ಮಧುಗಿರಿಯಲ್ಲಿ ಶೇ.74.38 ಮತದಾನ ..!!

ಮಧುಗಿರಿ

     ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 169 ರಲ್ಲಿ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹಾಗೂ ಕುಟುಂಬದವರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

      ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೊಂದು ಮಹತ್ವದ ಚುನಾವಣೆಯಾಗಿದ್ದು, ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ತಮ್ಮ ಪತ್ನಿ ಮಿಡಿಗೇಶಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಶಾಂತಲಾರಾಜಣ್ಣ ದೋಡ್ಡೇರಿ ಹೋಬಳಿಯ ಕಿತ್ತಗಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

       ಇಂದು ತುಮಕೂರಿನ ನಮ್ಮ ಮನೆಗೆ ಲೋಕಸಭಾ ಅಭ್ಯರ್ಥಿ ಜಿ.ಎಸ್.ಬಸವರಾಜು ಸೌಹಾರ್ದಯುತವಾದ ಭೇಟಿ ನೀಡಿದ್ದಾರೆ ಅಷ್ಟೆ. ನನಗೆ ಚಿರಪರಿಚಿತರಾಗಿದ್ದಾರೆ, ಮೊದಲಿನಿಂದಲೂ ಬಸವರಾಜು ಕಾಂಗ್ರೆಸ್‍ನವರೊಂದಿಗೆ ಉತ್ತಮವಾದ ಸಂಬಂಧ ಹೊಂದಿದ್ದಾರೆ. ರಾಜಕೀಯವೆ ಬೇರೆ, ಪ್ರೀತಿ ವಿಶ್ವಾಸವೆ ಬೇರೆ ಎಂದರು.

      ಶಾಸಕ ಎಂ.ವಿ.ವೀರಭದ್ರಯ್ಯ ಮತ್ತು ಮಗ ಕಾರ್ತಿಕ್ ಮತಗಟ್ಟೆ 171 ರಲ್ಲಿ ಮತ ಚಲಾಯಿಸಿ ನಂತರ ಮಾತನಾಡಿದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಾಲಾಯಿಸುತ್ತಿದ್ದು ಮುಂದಿನ ಕಾಲಾವಧಿಯಲ್ಲಿ ಮತ್ತಷ್ಟೂ ಮತಗಳನ್ನು ಮತದಾರರು ಚಲಾಯಿಸಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು.

       ಮಧುಗಿರಿ ಲೋಕಸಭಾ ಕ್ಷೇತ್ರ-139ರಲ್ಲಿ 248 ಮತಗಟ್ಟೆಗಳಿದ್ದು ಒಟ್ಟು 193946 ಮತದಾರರಲ್ಲಿ 98152 ಗಂಡು 95791 ಮಹಿಳಾ ಮತದಾರರಿದ್ದಾರೆ. ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ. ಕೆಲವೊಂದು ಮತಗಟ್ಟೆಗಳಲ್ಲಿ ಮತ ಯಂತ್ರಗಳು ಕೈಕೊಟ್ಟಿದ್ದು ಮತ ಯಂತ್ರಗಳನ್ನು ಸರಿಪಡಿಸಿದ ನಂತರ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಪಟ್ಟಣದ ಕೆಲವು ಕಡೆ ವಿಶೇಷ ಚೇತನರಿರುವ ಮತಗಟ್ಟೆಗಳಲ್ಲಿ ಚುನಾವಣ ಆಯೋಗದ ವತಿಯಿಂದ ಉಚಿತ ಆಟೋಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.

      ಕೈ ಕೊಟ್ಟ ವಿವಿಪ್ಯಾಟ್:ಲೋಕ ಚುನಾವಣೆಯಲ್ಲಿ ಸುಮಾರು 4 ರಿಂದ 8 ವಿವಿ ಪ್ಯಾಟ್‍ಗಳು ಕೈಕೊಟ್ಟಿವೆ ನಂತರ ಅವುಗಳನ್ನು ಬದಲಾಯಿಸಿ ಹೆಚ್ಚುವರಿ ವೇಳೆಯನ್ನು ನಿಗಧಿಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿ ಕೊಡಲಾಯಿತು. ಕೆಲವೊಂದು ಕಡೆ ನಿರ್ದಿಷ್ಟವಾಗಿ ಮತ ಯಂತ್ರಗಳನ್ನು ಜೋಡಿಸದೆ ಅಧಿಕಾರಿಗಳು ಗೊಂದಲಕ್ಕೀಡಾಗಿದ್ದರು.

      ತಾಲ್ಲೂಕಿನಲ್ಲಿ ಬೆ.7 ರಿಂದ 1 ಗಂಟೆಯವರೆವಿಗೆ ಬಿಸಿಲ ತಾಪ ಹೆಚ್ಚಾಗಿದ್ದರಿಂದ ಮತದಾನವು ಚುರುಕುಗೊಂಡಿರಲಿಲ್ಲ ಆದರೆ ಬೆಳಗ್ಗೆ 9 ಗಂಟೆಗೆ ಶೇ.14, ಮಧ್ಯಾಹ್ನ 3 ಗಂಟೆಗೆ 51.04 ಮತದಾನ ನಡೆದಿದ್ದು ಸಂಜೆ 6ರ ವೇಳೆಗೆ 74.38 ಮತದಾನ ನಡೆದಿರುವುದು ಕಂಡು ಬಂದಿದ್ದು 2014ರಲ್ಲಿ ನಡೆದ ಲೋಕ ಚುನಾವಣೆಯಲ್ಲಿ 70.59ರಷ್ಟು ಮತದಾನ ವಾಗಿತ್ತು ಈ ಬಾರಿ ಹೊಸ ಮತದಾರರ ಸೇರ್ಪಡೆಯಿಂದಾಗಿ ಶೇ3.59ರಷ್ಟು ಮತದಾನ ಹೆಚ್ಚಳವಾಗಿದೆ.

      ಮತದಾನ ಮಾಡಿ ಮೃತಪಟ್ಟ: ಪಟ್ಟಣದ ಮತಗಟ್ಟೆ 163ರ ಮತಗಟ್ಟೆಯಲ್ಲಿ ಮಂಜುನಾಥ್ (40) ಮತದಾನ ಮಾಡಿ ತನ್ನ ಆಟೋ ರಿಕ್ಷಾದಲ್ಲಿ ವಾಪಸ್ಸು ಬರುವಾಗ ಏನೋ ಶಬ್ದ ಬರುತ್ತಿದೆಯೆಂದು ತಿಳಿದು ನೋಡುವಾಗ ಪಾವಗಡ ಮಾರ್ಗವಾಗಿ ಬಂದ ಲಾರಿಯೊಂದು ಆಟೋಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link