ಬಳ್ಳಾರಿ:
ನಗರದ ಪಟೇಲ್ ನಗರದ ಹತ್ತಿರವಿರುವ ದುರ್ಗಾ ಕಾಲೋಣೀಯಲ್ಲಿನ ಸಣ್ಣ ದುರ್ಗದೇವಸ್ಥಾನದಲ್ಲಿ 3ನೇ ವರ್ಷದ ದಸರಾ ಶರನ್ನವರಾತ್ರಿ ಉತ್ಸವ ಕಾರ್ಯಕ್ರಮಗಳು ಅ.10 ಬುಧವಾರದಿಂದ ಆರಂಭವಾಗಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮೀನಳ್ಳಿ ತಾಯಣ್ಣ ತಿಳಿಸಿದರು.
ಅವರು ಈ ಕುರಿತು ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ ಭಕ್ತರ ಸಹಕಾರದಿಂದ ಕಳೆದ ಮೂರು ವರ್ಷಗಳಿಂದ ಅತೀ ವೈಭವದಿಂದ ಈ ಶರನ್ನವರಾತ್ರಿ ಉತ್ಸವಗಳು ನಡೆಯುತ್ತಿವೆ. ಈ ದೇವಸ್ಥಾನವು ಕಳೆದ 50 ವರ್ಷಗಳಿಂದ ಇಲ್ಲಿ ಚಿಕ್ಕದಾಗಿದ್ದ ಈ ದೇವಸ್ಥಾನವನ್ನು ಭಕ್ತರ ಸಹಕಾರದಿಂದ ಕಳೆದ 10 ವರ್ಷಗಳಿಂದ ಅಭಿವೃದ್ದಿ ಮಾಡುತ್ತಾ ಬಂದಿದ್ದೇವೆ.
ಇಲ್ಲಿ ದಸರಾ ಸಂಭ್ರಮದಲ್ಲಿ ಪ್ರತೀ ದಿನವು ವಿಶೇಷ ಪೂಜೆ, ಹೋಮ, ಹವನ, ಹಾಗೂ ಸಂಜೆ ಪಲ್ಲಕ್ಕಿ ಉತ್ಸವ ನಡೆಯಲಿದ್ದು. ಅ.17ರಂದು ಬೆಳಿಗ್ಗೆ 6 ಗಂಟೆಗೆ ಚಂಡಿ ಹೋಮಾ, ಅಭಿಶೇಕ, ದೇವಿಗೆ ವಿಶೇಷ ಅಲಂಕಾರ, ಮಹಾಮಂಗಳಾರ್ಥಿ, ಮತ್ತು ದೇವಸ್ಥಾನಕ್ಕೆ ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೂ ಅನ್ನಪ್ರಸಾದ ಕಾರ್ಯಕ್ರಮ ನಡೆಯಲಿದೆ.
ಅದೇರೀತಿ ಈ ದಸರಾ ಪ್ರಯುಕ್ತ ಪ್ರತೀ ದಿನವು ವಿಷ್ನು ಸ್ವರೂಪಿ ದುರ್ಗಾ ಮಾತೆಗೆ ವಿವಿದ ರೀತಿಯ ಅಲಂಕಾರ ಸೇವೆ, ಪಾರಾಯಣ, ಪೂಜೆ, ನಡೆಯುತ್ತದೆ. ದಿನನಿತ್ಯ ನಡೆಯುವ ಹೋಮಾದಲ್ಲಿ ಕೂಡುವ ಭಕ್ತಾಧಿಗಳು ದೇವಸ್ಥಾನದ ಟ್ರಷ್ಟಗಳ ಹತ್ತಿರ ನೀಗದಿತ ಶುಲ್ಕವನ್ನು ಪಾವತಿಸಿ ಹೋಮದಲ್ಲಿ ಪಾಲ್ಗೊಳ್ಳಬಹುದು ಎಂದರು.
ಬುಧವಾರ ಮೊದಲನೇ ದಿನ ದುರ್ಗಾದೇವಿ ಅಲಂಕಾರ, ಗುರುವಾರ ಬಾಲತ್ರಿಪೂರ ಸುಂದರಿ ಅಲಂಕಾರ, ಶುಕ್ರವಾರ ಗಾಯತ್ರಿದೇವಿ ಅಲಂಕಾರ, ಶನಿವಾರ ಅನ್ನಪ್ರರ್ಣೆಶ್ವರಿ ಅಲಂಕಾರ, ಭಾನುವಾರ ಲಲಿತಾದೇವಿ ಅಲಂಕಾರ, ಸೋಮುವಾರ ಸರಸ್ವತಿದೇವಿ ಅಲಂಕಾರ, ಮಂಗಳವಾರ ಮಹಾಲಕ್ಷಿದೇವಿ ಅಲಂಕಾರ, ಬುಧವಾರ ಮಹಿಶಾಸೂರು ಮರ್ದಿನಿ ಅಳಂಕಾರ, ಗುರುವಾರ ರಾಜರಾಜೇಶ್ವರಿ ಅಲಂಕಾರ, ಹಾಗೂ ಶುಕ್ರವಾರ ಶರನ್ನವರಾತ್ರಿಯ ಕೊನೆಯೆ ದಿನವಾಗಿದ್ದು ಅಂದು ವಿಜಯದಶಮಿ ಪ್ರಯುಕ್ತ ದೇವಿಗೆ ವಿಶ್ವರೂಪ ಅಲಂಕಾರ ಜರುಗಲಿದೆ ಎಂದು ವಿವಿರಿಸಿದರು.
ಈ ಪತ್ರಿಕಾಗೋಷ್ಟಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಜಂಟಿಕಾರ್ಯದರ್ಶಿ ಯರಿಸ್ವಾಮಿ, ಉಪಾಧ್ಯಕ್ಷ ಕೃಷ್ಟ (ಕಿಟ್ಟ), ಖಜಾಂಚಿ ರಾಮಮೋಹನಗೌಡ, ಸದಸ್ಯರುಗಳಾದ ರಾದಮ್ಮ, ಚಂಚಯ್ಯ, ರಮೇಶ್, ವಿಜಯಕುಮಾರ, ಸುನಿಲ್, ಪ್ರಕಾಶ, ಹಾಗೂ ದೇವಸ್ಥಾನದ ಅರ್ಚಕರಾದ ಆದಿ ಶೇಷಾಚಾರ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








