ದಾವಣಗೆರೆ:
ಚನ್ನಗಿರಿ ಪಟ್ಟಣಪಂಚಾಯ್ತಿಯಿಂದ ಕೋಳಿ ಅಂಗಡಿಗಳಿಗೆ ನೀಡಿರುವ ಮಳಿಗೆಗಳ ಬಾಡಿಗೆ ಕಡಿಮೆ ಮಾಡಬೇಕೆಂದು ಒತ್ತಾಯಿಸಿ ಅಲ್ಲಿನ ಕೋಳಿ ವ್ಯಾಪಾರಸ್ಥರು ನಗರದ ಡಿಸಿ ಕಚೇರಿ ಎದುರು ಗುರುವಾರ ಪ್ರತಿಬಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೋಳಿ ವ್ಯಾಪಾರಿಗಳು, ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಸಂತೇ ಮೈದಾನದಲ್ಲಿ ಈ ಹಿಂದೆ ನಿರ್ಮಿಸಿದ್ದ ಕೋಳಿ ಮಾರಾಟ ಮಳಿಗೆಗಳಲ್ಲಿ ವ್ಯಾಪಾರ ಮಾಡುತ್ತಿರುವವರ ಗೋಳು ಹೇಳಿಕೊಳ್ಳದಂತಾಗಿದೆ.
ಸಂತೆ ಮೈದಾನದಲ್ಲಿ ಒಂದು ಚಿಕ್ಕಜ ಸಂಕೀರ್ಣ ನಿರ್ಮಿಸಿದ್ದು, ಸಂಕೀರ್ಣದಲ್ಲಿರುವ ಮಳಿಗೆಗಳನ್ನು ಕೋಳಿ ಅಂಗಡಿ ನಡೆಸುವವರಿಗೆ ಮಾತ್ರವೆಂದು ಮೊದಲೇ ಪಟ್ಟಣ ಪಂಚಾಯಿತಿ ಸಂಬಂಧಪಟ್ಟ ಅಧಿಕಾರಿಗಳು, ಸದಸ್ಯರು ಸಹ ಆಶ್ವಾಸನೆ ನೀಡಿದ್ದರು. ಆದರೆ, ಮಳಿಗೆಗಳನ್ನು ವಿತರಣೆ ಮಾಡುವಾಗ ಅಧಿಕಾರಿಗಳು ಕೋಳಿ ವ್ಯಾಪಾರ ಮಾಡುತ್ತಿರುವವರು ಎಷ್ಟು ಜನ ಇದ್ದಾರೆ ಎನ್ನುವುದು ಮೊದಲೇ ಗೊತ್ತಿತ್ತು ಹಾಗೂ ಲಾಟರಿ ಮುಖಾಂತರ ಮಳಿಗೆಗಳನ್ನು ವಿತರಣೆದ ಮಾಡಲು ತೀರ್ಮಾನಿಸಲಾಗಿತ್ತು. ಇದನ್ನೆಲ್ಲಾ ಬದಿಗೊತ್ತಿ ಬಹಿರಂಗ ಹರಾಜು ಮಾಡಲು ಮುಂದಾಗಿದ್ದಾರೆಂದು ಆರೋಪಿಸಿದರು.
ಈ ತೀರ್ಮಾನದಿಂದ ಕೋಳಿ ವ್ಯಾಪಾರ ಮಾಡದಿರುವವರು ಸಹ ಈ ಬಹಿರಂಗ ಹರಾಜಿನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮಳಿಗೆಗಳ ಬಾಡಿಗೆಯನ್ನು ಬಾಯಿಗೆ ಬಂದಂತೆ ಏರಿಸ ತೊಡಗಿದರು. ಆಗ ಶಾಶ್ವತ ಕೋಳಿ ವ್ಯಾಪಾರಸ್ಥರು ಮಳಿಗೆಗಳು ಸಿಗುತ್ತೋ, ಇಲ್ಲವೋ ಎಂದು ಹಿಂದೆ ಮುಂದೆ ಯೋಚಿಸಿದೇ ಬಾಯಿಗೆ ಬಂದಂತೆ ಅಂದರೆ 10 ಸಾವಿರದಿಂದ 12 ಸಾವಿರ ರೂವರೆಗೆ ಹರಾಜಿನಲ್ಲಿ ಕೂಗಿ ಮಳಿಗೆಗಳನ್ನು ಪಡೆದುಕೊಂಡರು.
ಈ ತೀರ್ಮಾನದಿಂದ ಕೋಳಿ ವ್ಯಾಪಾರಸ್ಥರ ಜೀವನದಲ್ಲಿ ಬಾಡಿಗೆ ಕಟ್ಟದೇ, ವ್ಯಾಪಾರ ಇಲ್ಲದೇ ಇದನ್ನೇ ನಂಬಿ ಬದುಕುತ್ತಿರುವ ನಮ್ಮ ಜೀವನ ದುಸ್ತರವಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೂ ಹಣವಿಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಕೇಂದ್ರದಲ್ಲಿಯೇ ಹೀಗೆ ದುಬಾರಿ ಬಾಡಿಗೆ ಎಲ್ಲಿಯೂ ಇಲ್ಲ. ಕೇವಲ 20 ಸಾವಿರ ಜನಸಂಖ್ಯೆಯುಳ್ಳ ಚನ್ನಗಿರಿ ಪಟ್ಟಣದಲ್ಲಿ ಹೀಗೆ ದುಬಾರಿ ಬಾಡಿಗೆ ಇದ್ದರೆ ವ್ಯಾಪಾರ ನಡೆಸಿ ಬಾಡಿಗೆ ಕಟ್ಟುವುದು ಬಹಳ ಕಷ್ಟಕರವಾಗಿದೆ. ಅಧಿಕ ಬಾಡಿಗೆಯಿಂದಾಗಿ ಅಂಗಡಿ ನಡೆಸುವವರು ಮಳಿಗೆಗಳನ್ನು ಬಿಟ್ಟು ಎಲ್ಲೆಂದರಲ್ಲಿ ಕೋಳಿ ಷೆಡ್‍ಗಳನ್ನು ತೆರೆಯುವ ಮುನ್ನವೇ ನೋವನ್ನು ಅರ್ಥಮಾಡಿಕೊಂಡು ತಾಲ್ಲೂಕು ಕೇಂದ್ರ ಸ್ಥಾನಕ್ಕೆ ತಕ್ಕಂತೆ 500ರಿಂದ 1000 ರೂ. ಬಾಡಿಗೆ ನಿಗದಿಗೊಳಿಸುವಂತೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಕೋಳಿ ವ್ಯಾಪಾರಸ್ಥರಾದ ರವಿಕುಮಾರ್, ಎನ್. ತಿಪ್ಪೇಸ್ವಾಮಿ, ಸಯ್ಯದ್ ಅಹಮದ್ಶ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ