ದಾವಣಗೆರೆ
ಕಳೆದ ಸಂಜೆ ಸುರಿದ ಭಾರಿಬಿರುಗಾಳಿ ಸಹಿತಮಳೆಯಿಂದಾಗಿ ಬಡವರ ಮನೆಗಳು, ದೇವಸ್ಥಾನ, ಅಡಿಕೆ, ತೆಂಗು, ಬಾಳೆ ಹಾಗೂ ಭತ್ತ ಹಾನಿಗೀಡಾಗಿರುವುದನ್ನುಆನಗೋಡುಜಿಲ್ಲಾ ಪಂಚಾಯತ್‍ಕ್ಷೇತ್ರದ ಸದಸ್ಯಕೆ.ಎಸ್.ಬಸವಂತಪ್ಪ ಪರಿಶೀಲನೆ ನಡೆಸಿದರು . ಜಿಲ್ಲೆಯಮಾಯಕೊಂಡ ವಿಧಾನಸಭಾಕ್ಷೇತ್ರ ವ್ಯಾಪ್ತಿಯಗೋಣಿವಾಡಕ್ಯಾಂಪ್, ಮತ್ತಿ, ಕತ್ತಲಗೆರೆಕಾರಿಗನೂರು, ಹಲವು ಗ್ರಾಮಗಳಿಗೆ ಹಾಗೂ ಈ ಗ್ರಾಮಗಳ ಜಮೀನಿಗೆ ಭೇಟಿ ನೀಡಿದಕೆ.ಎಸ್.ಬಸವಂತಪ್ಪ ಮಳೆಯಿಂದ ಹಾನಿಗೊಳಗಾದ ಮನೆ, ಬೆಳೆಯವನ್ನು ಪರಿಶೀಲಿಸಿ ರೈತರ ಸಮಸ್ಯೆ ಆಲಿಸಿ ಮನೆ, ಬೆಳೆ ಕಳೆದುಕೊಂಡ ರೈತರಲ್ಲಿಧೈರ್ಯತುಂಬಿದರು.
ಈ ಸಂದರ್ಭದಲ್ಲಿ ಮಾತನಾಡಿದಜಿ.ಪಂ. ಸದಸ್ಯಕೆ.ಎಸ್.ಬಸವಂತಪ್ಪ, ಈಗಾಗಲೇ ಲಾಕ್‍ಡೌನ್‍ನಿಂದರೈತರುತಮ್ಮ ಫಸಲುಗಳಿಗೆ ಬೆಲೆ ಸಿಗದೇ ಇರುವುದರಿಂದಕಷ್ಟದಲ್ಲಿ ಸಿಲುಕಿದ್ದಾರೆ. ರೈತರಕಷ್ಟವನ್ನು ಆಲಿಸಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ಮಾಡಿ ನೊಂದರೈತರಿಗೆ ಸರ್ಕಾರದಿಂದ ಪರಿಹಾರ ನೀಡುವಂತೆಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸರ್ಕಾರವುರೈತರ ಮೆಕ್ಕೆಜೋಳ, ಭತ್ತಇತರೆ ಫಸಲುಗಳನ್ನು ಖರೀದಿ ಮಾಡಲು ಅನೇಕ ನಿರ್ಬಂಧ ಹೇರಿರುತ್ತೀರಿ.ಆ ನಿರ್ಬಂಧಗಳನ್ನು ಸಡಿಲಗೊಳಿಸಿ ರೈತರು ಬೆಳೆದ ಮೆಕ್ಕೆಜೋಳ ಭತ್ತ, ಖರೀದಿ ಕೇಂದ್ರದ ಮುಖಾಂತರ ಖರೀದಿಸುವಂತೆ ಒತ್ತಾಯಿಸಿದರು.ಖರೀದಿ ಕೇಂದ್ರದ ನೊಂದಣಿಅವಧಿಯನ್ನು ವಿಸ್ತರಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿಗೋಣಿವಾಡದ ಮುಖಂಡರಾದ ಮುರುಗೇಂದ್ರಪ್ಪ, ಅಡಿಕೆತೋಟ ಹಾನಿಗೀಡಾದ ಮಂಜುನಾಥ್, ಪರಶುರಾಮ್‍ಇತರರುಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
