ಶಿಗ್ಗಾವಿ : ಖಾಸಗಿ ವಾಹನಗಳ ನಿಲುಗಡೆಯ ತಾಣವಾಗಿ ಮಾರ್ಪಟ್ಟ ಹಳೆ ಬಸ್ ನಿಲ್ದಾಣ

ಶಿಗ್ಗಾವಿ :

     ಪಟ್ಟಣದ ಹೃದಯ ಭಾಗದಲ್ಲಿರುವ ಹಳೆ ಬಸ್ ನಿಲ್ದಾಣ ಈಗ ಸಾರ್ವಜನಿಕ ವಾಹನಗಳ ನಿಲುಗಡೆಯ ತಾಣವಾಗಿ ಮಾರ್ಪಟ್ಟಿದೆ, ಇದು ಹೆಸರಿಗೆ ಮಾತ್ರ ಹಳೆ ಬಸ್ ನಿಲ್ದಾಣ ಇಲ್ಲಿ ಖಾಸಗೀ ವಾಹನಗಳ ನಿಲುಗಡೆಯೇ ಹೆಚ್ಚಾಗಿದೆ, ಸಂಭಂದಿಸಿದ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಮಾತ್ರ ಇದು ನಮ್ಮ ಬಸ್ ನಿಲ್ದಾಣವೇ ಅಲ್ಲ ಎಂದು ವರ್ತಿಸುತ್ತಿರುವುದರಿಂದ ಖಾಸಗೀ ವಾಹನಗಳ ದರ್ಭಾರ್ ಜೊತೆಗೆ ಕಸದ ರಾಶಿಗಳ ಉತ್ಪತ್ತಿಯ ತಾಣ ಮತ್ತು ಸಾರ್ವಜನಿಕರಿಗೆ ಶೌಚಾಲಯದ ತಾಣವಾಗಿ ಮಾರ್ಪಟ್ಟಿದೆ.

     ಪ್ರತಿದಿನ ವಿವಿಧ ಗ್ರಾಮಗಳಿಂದ ಸಾವಿರಾರು ಜನತೆ ವಿವಿಧ ಕಾರ್ಯಗಳಿಗೆ ಶಿಗ್ಗಾವಿ ಪಟ್ಟಣಕ್ಕೆ ಆಗಮಿಸುತ್ತಾರೆ ಅವರನ್ನು ಹೊತ್ತು ತಂದ ಖಾಸಗೀ ವಾಹನಗಳ ನಿಲುಗಡೆಗೆ ಮತ್ತು ಮೂತ್ರ ವಿರ್ಜನೆಗೆ ಮಾತ್ರ ಹಳೆ ಬಸ್ ನಿಲ್ದಾಣವೇ ಆಸರೆಯಾಗಿದೆ.

     ಕಸದ ರಾಶಿ ಜೊತೆಗೆ ಮೂತ್ರ ವಿಸರ್ಜನೆಯ ಜಾಗವಾಗಿ ಮಾರ್ಪಾಡು : ಹಳೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ಕಸವನ್ನು ಎಲ್ಲೆಂದರಲ್ಲಿ ಎಸೆಯುವದರಿಂದ ಬಸ್ ನಿಲ್ಧಾಣದ ಹಿಂದೆ ಮತ್ತು ಮುಂದೆ ಕಸದ ರಾಶಿ ಹೆಚ್ಚಾಗಿದೆ ಜೊತೆಗೆ ಮಳೆಗಾಲವಾಗಿರುವುದರಿಂದ ಜನತೆಯ ಮೂತ್ರ ವಿಸರ್ಜನೆಗೆ ಹಳೆ ಬಸ್ ನಿಲ್ದಾಣವೇ ಗತಿಯಾಗಿದೆ ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಎಂಬ ನಾಮಫಲಕವಂತೂ ಮೊದಲೇ ಇಲ್ಲ ಜೊತೆಗೆ ಜನತೆಗೂ ಅದರ ಅರಿವೇ ಇಲ್ಲ ಇದರಿಂದ ರೋಗಗಳು ಸಾಮಾನ್ಯವಾಗುತ್ತಿವೆ.

ಅನೈತಿಕ ಚಟುವಟಿಕೆಗಳ ತಾಣವಾಗಿ ಹಳೆ ಬಸ್ ನಿಲ್ದಾಣ. 

      ಹಳೆ ಬಸ್ ನಿಲ್ದಾಣದಲ್ಲಿ ರಾತ್ರಿಯ ವೇಳೆಯಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದೆ ಜನ ಸಂಚಾರ ಕಡಿಮೆ ಇರುವುದರಿಂದ ಅಲ್ಲಿ ಅನೈತಿಕ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಂತೆ ಭಾಸವಾಗುತ್ತಿದೆ ಎನ್ನಬಹುದು, ಕೂಡಲೇ ಅಲ್ಲಿಯ ವಿದ್ಯುತ್ ವ್ಯವಸ್ಥೆ ಮಾಡಿ ಒಬ್ಬ ಕಾವಲುಗಾರರನ್ನು ನೇಮಿಸಬೇಕೆಂಬುದು ಸಾರ್ವಜನಿಕರ ವಾದವಾಗಿದೆ.

ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ನಿರ್ಲಕ್ಷ್ಯ :

       ಬಸ್ ನಿಲ್ದಾಣದ ಈ ಅವಸ್ಥೆಗೆ ಸಂಭಂದಿಸಿದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎನ್ನಲಾಗಿದ್ದು ಮೊದಲು ಅಧಿಕಾರಿಗಳು ಅಲ್ಲೋಬ್ಬ ಸಿಬ್ಬಂದಿ ನೇಮಿಸಿ ಸ್ವಚ್ಚತೆ ಸೇರಿದಂತೆ ಖಾಸಗೀ ವಾಹನಗಳ ನಿಲ್ಲದಂತೆ ಕ್ರಮ ಜರುಗಿಸಿದ್ದರು, ಆದರೆ ಇತ್ತೀಚೆಗೆ ಹಳೆ ಬಸ್ ನಿಲ್ದಾಣವನ್ನು ನಿರ್ಲಕ್ಷಿಸಿ ಮತ್ತದೆ ಹಳೆ ಚಾಳಿಯನ್ನು ಮುಂದುವರೆಸಿರುವುದು ಜನತೆಯ ಮತ್ತು ಅಕ್ಕಪಕ್ಕದ ವ್ಯಾಪಾರಸ್ಥರ ಅಕ್ರೋಷಕ್ಕೆ ಕಾರಣವಾಗಿದೆ.

         ಒಟ್ಟಾರೆ ಹಳೆ ಬಸ್ ನಿಲ್ದಾಣ ಹಲವಾರು ದಿನಗಳಿಂದ ನಿರ್ವಣೆಯಿಲ್ಲದೆ ವಿವಿಧ ಖಾಸಗೀ ವಾಹನಗಳ ನಿಲುಗಡೆಯ ತಾಣದ ಜೊತೆಗೆ ಅನೈತಿಕ ತಾಣವಗಿದೆ ಇದಕ್ಕೆ ಸೂಕ್ತ ನಿರ್ವಹಣೆ ಮಾಡುವ ಮೂಲಕ ಇಲ್ಲೋಬ್ಬ ಸಿಬ್ಬಂದಿ ನೇಮಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap