ಹುಳಿಯಾರು
ರಾಜಕೀಯ ಎಂದರೆ ದೇವೇಗೌಡ, ಇಂದಿರಾಗಾಂಧಿ, ಯಡಿಯೂರಪ್ಪ ಅವರ ಸ್ವತ್ತಲಯೀ ಕುಟುಂಬದವರೇ ಅಭ್ಯರ್ಥಿಯಾಗಬೇಕೆಂದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಚುನಾವಣೆಗೆ ಸ್ಪರ್ಧಿಸುವ ಮುಕ್ತ ಅವಕಾಶ ನೀಡಿದ್ದು ಯುವ ಜನತೆ ರಾಜಕೀಯ ಪ್ರವೇಶಿಸಲು ಮನಸ್ಸು ಮಾಡಬೇಕು ಎಂದು ಕರ್ನಾಟಕ ರಾಷ್ಟ್ರಸಮಿತಿ ಪಕ್ಷ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಬಿ.ಎಸ್.ಮಲ್ಲಿಕಾರ್ಜುನಯ್ಯ ಕರೆ ನೀಡಿದರು.
ಹುಳಿಯಾರಿನಲ್ಲಿ ಪಾದಯಾತ್ರೆಯ ಮೂಲಕ ಮತಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ಮಾತನಾಡಿದರು.ತುಮಕೂರಿನಲ್ಲಿ ಪ್ರಮುಖ ಪಕ್ಷದ ಅಭ್ಯರ್ಥಿಗಳಿಬ್ಬರೂ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಅಲ್ಲದೆ ಅವರಿಗೆ ಈಗಾಗಲೇ ಕ್ಷೇತ್ರದಾದ್ಯಂತ ಸಂಚರಿಸಲು ಶಕ್ತಿ ಇಲ್ಲದ ವೃದ್ಧರಾಗಿದ್ದಾರೆ. ಇಂತಹವರು ಗೆದ್ದರೆ ಜಿಲ್ಲೆಯಲ್ಲಿ ಕ್ರೀಯಾಶೀಲ ಸಂಸದರು ಇಲ್ಲದಾಗಿ ಮತದಾರರೇ ಅವರ ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಠಿಯಾಗುತ್ತದೆ. ಹಾಗಾಗಿ ನನ್ನಂತ ಯುವಕರನ್ನು ಗೆಲ್ಲಿಸಿದರೆ ಸದಾ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದು ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂಧಿಸುತ್ತೇನೆ ಎಂದರು.
ಕಲುಷಿತ ರಾಜಕೀಯ ಶುದ್ದಿಗಾಗಿ ಚುನಾವಣಾ ಅಕ್ರಮವನ್ನು ತಡೆಯುವ ಮಹತ್ತರವಾದ ಉದ್ದೇಶದಿಂದ ತಾವು ಚುನಾವಣೆಗೆ ಸ್ಪರ್ಧಿಸಿದ್ದು ಮತದಾರರೂ ಕೊಡ ಹಣ ಮತ್ತು ಹೆಂಡದ ಹೆಸರಲ್ಲಿ ಯಾರೇ ರಾಜಕಾರಣ ಮಾಡಲು ಗ್ರಾಮಕ್ಕೆ ಬಂದರೂ ಅವರನ್ನು ಬಹಿಷ್ಕರಿಸಿ ಹೊರ ಹಾಕಿ ನನ್ನ ಚುನಾವಣಾ ಭಷ್ಟಾಚಾರ ತಡೆ ಚಳುವಳಿಗೆ ಕೈ ಜೋಡಿಸಬೇಕು ಎಂದರಲ್ಲದೆ ಮುಮದೆ ಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ನಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು ಅಲ್ಲೂ ಕೂ ಹಣ, ಹೆಂಡ ಹಂಚುವವರ ವಿರುದ್ಧ ಸಮರ ಸಾರುತ್ತೇವೆ ಎಂದು ಘೋಷಿಸಿದರು.
ಇಂದು ಜೆ.ಸಿ.ಬಿ. (ಜೆ.ಡಿ.ಎಸ್, ಕಾಂಗ್ರೆಸ್ ಮತ್ತು ಬೆಜೆಪಿ) ಪಕ್ಷಗಳು ತುಮಕೂರು ಕ್ಷೇತ್ರದಲ್ಲಿನ ಮರಳು ಬಗೆಯುತ್ತಿದ್ದಾರೆ. ಪ್ರಾಕೃತಿಕ ಸಂಪತ್ತು, ಗಣಿಕಾರಿಕೆ, ಅದಿರು ಮತ್ತು ಸುತ್ತಮುತ್ತಲಿನ ಬೆಟ್ಟಗುಡ್ಡಗಳನ್ನು ಬಗೆಯುವುದರ ಜತೆಗೆ ನಿಮ್ಮನ್ನು ಸೇರಿ ಬಗೆಯುತ್ತಿದ್ದಾರೆ. ಇದು ಸ್ಥಳೀಯ ಆಡಳಿತವನ್ನೂ ಬಿಟ್ಟಿಲ್ಲ ಎನ್ನುವುದಕ್ಕೆ ಹುಳಿಯಾರು ಪಟ್ಟಣ ಪಂಚಾಯ್ತಿಯಲ್ಲಿ ಚಪ್ಪಡಿ ಕಲ್ಲುಗಳನ್ನು ಮಾರಿಕೊಂಡಿರುವುದು ನಿದರ್ಶನವಾಗಿದೆ. ಆದ್ದರಿಂದ ಮತದಾರರು ಬದಲಾಗಬೇಕು. ಕಳ್ಳಕಾಕರು, ಭ್ರಷ್ಟರು ಮತ್ತು ಸುಳ್ಳುಗಾರರನ್ನು ಪ್ರಶ್ನಿಸುವಂತಾಗಬೇಕು ಎಂದರು.ಎಂಜಿನಿಯರ್ ಲಿಂಗರಾಜು, ಕೇಶವಾಪುರ ದುರ್ಗಣ್ಣ, ಸ್ಟುಡಿಯೋ ರಾಜು, ಕಂಪನಹಳ್ಳಿ ಪ್ರಕಾಶ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








