ಜಿಂದಾಲ್ ಕಂಪನಿಗೆ ಸ್ಥಳೀಯರ ಬಗ್ಗೆ ಕಾಳಜೀಯೇ ಇಲ್ಲ..!!

ಬೆಂಗಳೂರು

    ಸ್ಥಳೀಯರಿಗೆ ಉದ್ಯೋಗ ನೀಡದೆ, ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿರುವ ಜಿಂದಾಲ್ ಕಂಪೆನಿಗೆ ಕಡಿಮೆ ಬೆಲೆಯಲ್ಲಿ 3 ಸಾವಿರ ಎಕರೆಭೂಮಿ ಶಾಶ್ವತವಾಗಿ ಶುದ್ಧ ಕ್ರಯಕ್ಕೆ ಕೊಡಲು ಸರಕಾರ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.

     ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಜಿಂದಾಲ್ ಕಂಪೆನಿಗೆ ಕಡಿಮೆ ಬೆಲೆಯಲ್ಲಿ ಭೂಮಿ ನೀಡುವ ಕ್ರಮದಿಂದ ಸರ್ಕಾರ ಹಿಂದೆ ಸರಿಯಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ತುಂಗಾಭದ್ರ ನದಿಯಲ್ಲಿ ಟಿಎಂಸಿ ಲೆಕ್ಕದಲ್ಲಿ ನೀರನ್ನು ಜಿಂದಾಲ್ ಕಂಪೆನಿ ಬಳಕೆ ಮಾಡುತ್ತಿದೆ.ಕಂಪೆನಿ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದ್ದು,

       ಇದಕ್ಕೆ ಶಾಶ್ವತವಾಗಿ ಭೂಮಿ ನೀಡುವುದು ಸರಿಯಾದ ಕ್ರಮವಲ್ಲ ಎಂದು ಮಾರಸಂದ್ರ ಮುನಿಯಪ್ಪ ತಿಳಿಸಿದರು.
ರಾಜ್ಯ ಒಟ್ಟು 28 ಲೋಕಸಭಾ ಕ್ಷೇತ್ರಗಳಿದ್ದು, ಅದರಲ್ಲಿ 5 ಎಸ್ಸಿ, 2 ಎಸ್ಟಿ ಪಂಗಡಕ್ಕೆ ಮೀಸಲಿಡಲಾಗಿದೆ. ಈ ಏಳು ಕ್ಷೇತ್ರಗಳಲ್ಲೂ ಬಿಜೆಪಿ ಸಂಸದರು ಜಯಗೊಳಿಸಿದ್ದಾರೆ. ಆದರೆ, ಯಾರಿಗೂ ಸಹ ಕೇಂದ್ರದಲ್ಲಿ ಮಂತ್ರಿ ಹುದ್ದೆ ನೀಡಿಲ್ಲ ಎಂದು ಹೇಳಿದರು.

      ರಾಜ್ಯದಲ್ಲಿ ಮಾತ್ರವಲ್ಲದೆ, ದೇಶದಲ್ಲಿ ಎಲ್ಲಿಯೂ ಸಹ ಎಸ್ಸಿ-ಎಸ್ಟಿ ವರ್ಗದ ಸಂಸದರಿಗೆ ಉತ್ತಮವಾದ ಖಾತೆ ನೀಡಿಲ್ಲ ಎಂದ ಅವರು, ಬಹು ಜನರಿಗೆ ರಾಜಕೀಯವಾಗಿ ಹಿನ್ನಡೆಯಾಗುತ್ತಿದೆ. ಇನ್ನೂ, ಸಣ್ಣ ಪ್ರಮಾಣದಲ್ಲಿರುವ ವರ್ಗವನ್ನೇ ಗುರಿಯಾಗಿಸಿಕೊಂಡು, ಉತ್ತಮ ಇಲಾಖೆಗಳ ಜವಾಬ್ದಾರಿ ನೀಡಿರುವುದು ಸರಿಯಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link