ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು;ಸ್ವಾಮಿ

ಚಿತ್ರದುರ್ಗ;

     ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ದ್ವಿಚಕ್ರಗಳ ಸವಾರರು ಹಗಲು ರಾತ್ರಿ ಹೆಲ್ಮೆಟ್ ಇಲ್ಲದೇ ಗಾಡಿ ಚಲಾಯಿಸುತ್ತಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರು ಶಾಲಾ ಕಾಲೇಜುಗಳು, ವಾರಕ್ಕೋಮ್ಮೆಯಾದರು ಹೆಲ್ಮೆಟ್ ಜಾಗೃತಿ ಜಾಥಾ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಜನರನ್ನ ಪರಿವರ್ತಿಸಬೇಕು ಎಂದು ಪರಿಸರವಾದಿ ಡಾ|| ಹೆಚ್.ಕೆ. ಎಸ್. ಸ್ವಾಮಿ ನುಡಿದರು.

      ಅವರು ಎನ್ ಹೆಚ್.4 ವೃತ್ತ, ವಿಜ್ಞಾನ ಕೇಂದ್ರ, ಚಿನ್ಮೂಲಾದ್ರಿ ರಾಷ್ಟ್ರೀಯ ಪ್ರೌಡಶಾಲೆ, ವಿದ್ಯಾ ಭಾರತಿ ಪ್ರೌಡಶಾಲೆ, ವಾಸವಿ ಮಹಿಳಾ ಸಂಘ, ವಿಜ್ಞಾನ ಕಾಲೇಜ್ ಸಂಯುಕ್ತವಾಗಿ ಆಯೋಜಿದ್ದ ಹೆಲ್ಮೆಟ್ ಜನ ಜಾಗೃತಿ ಕಾರ್ಯಕ್ರಮದಲ್ಲಿ ಬಾಗವಹಿಸುತ್ತಾ ಮಾತನಾಡುತ್ತಿದ್ದರು.

      ವಾಸವಿ ಮಹಿಳಾ ಸಂಘದ ಆಧ್ಯಕ್ಷರಾದ ಶ್ರೀಮತಿ ಸುಧಾರವರು ಮಾತನಾಡುತ್ತಾ ಮಹಿಳೆಯರು ಹೆಚ್ಚು ಜವಾಬ್ಧಾರಿಯಿಂದ ವಾಹನ ಚಲಾಯಿಸಬೇಕು. ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಯಾವ ಸಮಯದಲ್ಲಿ, ಯಾರಿಗಾದರು, ಯಾವಾಗಬೇಕಾದರು ಅಪಘಾತಗಳಾಗಬಹುದು, ಆದ್ದರಿಂದ ವಾಹನ ಸವಾರರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು ಎಂದರು.

     ಪರಿಸರ ತಜ್ಞ ಡಾ|| ಕೆ.ಕೆ. ಕಾಮಾನಿ ಮಾತನಾಡುತ್ತಾ ರಸ್ತೆ ನಿಯಮಗಳ ಉಲ್ಲಂಘನೆ ಹೆಚ್ಚಾಗುತ್ತಿದ್ದು, ಅಪಘಾತಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಮಕ್ಕಳು ವಾಹನ ಚಲಾಯಿಸಬಾರದು, ದೊಡ್ಡವರು ಜವಾಬ್ಧಾರಿ ತೆಗೆದುಕೊಳ್ಳಬೇಕು, ಬೇರೆಯವರ ವಾಹನ ಪಡೆದು ವಾಹನ ಚಲಾಹಿಸುವುದು ಸಹ ಅಪಾಯಕರ. ಇದೆಲ್ಲವನ್ನ ಶಿಕ್ಷಕರು ಮಕ್ಕಳಿಗೆ ಅವಿರತವಾಗಿ ಬೋಧಿಸುತ್ತಿರಬೇಕು ಎಂದರು.

     ವಿಜ್ಞಾನ ಶಿಕ್ಷಕರಾದ ಶ್ರೀನಿವಾಸ ಮಾತನಾಡಿ, ವಿಜ್ಞಾನದ ಅವಿಷ್ಕಾರ ಹೆಲ್ಮೆಟ್, ವೇಗ ಹೆಚ್ಚಾಗಿರುವ ರಸ್ತೆಗಳಲ್ಲಿ ವಾಹನ ಚಲಾಯಿಸುವರು ಹೆಲ್ಮೆಟ್ ಸ್ವ ಇಚ್ಛೆಯಿಂದ ಧರಿಸಬೇಕು. ಕಾನೂನು ಭಯಕ್ಕಿಂತ ಪ್ರಾಣಭಯ ಇರಬೇಕು ಎಂದರು.

      ದೈಹಿಕ ಶಿಕ್ಷಕರಾದ ಶ್ರೀ ದೈಹಿಕ ಶಿಕ್ಷಕರಾದ ರಘುನಾಥ ಮಾತನಾಡಿ ಹೆಲ್ಮೆಟ್‍ಗಳಲ್ಲೂ ನ್ಯೂನ್ಯತೆಗಳಿವೆ, ಅವುಗಳನ್ನ ಧರಿಸಿ ಅಪಘಾತಗಳಾಗಿವೆ, ಅದ್ದರಿಂದ ಹೆಲ್ಮಟ್ ತಯಾರಕರು, ಅದರ ಗುಣ ಮಟ್ಟ, ಶಬ್ಧ, ಗಾಳಿ ಚಾಲಕರಿಗೆ ಒದಗುವಂತೆ ಏರ್ಪಾಡು ಮಾಡಬೇಕು, ಹೆಲ್ಮೆಟ್ ಧರಿಸುವ ಸವಾರನಿಗೆ ಯಾವುದೇ ದೈಹಿಕ, ಮಾನಸಿಕ ಕಿರಿಕಿರಿಯಾಗಬಾರದು ಎಂದರು.

      ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರು ಸಿ.ಬಿ ಚಿತ್ತಯ್ಯ, ವಿದ್ಯಾ ಭಾರತಿ ಮು.ಶಿ. ಗಂಗಾಧರಪ್ಪ, ವಿಜ್ಞಾನ ಶಿಕ್ಷಕರಾದ ನಿರಂಜನ ಮೂರ್ತಿ, ಗ್ರಾಮಂತರ ಪೋಲಿಸ್ ಇಲಾಖೆಯ ಪೋಲಿಸ್ ಪೇದೆ ಶ್ರೀ ವೀರೇಶ್, ವಾಸವಿ ಮಹಿಳಾ ಸಂಘದ ಶ್ರೀಮತಿ ಪ್ರತಿಭಾ ವಿಶ್ವನಾಥ ಜಾಗೃತಿ ಜಾಥಾದಲ್ಲಿ ಬಾಗವಹಿಸಿದ್ದರು. ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ, ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸಿ ಎಂಬ ಘೋಷಣೆ ಕೂಗಿ ಎಚ್ಚರಿಸಿದರು.ಕಾರ್ಯಕ್ರಮದಲ್ಲಿ ರಸ್ತೆ ಅಪಘಾತದಿಂದ ಮೃತಪಟ್ಟ ವಿದ್ಯಾರ್ಥಿನಿ ಅಮೃತಾಳಿಗೆ ಶ್ರಂದ್ಧಾಂಜಲಿ ಅರ್ಪಿಸಲಾಯಿತು. 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap