ಪಾವಗಡ;-
ತಾಲ್ಲೂಕಿನ ರೈತರು ಹಾಗೂ ಕೂಲಿ ಕಾರ್ಮಿಕರು ಮಟ್ಕಾ ಮತ್ತು ಜೂಜಾಟಕ್ಕೆ ತುತ್ತಾಗಿ,ಬಡಕುಟುಂಬಗಳು ಬೀದಿ ಪಾಲಾಗುತ್ತಿದ್ದು,ಇಲ್ಲಿನ ರಕ್ಷಣಾಧಿಕಾರಿಗಳು ತಡೆಗಟ್ಟಲು ಮೀನ ಮೇಷ ಎನುಸುತ್ತಿರುವುದು ಸಾರ್ವಜನಿಕರು ಖಂಡಿಸಿದ್ದಾರೆ.
ರಾಜ್ಯದಲ್ಲಿ ಅತಿ ಹಿಂದುಳಿದ ತಾಲೂಕು ಎಂದೇ ಹೆಸರು ಪಡೆದ ಪಾವಗಡ ತಾಲ್ಲೂಕು ಸತತವಾಗಿ 15 ವರ್ಷಗಳಿಂದ ಮಳೆ ಬೆಳೆ ಇಲ್ಲದೆ ಇಲ್ಲಿನ ರೈತರು ಕಂಗಾಲಾಗಿದ್ದು,ಇಂತಹ ಸಂದರ್ಭದಲ್ಲಿ ಮಟ್ಕಾ ಮತ್ತು ಇಸ್ವೀಟ್‍ನ ಜೂಜುಕೋರರಿಗೆ ಇಲ್ಲಿನ ಪೋಲಿಸರು ಹಣಕ್ಕಾಗಿ ಕಣ್ಣಿದ್ದು ಕುರಡರಂತೆ ವರ್ತನೆ ಮಾಡುತ್ತಿರುವುದು ಶೋಷಣೆಯ ಸಂಗತಿಯಾಗಿದೆ.
ಪಾವಗಡ ತಾಲ್ಲೂಕಿನಲ್ಲಿ ಆರಸೀಕೆರೆ, ವೈ.ಎನ್.ಹೊಸಕೋಟೆ,ತಿರುಮಣಿ,ಪಾವಗಡ ನಗರ ಪೋಲೀಸ್ ಠಾಣಿಗಳಿದ್ದು, 4 ಠಾಣಿಗಳ ವ್ಯಾಪ್ತಿಯಲ್ಲಿ ಇಸ್ವೀಟ್ ರಾಜರೋಷವಾಗಿ ನಡೆಸುತ್ತಾದ್ದಾರೆ ಎಂಬ ಮಾಹಿತಿ ತಿಳಿದು ಬಂದಿದ್ದು,ಜೂಜಾಟ ತಾಣಗಳು ಶೈಲಾಪುರ,ಬೆಳ್ಳಿಬಟ್ಲು, ಯಲ್ಲಪ್ಪನಾಯಕನಹಳ್ಳಿ,ದೊಡ್ಡಹಳ್ಳಿ ಹಾಗೂ ಆಂಧ್ರದ ಕಂಬದೂರು ಮತ್ತು ನಾಗಲಾಪುರ ಕೆರೆಯ ಭಾಗದಲ್ಲಿ ಹಾಗೂ ಬೂದಿಬೆಟ್ಟ, ನಾಗೇನಹಳ್ಳಿ ಗ್ರಾಮದ ಮಧ್ಯ ಭಾಗದಲ್ಲಿ,ಪೋನ್ನಸಮುದ್ರ,ಮೀನುಗುಂಟೆನಹಳ್ಳಿ ಜೂಜಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದರು ಸಹ ಪೋಲೀಸ್ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪಾವಗಡ ನಗರ ಪೋಲೀಸ್ ಠಾಣಿ ವ್ಯಾಪ್ತಿಯ ಪಟ್ಟಣದ ಪಕ್ಕದಲ್ಲಿ ಇರುವ ಹುಲಿಬೆಟ್ಟ ಹತ್ತಿರ ತೋಟವೊಂದರಲ್ಲಿ ,ಜಾಜುರಾಯನಹಳ್ಳಿ ಹಾಗೂ ಕೃಷ್ಣಪುರ ಮಧ್ಯ ಹಳ್ಳದಲ್ಲಿ,ಹೆಗ್ಗಿಲ್ಲದೆ ರಾಜರೋಷವಾಗಿ ದಿನ ಬಿಟ್ಟು ದಿನ ದೊಡ್ಡ ಗಾತ್ರದಲ್ಲಿ ಇಸ್ವೀಟ್ ಜೂಜಾಟ ನಡೆಯುತ್ತಿದ್ದು,ಆಂಧ್ರದ ಗಡಿ ಭಾಗದ ಕನ್ನಮೇಡಿ ರಾಳ್ಳುಪಲ್ಲಿ ಪ್ರಾಂತ್ಯದಲ್ಲಿ ಇಸ್ವೀಟ್ ರಾಜರೋಷವಾಗಿ ಆಡುತ್ತಿದ್ದಾರೆ ಎಂಬ ಮಾಹಿತಿ ಸಹ ತಿಳಿದು ಬಂದಿದೆ.
ಪಾವಗಡ ತಾಲ್ಲೂಕಿನ ನಾಲ್ಕು ಪೋಲೀಸ್ ಠಾಣಿಯಲ್ಲಿ ಹಾಗೂ ಆಂಧ್ರದ ಗಡಿ ಭಾಗದಿಂದಲೂ ಮಟ್ಕಾ ಆಟ ಅನ್ ಲೈನ್ ಮತ್ತು ಪೋನ್ ಮುಕಾಂತರ ನಡೆಯುತ್ತಿದ್ದು,ಪಟ್ಟಣದ ವ್ಯಾಪ್ತಿಯಲ್ಲಿ ಸಂಜೆ ಸಮಯದಲ್ಲಿ ಬೀಟರ್‍ಗಳು ಚೀಟಿ ಬರೆಯುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಆಂಧ್ರ ಪ್ರದೇಶದ ಗಡಿ ಭಾಗದಲ್ಲಿ ಇರುವ ಪಾವಗಡ ತಾಲ್ಲೂಕು ಎಂದರೆ ಸಾಕು? ನಕ್ಸಲ್ ಪ್ರಾಂತ್ಯ ಎಂಬ ವಿಚಾರ ರಾಜ್ಯಕ್ಕೆ ಗೊತ್ತು.ಪಾವಗಡ ತಾಲ್ಲೂಕಿನಲ್ಲಿ 1991 ರಿಂದ 2000 ನೇ ಸಾಲಿನವರಿಗೂ ನಕ್ಸಲ್ ಸಂಘಟನೆಗಳು ತಾಲ್ಲೂಕಿನ ಬೆಟ್ಟ ಗುಡ್ಡಗಳಲ್ಲಿ ಅಡುಗುತಾಣವಾಗಿತ್ತು.ಯಾವೊಂದುರಲ್ಲಿ ಪಾವಗಡ ತಾಲ್ಲೂಕು ರಾಜ್ಯದಲ್ಲಿ ಸುದ್ದಿ ಅಗುತ್ತಿತು.ಇತ್ತೀಚಿಗೆ ನಕ್ಸಲ್ ಬಯದ ವಾತವರಣ ತಣ್ಣಿಗೆ ಅದ ಮೇಲೆ ಬರ ಪೀಡಿತ ಪ್ರದೇಶ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿದ್ದು,ಇಲ್ಲಿನ ರೈತರು ಮಳೆ ಅಶ್ರಿತ ಬೆಳೆ ಶೇಂಗಾವನ್ನು ನಂಬಿ ಜೀವನ ನಡೆಸುತ್ತಿದ್ದರು.
ಅದರೆ ವರ್ಷ ವರ್ಷಕ್ಕೆ ಪ್ರಮುಖ ಶೇಂಗಾ ಬೆಳೆ ನಶಿಸಿ ಹೋಗಿ ಕೈ ಕಸಬು ಕೈ ಬಿಟ್ಟು,ಕೆಲ ಕೃಷಿ ಭೂಮಿಯನ್ನು ಮಾರಾಟ ಮಾಡಿ ಪ್ರಮುಖ ನಗರಗಳಿಗೆ ವಲಸೆ ಹೋಗಿದ್ದು,ಕೆಲ ರೈತರು ಸೋಲಾರ್ ಪಾರ್ಕ್‍ಗೆ ಗುತ್ತಿಗೆ ಆಧಾರದ ಮೇಲೆ ಭೂಮಿಯನ್ನು ನೀಡಿ ಜೀವನ ಸಾಗುಸುತ್ತಿದ್ದು,ಬರ ಪೀಡಿತ ಪ್ರದೇಶದಲ್ಲಿ ಜೂಜಾಟ ಕೇಂದ್ರಗಳು ಬೇಕಾ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ದಂದೆಯಲ್ಲಿ ಮಧ್ಯ ವರ್ಗದ ಜನರು, ಕೂಲಿಕಾರ್ಮಿಕರು,ಶ್ರಮಜೀವಿಗಳು ರಕ್ತ ಹೀರುತ್ತಿದ್ದು,ಹಗಲೆಲ್ಲಾ ದುಡಿದ ಶ್ರಮದ ಹಣ ಮಟ್ಕಾ,ಇಸ್ವೀಟ್ ಕುಡಿಯಲು ಖರ್ಚು ಮಾಡುತ್ತಿದ್ದು,ಕುಟುಂಬದ ಸದಸ್ಯರು ಉಪವಾಸ ಮಳುಗುತ್ತಿದ್ದಾರೆ ಎಂದು ಮಹಿಳಾ ಸ್ತ್ರೀಶಕ್ತಿ ಸಂಘದ ಸದಸ್ಯರು ಆರೋಪಿಸಿದ್ದಾರೆ.
ಬರದ ನಾಡಿನಲ್ಲಿ ಸಮಾಜ ಘಾತುಕ ಚಟುವಟಿಕೆಗಳು ಹೆಗ್ಗಿಲ್ಲದೆ. ಮಟ್ಕಾ,ಇಸ್ವೀಟ್,ಅಕ್ರಮ ಮಧ್ಯ ಮಾರಾಟ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದರು,ಇಲ್ಲಿನ ಪೋಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಅಬಕಾರಿ ಇಲಾಖೆ ನಿರ್ಲಕ್ಷದ ಕಾರಣಗಳು ತಿಳಿದು ಬರುತ್ತಿಲ್ಲ,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸಿ ಈ ದಂದೆಗಳನ್ನು ಹತ್ತಿಕ್ಕುವ ಕೆಲಸ ಮಾಡುವವರೇ ಕಾದು ನೋಡಬೆಕಾಗಿದೆ.
ಈ ಭಾಗದ ಜನರ ಪರಿಸ್ಥಿತಿ ಗಮನ ಹರಿಸದ ಸರ್ಕಾರ ಮತ್ತು ಇಲ್ಲಿನ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಡಿ ಪ್ರದೇಶಕ್ಕೆ ಆಕ್ರಮ ದಂದೆಯನ್ನು ನಿಲ್ಲಿಸಲು ಪೋಲೀಸ್ ಅಧಿಕಾರಿಗಳ ಶ್ರಮ ಅನಿರ್ವಾಯವಾಗಿದೆ.ಇಸ್ವೀಟ್ ಅಡಿಸುವ ದಲ್ಲಾಳಿ ಮತ್ತು ಪೋಲೀಸ್ ಅಧಿಕಾರಿ ದೂರವಾಣಿ ಮೂಲಕ ನಾವು ನೀಡಿದ ಅನುಮತಿ ಮುಕ್ತಾಯವಾಗಿದೆ ನಿನು ಪೋಲೀಸ್ ಠಾಣಿಗೆ ಬಂದು ಕಾಣ ಬೇಕು ಇಲ್ಲವಾದರೆ ರೈಡ್ ಮಾಡುವುದಾಗಿ ಬೇದರಿಕೆ ಹಾಕಿರುವ ವಾಯ್ಸ್ ರೆರ್ಕಾಡ್ ವಾಟ್ಸ್ ಅಫ್‍ಗಳಲ್ಲಿ ಹಾರಾಡುತ್ತಿದೆ.ಇದರಲ್ಲಿ ಭಾಗಿಯಾದ ತಾಲ್ಲೂಕಿನ ಪ್ರಮುಖ ಪೋಲೀಸ್ ಅಧಿಕಾರಿಗಳ ಕೈವಾಡ ಇದೆ ಎಂಬ ಶಂಕೆ ಎದ್ದು ಕಾಣುತ್ತಿದ್ದು,ಇಂತಹ ಅಧಿಕಾರಿಗಳನ್ನು ರೆರ್ಕಾಡ್ ಕೇಳಿ,ಜಿಲ್ಲಾ ವರಿಷ್ಠಾಧಿಕಾರಿಗಳು ಯಾಕೆ ಇವರನ್ನು ಅನಾಮತ್ ಮಾಡಬಾರದು ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತ ಪಡೆಸಿದ್ದಾರೆ.
ಪಾವಗಡದಲ್ಲಿ ಜೂಜಾಟದೇ ದರ್ಭಾರ್, ಯುಗಾದಿ ಹಬ್ಬದ ಸಂದರ್ಭದಲ್ಲಿ 10 ದಿನಗಳ ಕಾಲ ಪೋಲೀಸರಿಂದ ಅನುಮತಿ ನೀಡಿದ್ದಾರೆ ಎಂಬ ಮಾಹಿತಿ ಸಾರ್ವಜನಿಕರಲ್ಲಿ ಕೇಳಿ ಬಂದಿದೆ.
ಇಸ್ವೀಟ್‍ಗೆ ಅನುಮತಿ ನೀಡುವುದರಲ್ಲಿ ಒಬ್ಬ ಅಧಿಕಾರಿ ಅನುಮತಿ ನೀಡಬೇಕು ಎಂದರೆ ಇನ್ನೋಬ್ಬ ಅಧಿಕಾರಿ ನೀಡಬಾರದು ಎಂಬ ಗುದ್ದಾಟ ಒಳಜಗಳ ಎರಡು ಮೂರು ತಿಂಗಳಿಂದಲು ನಡೆಯುತಿದ್ದು,ಪೋಲೀಸ್ ಠಾಣಿಯಲ್ಲಿ ಸಾರ್ವಜನಿಕರಿಗೆ ನೀಡಬೇಕಾದ ನ್ಯಾಯ ಸಿಗುತ್ತಿಲ್ಲ,ಎಂಬ ಮಾಹಿತಿ ತಿಳಿದು ಬಂದಿದೆ.