ಸ್ನಾತಕೋತ್ತರ ಕೇಂದ್ರ ಆರಂಭಿಸಲು ಅಗತ್ಯ ಸಹಕಾರ

ದಾವಣಗೆರೆ:

        ಮಹಿಳಾ ಸೇವಾ ಸಮಾಜದಿಂದ ಸ್ನಾತಕೋತ್ತರ ಕೇಂದ್ರ ಆರಂಭಿಸಲು ಬೇಕಾದ ಸಹಕಾರ ನೀಡಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಭರವಸೆ ನೀಡಿದರು.

         ನಗರದ ಮಹಿಳಾ ಸೇವಾ ಸಮಾಜದಿಂದ ನಿರ್ಮಾಣ ಮಾಡಲ್ಪಟ್ಟ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳಾ ಸೇವಾ ಸಮಾಜದಿಂದ ಈಗಾಗಲೇ ಮಹಿಳಾ ಪ್ರಥಮ ದರ್ಜೆ ಕಾಲೇಜು ಆರಂಭಿಸಿದ್ದು, ಈ ಕಾಲೇಜಿನಲ್ಲಿ ಮಹಿಳೆಯರು ಸ್ನಾತಕೋತ್ತರ ಪದವಿ ಪಡೆಯಲು ಅನುಕೂಲವಾಗುವಂತೆ ಸ್ನಾತಕೋತ್ತರ ಕೇಂದ್ರವನ್ನು ಆರಂಭಿಸಲು ಉದ್ದೇಶಿಸಿದ್ದೀರಿ. ಆದರೆ, ಕೆಲವು ತಾಂತ್ರಿಕ ದೋಷಗಳಿವೆ. ಇದರು ಸಾಧ್ಯವಾಗಿಲ್ಲ. ಅವುಗಳ ನಿವಾರಣೆ ಮಾಡುವ ಮೂಲಕ ನಾನು ಮತ್ತು ಶಾಸಕ ಎಸ್.ಎ. ರವೀಂದ್ರನಾಥ ಜೊತೆಯಾಗಿ ಸ್ನಾತಕೋತ್ತರ ಕೇಂದ್ರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

        ದಾವಣಗೆರೆ ಶೈಕ್ಷಣಿಕ ನಗರಯಾಗಿ ರೂಪುಗೊಂಡಿದೆ. ಇಲ್ಲಿ ಮಹಿಳೆಯರಿಗೆ ಸ್ನಾತಕೋತ್ತರ ಪದವಿ ದೊರಕಬೇಕು. ಇದಾದರೆ, ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯಲು ದೂರ ಹೋಗುವುದು ತಪ್ಪಲಿದೆ ಎಂದು ಹೇಳಿದರು.

        ದಾವಣಗೆರೆ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಎಸ್.ವಿ.ಹಲಸೆ ಮಾತನಾಡಿ, ಮಹಿಳಾ ಸೇವಾ ಸಮಾಜದಿಂದ ಮಹಿಳೆಯರಿಗಾಗಿ ಸ್ನಾತಕೋತ್ತರ ಕೇಂದ್ರ ಆರಂಭಿಸಿದರೆ, ಅದು ಅಕ್ಕಮಹಾದೇವಿ ವಿವಿಯ ವ್ಯಾಪ್ತಿಗೆ ಬರಲಿದೆ. ಕೋ-ಎಜುಕೇಷನ್ ಇದ್ದರೆ ಮಾತ್ರ ನಮ್ಮ ವಿವಿಯ ವ್ಯಾಪ್ತಿಗೆ ಬರಲಿದೆ. ಹೀಗಾಗಿ ದಾವಣಗೆರೆ ವಿವಿಯಿಂದ ಸ್ನಾತಕೋತ್ತರ ಕೇಂದ್ರ ನೀಡಲು ಈ ತಾಂತ್ರಿಕ ದೋಷವಿದೆ ಎಂದರು.

         ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಕಂಚಿಕೇರಿ ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್.ಎ. ರವೀಂದ್ರನಾಥ, ದಾವಣಗೆರೆ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರೊ. ಪಿ. ಕಣ್ಣನ್, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಸಮಾಜದ ಕಾರ್ಯದರ್ಶಿ ಬಿ. ಜಯಶೀಲಮ್ಮ, ಸಹ ಕಾರ್ಯದರ್ಶಿ ಐ. ವಸಂತಕುಮಾರಿ, ಆಡಳಿತಾಧಿಕಾರಿ ವಾಮದೇವಪ್ಪ ಮತ್ತಿತರರಿದ್ದರು. ಮಲ್ಲಿಕಾ ಸಂಗಡಿಗರು ಪ್ರಾರ್ಥಿಸಿದರು. ನೀಲಗುಂದ ಜಯಮ್ಮ ಸ್ವಾಗತಿಸಿದರು.ಇದಕ್ಕೂ ಮುನ್ನಾ ಕಾಲೇಜಿನಲ್ಲಿ ಶ್ರೀಮತಿ ಸರೋಜ ಹನಗವಾಡಿಮಠ್ ಸಭಾಂಗಣವನ್ನು ಸಂಸದ ಜಿ.ಎಂ. ಸಿದ್ದೇಶ್ವರ, ಗಣಕ ಕೇಂದ್ರದ ಉದ್ಘಾಟನೆ ಶಾಸಕ ಎಸ್.ಎ. ರವೀಂದ್ರನಾಥ ನೆರವೇರಿಸಿದರು. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap