುತ್ತಿಲ್ಲ. ಇದಕ್ಕೆ ಪರಿಹಾರವೆಂದರೆ ಕೃಷಿಯನ್ನು ಯುವಕರು ಲಾಭದಾಯಕ ಉದ್ದಿಮೆಯನ್ನಾಗಿ ಪರಿವರ್ತನೆ ಮಾಡಿಕೊಳ್ಳಬೇಕು. ವೈಜ್ಞಾನಿಕ ರೀತಿಯಲ್ಲಿ ಕೃಷಿಯನ್ನು ಮಾಡಿ ತಮ್ಮ ಬಾಳನ್ನು ಖುಷಿಯಾಗಿಸಿಕೊಳ್ಳಿ ಎಂದು ಕರೆ ನೀಡಿದರು.
       ಪರಿಸರ  ತಜ್ಞ ಷಡಕ್ಷರ ದೇವರು ಇಂದಿನ ಅಗತ್ಯತೆ ಮರಾಧಾರಿತ ಕೃಷಿ ಬೇಸಾಯ ಎಂಬ ವಿಷಯ ಕುರಿತು ಮಾತನಾಡಿ ಇಂದಿನ ಅಗತ್ಯತೆ ಮರಾಧಾರಿಯ ಕೃಷಿ ಬೇಸಾಯದಿಂದ ರೈತರ ಜೀವನವನ್ನು ಉತ್ಕøಷ್ಟಮಟ್ಟಕ್ಕೆ ಕೊಂಡೊಯ್ಯಬಹುದು. ಮನುಷ್ಯನಿಗೆ ಆರೋಗ್ಯ ಕಾಪಾಡಿಕೊಳ್ಳಲು ಆಹಾರ, ಪರಿಸರ, ಶಿಕ್ಷಣ, ಹೇಗೆ ಅಗತ್ಯವೊ ದೇಶದ ಆರೋಗ್ಯಕ್ಕೆ ಉತ್ತಮ ಪರಿಸರ ನಿರ್ಮಿಸಿವುದು ನಮ್ಮೆಲ್ಲರ ಜವಬ್ದಾರಿ. ಮನುಷ್ಯನ ದುರಾಸೆಗಾಗಿ ಭೂಮಿಯ ಹೆತ್ತೊಡಲನ್ನು ಬಗೆಯುತ್ತಿದ್ದೇವೆ, ಕುಡಿಯುವ ನೀರು, ಸೇವಿಸುವ ಗಾಳಿ, ತಿನ್ನುವ ಆಹಾರ, ವಿಷಮಯವಾಗಿದೆ. ಪ್ರಕೃತಿ ಆಸೆ ಪೂರೈಸುತ್ತದೆ ಹೊರತು ದುರಾಸೆಯನ್ನಲ್ಲ, ಎಂದು ಅಭಿಪ್ರಾಯಪಟ್ಟರು. 
       ಜಾಗೃತಿ ತಂಡದ ಸದಸ್ಯ ರೇಣುಕರಾಧ್ಯ ಮಾತನಾಡಿ ಭಾವನಾತ್ಮಕ ವಿಚಾರಗಳನ್ನು ಬಹುರಾಷ್ಟ್ರೀಯ ಕಂಪನಿಗಳು ಸರುಕಾಗಿ ಮಾರಾಟ ಮಾಡುತ್ತಿವೆ. ಜಾಗತಿಕ ದಿನಮಾನಗಳಲ್ಲಿ ಸಾಮಾನ್ಯ ಜನರ ಸ್ಥಿತಿಗತಿಗಳು ಸಂಕಷ್ಟದಲ್ಲಿವೆ. ಇದರಿಂದ ಪಾರಾಗಲು ಸ್ವಾವಲಂಬಿಗಳಾಗಿ ನಾವು ಬದುಕಬೇಕೆಂದರು. 
       ಈ ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿಗಳಾದ ಪ್ರೊ. ಅನುಪ್ರಸಾದ್ ಕೆ.ಆರ್, ಪ್ರೊ. ಚಿಕ್ಕಹೆಗ್ಗಡೆ ಎಂ.ಆರ್. ಪ್ರೊ. ಕವಿತ ಬಿ.ಎಸ್, ಪ್ರೊ. ಮಮತ ಕೆ.ಆರ್, ಪ್ರೊ. ಸುರೇಶ್ ಕೆ. ಯೋಗಗುರು ಮನೋಹರ್, ಪಂಕಜ, ಗ್ರಾಮಸ್ಥರಾದ ಪುಟ್ಟಸ್ವಾಮಿ, ನಂಜಪ್ಪ, ಶಂಕರಪ್ಪ, ಯೋಗೀಶ್, ನೇತ್ರಾನಂದ, ಯೋಗನಂದ, ಬನಶಂಕರಪ್ಪ, ಬಸವರಾಜು ಮತ್ತಿತ್ತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link