ಮಿಡಿಗೇಶಿ
ಜನವರಿ 27 ಮಧಿಗಿರಿ ಮಿಡಿಗೇಶಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಸುಗಳ ಕಳುವು ಪ್ರಕರಣಗಳು ನಡೆದಿದ್ದು, ಸದರಿ ಕಳವು ಪ್ರಕರಣಗಳು ಪತ್ತೆಯಾಗದಿರುವ ಮುಂಚಿತವಾಗಿ ಮಾಸುವ ಮುನ್ನವೇ ಮತ್ತೆ ಮನೆಯ ಬಿಗಗಳನ್ನು ಮುರಿದು ನಗದು ಹಣ, ಬೆಳ್ಳಿ, ಬಂಗಾರದ ಆಭರಣಗಳು, ಜಮೀನಿಗೆ ಸಂಭಂಧಿಸಿದ ದಾಖಾಲಾತಿಗಳು, ಆಧಾರ್ ಕಾರ್ಡ್, ಐ,ಡಿ,ಕಾರ್ಡ್ ಹಾಗೂ ನಲವತ್ತು ಬೆಳ್ಳಿಯ ಕಾಯಿನ್‍ಗಳು ಕಳುವಾಗಿರುವ ಬಗ್ಗೆ ತಾ 26-1-2019 ರಂದು ರಾತ್ರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಸೇರಿದ ನಲ್ಲೇಕಾಮನಹಳ್ಳಿಯ ಎಸ್.ಸಿ. ಜನಾಂಗದ ನರಸಿಂಹಮೂರ್ತಿರವರು ಊರಲ್ಲಿಲ್ಲದ ಸಮಯದಲ್ಲಿ ಕಳ್ಳತನ ನಡೆದಿರುವುದಾಗಿ. ತಾ 27-1-2019ರಂದು ಮಿಡಿಗೇಶಿ ಪೋಲೀಸ್ ಠಾಣೆಗೆ ಕಳ್ಳತನವಾಗಿರುವ ಬಗ್ಗೆ ಲಿಖಿತ ದೂರನ್ನು ನೀಡುವುದಾಗಿ ಪತ್ರಿಕೆಗೆ ನರಸಿಂಹಮೂರ್ತಿ ತಿಳಿಸಿರುತ್ತಾರೆ.
ಕಳುವಾಗಿರುವ ಬಗ್ಗೆ ವಿವರ: 65,000 ನಗದು, ಎರಡು ಉಂಗುರಗಳು, ಎರಡರಿಂದ ಇಪ್ಪತ್ತು ಗ್ರಾಂ ತೂಕದ್ದವು, ಒಂದು ಬಂಗಾರದ ಕೊರಳಿನ ಚೈನು, 20 ಗ್ರಾಂ ತೂಕದ್ದು, ಇಬ್ಬರು ಹೆಣ್ಣು ಮಕ್ಕಳು ಬಂಗಾರದ ಗುಂಡು ಮತ್ತು ಡ್ರಾಪ್ಸ್‍ಗಳು, ಜಮೀನಿಗೆ ಸಂಭಂಧಿಸಿದ ದಾSಲಾತಿಗಳು, ನಲವತ್ತು ಬೆಳ್ಳಿ ಕಾಯಿನ್‍ಗಳು, ಆಧಾರ್ ಕಾರ್ಡ್, ಚುನಾವಣೆಗೆ ಸಂಭಂಧಿಸಿದ ಐ.ಡಿ.ಕಾರ್ಡ್ ಇತ್ಯಾದವುಗಳು. ಮನೆಯ ಟ್ರಂಕನಲ್ಲಿಟ್ಟಿದ್ದನೆಂದು ತಿಳಿಸಿರುತ್ತಾರೆ. ಸದರಿ ನರಸಿಂಹಮೂರ್ತಿಯ ಮನೆಯ ಎರಡು ಬೀಗಗಳನ್ನು ಹಾಗೂ ಟ್ರಂಕ್ ಬೀಗವನ್ನು ಹೊಡೆದಿರುತ್ತಾರೆ, ಸದರಿ ಟ್ರಂಕ್‍ನ್ನು ಮನೆಯಿಂದ ನೂರಾರು ಮೀಟರ್ ದೂರದ ಜಗನ್ನಾಥ ರೆಡ್ಡಿರವರ ಜಮೀನಿನಲ್ಲಿ ಬಿಸಾಕಿ ಬಟ್ಟೆ ಬರೆಗಳನ್ನು ಚೆಲ್ಲಾಡಿ ಹೋಗಿರುತ್ತಾರೆ.
ಅದೇ ದಿನದಂದು ಬಿದರಕೆರೆ ಗ್ರಾಮದಲ್ಲಿ ಎರಡು ಮನೆಗಳಿಗೆ ಕಳ್ಳತನ ಯತ್ನ ವಿಫಲ.ಬಿದರಕೆರೆ ಗ್ರಾಮದ ಜಗದೀಶ್ ಎನ್ನುವವರ ಮನೆಯಲ್ಲಿ ಎರಡು ಬಾಗಿಲು ಬೀಗ ಹೊಡೆದು ಮೂರನೇ ಬಾಗಿಲಿನ ಬೀಗ ಹೊಡೆಯಲು ಪ್ರಯತ್ನ ಮಾಡಿದ್ದು ವಿಫವಾಗಿದ್ದು ಯಾವುದೇ ಕಳ್ಳತನ ಮಾಡಿಲ್ಲ, ಹಾಗೂ ಜಗದೀಶ್ ಮನೆಯ ಮುಂಭಾಗ ಸುಧಾಕರ್ ರವರ ಮನೆಗೂ ಸಹ ಬಾಗಿಲು ಬೀಗ ಹೊಡೆದಿದ್ದು ವಿಫಲ ಯತ್ನ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
