ತುಮಕೂರು:
ಸಮಸ್ಯೆಗೆ ಸ್ಪಂಧಿಸುವ ವ್ಯಕ್ತಿಗೆ ಮತ
ಮತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದುದು. ನಾವು ಆಯ್ಕೆ ಮಾಡುವ ವ್ಯಕ್ತಿ ವಿಭಿನ್ನ ಆಲೋಚನೆ ಸಾಮಥ್ರ್ಯವಿರುವ, ದೂರದೃಷ್ಟಿಯುಳ್ಳ, ಜಾತಿರಹಿತ ಸೇವಾ ಮನೋಭಾವ ಹೊಂದಿರುವ, ಕ್ಷೇತ್ರದ ಸಮಸ್ಯೆ ಅರ್ಥೈಸಿಕೊಂಡು ಅಭಿವೃದ್ಧಿಗೆ ಬದ್ಧನಾಗಿರಬೇಕು.
ಮತದಾನ ಮಾಡುವ ನಾವು ಯಾವುದೇ ಹಣ, ಹೆಂಡ ಇನ್ನಿತರ ಆಮಿಷಗಳಿಗೆ ಒಳಗಾಗಬಾರದು.
ಕ್ಷೇತ್ರ ಹಾಗೂ ದೇಶದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ದೊರಕಿಸಿಕೊಡುವ ವ್ಯಕ್ತಿಗೆ ನಾನು ಮತ ಹಾಕುತ್ತೇನೆ. ನಾವೆಲ್ಲರೂ ಕಡ್ಡಾಯ ಮತದಾನದ ಮೂಲಕ ಸದೃಢ ದೇಶ ನಿರ್ಮಾಣದ ಪಾಲುದಾರರಾಗೋಣ.
ಲಕ್ಷ್ಮೀ, ಸಾಕ್ಷ್ಯ ಕಣ್ಣಿನ ಆಸ್ಪತ್ರೆ, ಹುಳಿಯಾರು
ಚುನಾವಣೆಗಾಗಿ ಸ್ನೇಹ ಮುರಿದುಕೊಳ್ಳಬೇಡಿ
ಬಿಜೆಪಿಗೆ ಹಾಕುವವರು ಬಿಜೆಪಿಗೆ ಹಾಕಿ, ಕಾಂಗ್ರೆಸ್ಸಿಗೆ ಹಾಕುವವರು ಕಾಂಗ್ರೆಸ್ಸಿಗೆ ಹಾಕಿ, ಜೆಡಿಎಸ್‍ಗೆ ಹಾಕುವವರು ಜೆಡಿಎಸ್‍ಗೆ ಹಾಕಿ, ನೋಟಾ ಒತ್ತುತ್ತೇವೆ ಅನ್ನುವವರು ನೋಟಾ ಒತ್ತಿ. ನಿಮ್ಮ ನಿಮ್ಮ ನೆಚ್ಚಿನ ಪಕ್ಷಗಳಿಗೆ ನೀವು ಓಟು ಹಾಕಿ.ಆದರೆ ಈ ವಿಚಾರಕ್ಕೆ ಜಗಳಾಮಾಡ್ಕೊಂಡು ಅಮೂಲ್ಯ ಸ್ನೇಹ ಸಂಬಂಧ ಕಳ್ಕೋಬೇಡಿ. ಪ್ಲೀಸ್, ಎಲ್ಲ ಎಲೆಕ್ಷನ್ ಮುಗಿಯೋ ತನಕ ಮಾತ್ರ. ಎಲೆಕ್ಷನ್ ಮುಗಿದ ಮೇಲೆ ನಮಗೆ ಉಳಿಯುವುದು ನಮ್ಮ ನಮ್ಮ ನಡುವಿನ ಸ್ನೇಹ ಪ್ರೀತಿ ಸಲುಗೆ ಆತ್ಮೀಯತೆ ಸೌಹಾರ್ದತೆ ಮಾತ್ರ.
ಎಚ್.ಆರ್.ಯುವರಾಜ್, ರೈತ ಹೊಯ್ಸಲಕಟ್ಟೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ