ಶಿಕ್ಷಕರು ಸರಿಯಾಗಿ ಶಾಲೆಗೆ ಬಾರದೆ ಮಕ್ಕಳು ಪಾಠ ಪ್ರವಚನದಿಂದ ಕುಂಠಿತ

ಚೇಳೂರು

     ಚೇಳೂರು ಹೋಬಳಿ ಸೀಗೆಮಳ್ಳಿಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಇಬ್ಬರು ಶಿಕ್ಷಕರು ಸರಿಯಾಗಿ ಶಾಲೆಗೆ ಬಾರದೆ ಮಕ್ಕಳು ಪಾಠ ಪ್ರವಚನದಿಂದ ಕುಂಠಿತವಾಗಿದ್ದು, ಇದರ ಬಗ್ಗೆ ಗ್ರಾಮಸ್ಥರು ಎಸ್‍ಡಿಎಂಸಿಯವರು ಮೇಲಾಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗದ ಕಾರಣ ಶಾಲೆಯ ಮುಂದೆ ಮಕ್ಕಳೊಂದಿಗೆ ಗ್ರಾಮಸ್ಥರು ಪೋಷಕರು ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ನಡೆಯಿತು.

        ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ 43 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಮೂರು ಜನ ಶಿಕ್ಷಕರ ನೇಮಕವಾಗಿದ್ದು ಅದರಲ್ಲಿ ಒಬ್ಬರು ಮಾತ್ರ ಸಮಯಕ್ಕೆ ಮುಂಚೆ ಬಂದು ಮಕ್ಕಳ ಬಗ್ಗೆ ಗಮನ ಹರಿಸುತ್ತಾರೆ. ಇನ್ನೂ ಇಬ್ಬರು ಶಿಕ್ಷಕರಲ್ಲಿ ಒಬ್ಬರು ಆ ತರಬೇತಿ ಈ ತರಬೇತಿಯಿಂದ ಕಾಲಹರಣ ಮಾಡಿಕೊಂಡು ಶಾಲೆಗೆ ಬರುತ್ತಿಲ್ಲ. ಇನ್ನೊಬ್ಬ ಶಿಕ್ಷಕ ಹಲವು ಸಂದರ್ಭದಲ್ಲಿ ಮದ್ಯಪಾನ ಮಾಡಿಕೊಂಡು ಶಾಲೆಗೆ ಬರುತ್ತಾರೆ. ಒಟ್ಟಾರೆ ಈ ಇಬ್ಬರೂ ಶಿಕ್ಷಕರಿಂದ ನಮ್ಮ ಶಾಲೆಯ ಮಕ್ಕಳಿಗೆ ಸುಮಾರು ತಿಂಗಳಿಂದ ಸರಿಯಾದ ವ್ಯಾಸಂಗ ಸಿಗುತ್ತಿಲ್ಲ ಎಂದು ಪೋಷಕರು, ಎಸ್‍ಡಿಎಂಸಿಯ ಸದಸ್ಯರು ದೂರುತ್ತಿದ್ದರೆ ಇದರ ಬಗ್ಗೆ ಜಾಣ ಕಿವುಡಗಿರಾಗಿದ್ದಾರೆ ಶಿಕ್ಷಣ ಇಲಾಖೆಯವರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link