ಬೆಂಗಳೂರು
ಎರಡು ವಿವಾಹವಾಗಿದ್ದರೂ ಮತ್ತೊಬ್ಬ ಯುವತಿಯನ್ನು ಪ್ರೀತಿಸಿ ಆಕೆಯ ಜೊತೆ ಸಹಜೀವನ ನಡೆಸಿ ವಿವಾಹವಾಗಲು ನಿರಾಕರಿಸಿದ ಗಾರ್ಮೆಂಟ್ಸ್ ನೌಕರನ ವಿರುದ್ಧ ಸಂತ್ರಸ್ಥ ಯುವತಿಯೊಬ್ಬರು ಚಂದ್ರಲೇಔಟ್ ಪೊಲೀಸರ ಮೊರೆ ಹೋಗಿದ್ದಾರೆ
ಪ್ರೀತಿಸಿದ ನೌಕರನಿಗೆ ಈಗಾಗಲೇ ಎರಡು ವಿವಾಹವಾಗಿರುವುದನ್ನು ತಿಳಿದು ಕಂಗಾಲಾದ ಕೋಲಾರ ಮೂಲದ ಯುವತಿ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸಂತ್ರಸ್ಥ ಯುವತಿಯು ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದು ಅಲ್ಲೇ ಕೆಲಸ ಮಾಡುತ್ತಿದ್ದ ಪ್ರವೀಣ್ ಎಂಬಾತ ನನಗೆ ಯಾರೂ ಇಲ್ಲ,ನಾನೊಬ್ಬ ಅನಾಥ ಎಂದು ಯುವತಿಯನ್ನು ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿದ್ದಾನೆ.ನಿನ್ನನ್ನು ಪ್ರಾಣಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಆಕೆಯ ಹಿಂದೆ ಬಿದ್ದಿದ್ದ ಪ್ರವೀಣ್ ಯುವತಿಗೆ ಬೇರೆಡೆ ಮದುವೆ ನಿಶ್ಚಯವಾಗಿರುವುದು ಗೊತ್ತಾಗಿ ಕೋಲಾರದ ಯುವತಿಯ ಪೊಷಕರ ಮನೆಗೆ ತೆರಳಿ ನಾನೇ ಆಕೆಯನ್ನ ಮದುವೆ ಆಗುತ್ತೇನೆ ಎಂದು ನಂಬಿಸಿದ್ದನು.
ಅಲ್ಲಿಂದ ಸುಮಾರು ಎರಡು ವರ್ಷಗಳ ಕಾಲ ಆಕೆಯೊಂದಿಗೆ ಸಹಜೀವನ ನಡೆಸಿ ಎರಡು ಬಾರಿ ಯುವತಿಗೆ ಗರ್ಭಪಾತ ಕೂಡ ಮಾಡಿಸಿದ್ದಾನೆ. ಇದನ್ನು ತಿಳಿಯದೆ ಯುವತಿ ತಾನೇ ದುಡಿದ ತಿಂಗಳ ಸಂಬಳವನ್ನು ಆತನಿಗೆ ನೀಡುತ್ತಿದ್ದು ಆತನಿಗೆ ಈಗಾಗಲೇ ಎರಡು ವಿವಾಹವಾಗಿರುವ ನಿಜವಾದ ಬಣ್ಣ ಗೊತ್ತಾದಾಗ ಜಗಳ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಮಗುವಿರುವ ಮೊದಲನೆ ಹೆಂಡತಿ ಪ್ರವೀಣ್ ಸಹವಾಸ ಬೇಡ ನನಗೆ ಜೀವನಾಂಶ ಕೊಡಿಸಿ, ನಾನು ಇವನನ್ನ ಬಿಟ್ಟು ಹೋಗುತ್ತೇನೆ ಎಂದು ಪಟ್ಟುಹಿಡಿದಿದ್ದಾಳೆ. ಆಕೆಯನ್ನು ದೂರವಿಟ್ಟು ಎರಡನೇಯ ಮದುವೆಯಾಗಿ ಬೇರೆಡೆ ಪ್ರವೀಣ್ ಸಂಸಾರ ನಡೆಸುತ್ತಿದ್ದನು ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ