ಪಾವಗಡ
ದೇಶಕ್ಕೆ ಅನ್ನ ನೀಡುವ ರೈತನ ಮೇಲೆ ಕೇಂದ್ರ ಸರ್ಕಾರ ದೌರ್ಜನ್ಯ ನಡೆಸಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಮತ್ತು ಹಸಿರು ಸೇನೆ ಸಂಘದ ಅಧ್ಯಕ್ಷ ಪೂಜಾರಪ್ಪ ತಿಳಿಸಿದರು.
ದೆಹಲಿ ಗಡಿಯಲ್ಲಿ ಪೊಲೀಸರು ಅಕ್ಟೋಬರ್ 2 ರ ಗಾಂಧಿ ಜಯಂತಿ ದಿನದಂದು ದೆಹಲಿ ಪೊಲೀಸರು ರೈತರ ಮೇಲೆ ನಡೆಸಿರುವ ದೌರ್ಜನ್ಯವನ್ನು ಖಂಡಿಸಿ ಬುಧವಾರ ರೈತ ಸಂಘದಿಂದ ಪಾವಗಡ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿ ಮಾತನಾಡಿದರು.
ಸುಮಾರು 30 ಸಾವಿರ ರೈತರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜಧಾನಿ ದೆಹಲಿಗೆ ಆಗಮಿಸುತ್ತಿದ್ದಾಗ ದೆಹಲಿ ಗಡಿ ಪೊಲೀಸರು ತಡೆದು ಲಾಠಿ ಛಾರ್ಜ್ ಮಾಡಿ, ಜಲಫಿರಂಗಿಯಿಂದ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿರುವುದು ರೈತರಿಗೆ ಮಾಡಿದ ಅವಮಾನ. ರೈತರ ಬೇಡಿಕೆಗಳನ್ನು ತಿರಸ್ಕರಿಸುವುದು ಸರಿಯಲ್ಲ. ಬಿಜೆಪಿಯ ಕೇಂದ್ರ ಸರ್ಕಾರ ಕೂಡಲೆ ಪತನವಾಗಲೇ ಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಜಿಲ್ಲಾ ಮುಖಂಡ ಕೆ.ಇ. ಗೋಪಾಲ್ ಮಾತನಾಡಿದರು. ಗ್ರೇಡ್- 2 ತಹಸೀಲ್ದಾರ್ ಹನುಮಂತಯ್ಯಗೆ ಮನವಿ ಪತ್ರ ಸಲ್ಲಿಸಲಾಯಿತು. ಮುತ್ತಿಗೆಯಲ್ಲಿ ವಿ.ಗಿರೀಶ್, ರಾಮಣ್ಣ, ಸದಾಶಿವಪ್ಪ, ಹನುಮಂತರಾಯಪ್ಪ, ಓಬಳಪ್ಪ, ನರಸಪ್ಪ, ಎ.ಈರಪ್ಪ, ಕೆ.ವೈ. ಸಿದ್ದಪ್ಪ, ಜಂಪಯ್ಯ, ಲಕ್ಷ್ಮನಾಯ್ಕ, ಗುಡುಪಾಲಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
