ದಾವಣಗೆರೆ:
ನೆಹರು ಯುವ ಕೇಂದ್ರ ಹಾಗೂ ಭೀಮಾಸತ್ತಿ ತೀರ್ಥರಾಜ ಕಲಾ ಮತ್ತು ಸಾಂಸ್ಕøತಿಕ ಮಹಿಳಾ ಸಂಘದ ವತಿಯಿಂದ ನಗರದ ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಯುವ ಸಮಾವೇಶ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಯುವ ಸಂಘ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಿ.ಹೆಚ್.ಪ್ಯಾಟಿ, ಯುವಜನತೆಗೆ ಸಂಬಂಧಿಸಿದಂತೆ ಹಲವಾರು ಇಲಾಖೆ ಹಾಗೂ ಸರ್ಕಾರದಿಂದ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಯುವ ಸಂಘ ಪ್ರಶಸ್ತಿ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಮೌನೇಶ್, ಅಂಜನಾದ್ರಿ ಹಾಗೂ ನೆಹರು ಯುವ ಕೇಂದ್ರದ ಡಿಂಪಲ್ ಗಜಬಿಯಾ, ಚಂದ್ರಶೇಖರ ನಾಯ್ಕ, ಸಮಿತ, ಚೈತ್ರ ಮತ್ತಿತರರು ಉಪಸ್ಥಿತರಿದ್ದರು.