ಡೊನೇಷನ್ ದಂದೆ : ಹಗಲು ದರೋಡೆಗೆ ಇಳಿದ ಖಾಸಗಿ ಶಿಕ್ಷಣ ಸಂಸ್ಥೆಗಳು…!!

ಪಾವಗಡ

ವಿಶೇಷ ವರದಿ: ರಾಮಾಂಜಿನಪ್ಪ,ಪಾವಗಡ

     ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಿದ್ದರು ಸಹ ಉನ್ನತ ವಿದ್ಯೆಗಾಗಿ ಮಕ್ಕಳನ್ನು ತಂದೆ ತಾಯಿಗಳು ಕಾನ್ವೆಂಟ್‍ಗಳ ಮೊರೆ ಹೋಗುತ್ತಿದ್ದು,ಇದನ್ನೇ ದಂದೆಯಾಗಿಸಿಕೊಂಡು ಕಾನ್ವೆಂಟ್‍ಗಳಲ್ಲಿ ಡೊನೇಷನ್ ಸರ್ಕಾರ ನೀಡಿದ ನೇಮವನ್ನು ಕಡಿಗಣಿಸಿ ಸರ್ಕಾರ ನೀಡಿದ ಧರಕ್ಕಿಂತ ನಾಲ್ಕು ಪಟ್ಟು ಜಾಸ್ತಿ ಹಣ ವಸೂಲು ಮಾಡುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

      ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ಕೊಡಿಸಬೇಕು ಎಂಬ ಕನಸು ತಂದೆ ತಾಯಿಗಳ ಕನಸು ತಪ್ಪಲ್ಲ ಆದರೆ ದುಬ್ಬಾರಿ ಹಣ ನೀಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೋಡಿಸುವುದು ತಪ್ಪು,ಸರ್ಕಾರ ವಿದ್ಯಾಭ್ಯಾಸಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಿ,ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬಡವರ್ಗದ ಹಾಗೂ ಕೂಲಿ ಕಾರ್ಮಿಕರಿಗೆ ಮಕ್ಕಳ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದಲ್ಲಿ ಬೆಳೆಯ ಬೇಕೆಂದು ಸರ್ಕಾರ ಶಾಲೆಗಳ ಜೋತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳ ಜೋತೆಗೆ ಮೊರಾರ್ಜಿ,ಕಿತ್ತೂರಿ ರಾಣಿ ಚನ್ನಮ್ಮ , ಅಂಬೇಡ್ಕರ್,ವಾಜಪೇಯಿ ಹಾಗೂ ಆದರ್ಶ ಶಾಲೆಗಳನ್ನು ತೆರೆದರು ಸಹ ತಂದೆ ತಾಯಿಗಳಿಗೆ ಆಸೆಗೆ ಕೊನೆ ಎಂದು ಎಂಬಂತೆ ನೌಕರರು ಮತ್ತು ಶ್ರೀಮಂತರ ಮಕ್ಕಳಂತೆ ನಮ್ಮ ಮಕ್ಕಳು ಸಹ ಉನ್ನತ ವಿದ್ಯಾಭ್ಯಾಸ ಸಿಗಬೇಕೆ ಎಂಬ ಕನಸ್ಸು ಕಂಡು ದುಡಿದ ಹಣವೆಲ್ಲ,ಕಾನ್ವೆಂಟ್‍ಗಳಿಗೆ ನೀಡುತ್ತಿದ್ದಾರೆ.

         ಸರ್ಕಾರದಿಂದ ಅನುಮೋದನೆ ಪಡೆದ ಕಾನ್ವೆಂಟ್‍ಗಳ ಮಿತಿ ಮೀರಿದ ಡೊನೇಷನ್ ಕಲೇಕ್ಷನ್ ಮಾಡುತ್ತಿದ್ದು,ಕಾನ್ವೆಂಟ್ ಪ್ರಾರಂಭಿಸಲು ಅನುಮತಿ ಪಡೆಯಲು ಸರ್ಕಾರದ ನಿಯಮದ ಪ್ರಕಾರ ಶಾಲೆ ತೆರೆಯಲು ಸರ್ಕಾರದ ನಿಯಮಗಳನ್ನು ಪಾಲಿಸಲು ಒಪ್ಪಿಗೆ ಪಡೆದಿರುತ್ತಾರೆ ಇವೆಲ್ಲವನ್ನು ಗಾಳಿಗೆ ತೂರಿ ಒಬ್ಬ ವಿದ್ಯಾರ್ಥಿಗೆ 15 ರಿಂದ 25 ಸಾವಿರಕ್ಕಿಂತ ಹೆಚ್ಚು ಹಣ ಡೊನೇಷನ್ ರೂಪದಲ್ಲಿ ಪಡೆಯುತ್ತಿದ್ದು,ಕೆಲ ಕಾನ್ವೆಂಟ್‍ಗಳಲ್ಲಿ ಇ.ಟೆಕ್ನೊ ಎಂದು 30 ರಿಂದ 40 ಸಾವಿರ ಡೊನೇಷನ್ ಪಡೆಯುತ್ತಿದ್ದು,ಇದನ್ನು ಯಾರು ಕೇಳೋರು  ಇಲ್ಲದಂತಾಗಿದೆ.

       ಸರ್ಕಾರದ ಆದೇಶ ಪ್ರಕಾರ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲಾಗಳಲ್ಲಿ ಶೈಕ್ಷಣಿಕ ವರ್ಷಕ್ಕೆ ನಿಗದಿ ಪಡೆಸಿದ ಶುಲ್ಕವನ್ನು ಮಾತ್ರ ವಸೂಲಿ ಮಾಡಬೇಕೆಂಬ ಆದೇಶವನ್ನು ಹೊರಡಿಸಿದ್ದು,ಹೆಚ್ಚಿಗೆ ಹಣ ವಸೂಲಿ ದಂದೆಯಲ್ಲಿ ಪಾಲ್ಗೋಂಡ ಕಾನ್ವೆಂಟ್‍ಗಳ ಅನುಮೋದನೆಯನ್ನು ರದ್ದು ಗೋಳಿಸಬೇಕೆಂಬ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ ಎಂಬ ಮಾಹಿತಿ ತಿಳಿದು ಬಂದಿದ್ದು,ಜೂನ್ 1 ರಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗುತ್ತಿದ್ದು,ಇದರ ಮೇದಲೇ ಶಿಕ್ಷಣ ಇಲಾಕೆಯ ಮೇಲಾಧಿಕಾರಿಗಳು ಕಷ್ಟು ನಿಟ್ಟಿನ ಅದೇಶವನ್ನು ಕಾನ್ವೆಂಟ್‍ಗಳಿಗೆ ಕಳಿಸಬೇಕೆಂದು ಪ್ರಜ್ಞಾವಂತ ನಾಗರೀಕರು ಒತ್ತಾಯಿಸಿದ್ದಾರೆ.

       ದುಡ್ಡು ಕೊಟ್ಟು ವಿದ್ಯಾಬ್ಯಾಸ ಪಡೆಯ ಬದಲು ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ವಿವಿಧ ಯೋಜನೆಗಳನ್ನು ರೂಪಿ,ಶ್ರೀಮಂತ,ಬಡವ,ಕೂಲಿ ಕಾರ್ಮಿಕ,ರೈತಾಪಿ ವರ್ಗದ ಎಲ್ಲಾ ಮಕ್ಕಳಿಗೂ ಸಮನಾಗಿ ವಿದ್ಯಾಭ್ಯಾಸ ದೊರೆಯಬೇಕೆನುವ ಉದ್ದೇಶದಿಂದ ಸರ್ಕಾರಿ ಕಿರಿಯ, ಹಿರಿಯ,ಹಾಗೂ ಪ್ರೌಡ ಶಾಲೆಗಳಲ್ಲಿ ಸರ್ಕಾರದಿಂದ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟ,ಕ್ಷೀರಭಾಗ್ಯ ಯೋಜನೆ,ಸಮವಸ್ತ್ರ ,ಸೈಕಲ್ ,ವಿದ್ಯಾರ್ಥಿವೇತನ,ಉಚಿತ ಪಾಠ ಪುಸ್ತಕಗಳು ನೀಡುತ್ತಿದ್ದರು ಕೆಲ ಪೋಷಕರು ಇಂಗ್ಲಿಷ್ ಕಲಿಯಬೇಕೆನ್ನುವ ಆಸೆಗೆ ಕಾನ್ವೆಂಟ್‍ಗಳಿಗೆ ಮಕ್ಕಳನ್ನು ಕಳುಸುತ್ತಿರುವುದು ಎಲ್ಲರಿಗೂ ಗೋತ್ತಿರುವ ವಿಚಾರ.

       ಸರ್ಕಾರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೊರಾರ್ಜಿ ವಸತಿ ನಿಲಯಗಳು,ಕಿತ್ತೂರಿ ರಾಣಿ ಚನ್ನಮ್ಮ ವಸತಿ ನಿಲಯ ಶಾಲೆ,ಶಾಲೆ ಬಿಟ್ಟ ಮಕ್ಕಳಿಗೆ ಕಸ್ತೂರಿಬಾ ವಸತಿ ಶಾಲೆ,ಆದರ್ಶಶಾಲೆ,ಅಟಲ್ ಜೀ ವಾಜಪೇಯಿ ಹಾಗೂ ಶಾಲಾ ಕಾಲೇಜುಗಳನ್ನು ತೆರೆದಿದ್ದು,ನುರಿತ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು,ಇಂತಹ ಶಾಲೆಗಳನ್ನು ಬಿಟ್ಟು ಕಾನ್ವೆಂಟ್‍ಗಳಿಗೆ ಮಕ್ಕಳನ್ನು ಸೇರಿಸುತ್ತಿರುವುದು ದುರುದೃಷ್ಠಕರ ಸಂಗತಿ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡೆಸಿದ್ದಾರೆ.

        ಕಾನ್ವೆಂಟ್‍ಗಳಲ್ಲಿ ಓದಿಸಲು ಸಾಧ್ಯವಿಲ್ಲದ ಮಕ್ಕಳಿಗೆ ಆರ್.ಟಿ.ಇ ಕಾಯ್ದಿ ಅಡಿಯಲ್ಲಿ ವಿದ್ಯಾಭ್ಯಾಸ ಕೊಡಿಸುವ ದೃಷ್ಠಿಯಿಂದ ಕಾನ್ವೆಂಟ್‍ಗಳ ವ್ಯಾಪ್ತಿಯಲ್ಲಿ ಇರುವ ಬಡಕುಟುಂಬದ ಮಕ್ಕಳಿಗೆ ಉಚಿತ ಎಲ್.ಕೆ.ಜಿ ಯಿಂದ 10 ನೇತರಗತಿಯವರಿಗೂ ಆಯ್ಕೆಯಾದ ಮಕ್ಕಳಿಗೆ ಕಾನ್ವೆಂಟ್‍ನಲ್ಲಿ ಹಣ ಪಡೆಯದೇ ಸೇರಿಸಿಕೊಳ್ಳಬೇಕಾಗಿದ್ದು,ಅದರೆ ಇವರಿಂದಲೂ ಕಾನ್ವೆಂಟ್‍ಗಳಲ್ಲಿ ಹಣ ವಸೂಲಿ ಮಾಡಿರುವುದಾಗಿ ಹಿಂದಿನ ವರ್ಷದಲ್ಲಿ ಮಾಹಿತಿ ತಿಳಿದು ಬಂದಿದ್ದು,ಪ್ರಸ್ತುತ ಸಾಲಿನಲ್ಲಿ ಆಯ್ಕೆಯಾದ ಮಕ್ಕಳಿಂದ ಹಣ ಪಡೆಯದಂತೆ ಶಿಕ್ಷಣಾಧಿಕಾರಿಗಳು ಗಮನಿಸಬೇಕಾಗಿದೆ.

     ಸರ್ಕಾರಿ ಅಧಿಕಾರಿಗಳು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದನ್ನು ಮೊದಲು ನಿಲ್ಲಿಸಿ,ಸರ್ಕಾರಿ ಶಾಲೆಗಳಿಗೆ ಸೇರಿಸಿಲು ಸರ್ಕಾರ ಆದೇಶ ಹೊರಡಿಸಿದರೇ ಮಾತ್ರ ಸರ್ಕಾರ ಶಾಲೆಗಳು ಮುಚ್ಚಿದಂತೆ ಇರಲು ಸಾಧ್ಯ ಹಾಗೂ ಬೇರೆ ಜನಾಂಗದ ಜನರಿಗೂ ಇವರು ಮಾರ್ಗ ಸೂಚಕರಾಗುತ್ತಾರೆ.

     ಸರ್ಕಾರದ ವೇತನ ಇವರಿಗೆ ಬೇಕು,ಸರ್ಕಾರ ಶಾಲೆಗಳು ಬೇಡ ಎಂಬುವುದು ಯಾವ ನ್ಯಾಯ,ಸರ್ಕಾರದ ಶಾಲೆಗಳಿಗೆ ಕಂಠಕವಾಗದಂತೆ ನೀಡಿಕೊಳ್ಳಲುವ ಜವಾಬ್ದಾರಿ ಸಹ ಸರ್ಕಾರದ ನೌಕರರಿಗೆ ಮೇಲೆ ಇದ್ದು,ಈಗಿರುವ ಯಾವೋಬ್ಬ ಸರ್ಕಾರಿಯ ನೌಕರರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿಲ್ಲ,ಯೋಬ್ಬರನ್ನು ನೋಡಿ ಒಬ್ಬರು ಸರ್ಕಾರ ಶಾಲೆಗಳಿಗೆ ಮಕ್ಕಳನ್ನು ಸೇರಿಸದೇ ಸರ್ಕಾರ ಶಾಲೆಗಳನ್ನು ಮುಚ್ಚುವ ಹಂತಕ್ಕೆ ಹೋಗಿದ್ದು,ಸರ್ಕಾರದ ಶಾಲೆಗಳನ್ನು ಹಾಗೂ ಶಾಲಾ ಶಿಕ್ಷಕರನ್ನು ಉಳಿಸಬೇಕಾದರೆ ಪ್ರತಿಯೊಬ್ಬರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮನುಸು ಮಾಡಬೇಕಾದ ಪರಿಸ್ಥಿತಿ ಅನುವಾರ್ಯವಾಗಿದೆ.

      ಸರ್ಕಾರಿ ಮತ್ತು ಅನುದಾನಿತ ಹಾಗೂ ಅನುದಾನರಹಿತ ಪ್ರಥಮಿಕ ಮತ್ತು ಪ್ರೌಡ ಶಾಲಾ ಶಿಕ್ಷಕರ ಹುದ್ದೆಗಳು 304 ಖಾಲಿ ಇವೆ ಎಂಬ ಇದ್ದು, ಪಾವಗಡ ತಾಲ್ಲೂಕು ಶೈಕ್ಷಣಿಕವಾಗಿ ಹಿಂದುಳಿದ ಗಡಿ ತಾಲ್ಲೂಕಿಗೆ ಶಿಕ್ಷಕರನ್ನು ನೇಮಿಸಲು ಮೇಲ್ದಾಧಿಕಾರಿಗಳು ಸರ್ಕಾರದ ಗಮನಕ್ಕೆ ತಂದು ಹುದ್ದೆಗಳನ್ನು ತುಂಬ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

      ಪಾವಗಡ ತಾಲ್ಲೂಕು ಬರ ಪೀಡಿತ ಪ್ರದೇಶ ಎಂದು ಘೋಷಣೆಯಾಗಿದ್ದು,ಇಲ್ಲಿನ ರೈತರು ಮತ್ತು ಕೂಲಿಕಾರ್ಮಿಕರು ಸುಮಾರು 15-20 ವರ್ಷಗಳಿಂದ ಮಳೆ ಬೆಳೆಯಾಗದೆ ಕಂಗಾಲಾಗಿದ್ದು,ತಮ್ಮ ಜೀವನ ನಡೆಸಲು ಸಾಧ್ಯವಾಗದ ಕಾಲದಲ್ಲಿ ಮಕ್ಕಳನ್ನು ಓದಿಸಲು ದುಬ್ಬಾರಿ ವೆಚ್ಚ ಕಾನ್ವೆಂಟ್‍ಗಳಿಗೆ ನೀಡಲು ಸಾಧ್ಯವಾಗದಿದ್ದರು.ಮಕ್ಕಳ ಅನಿಸಿಕೆಯಂತೆ ಅವರು ಒಪ್ಪಿದ ಶಾಲೆಗಳಿಗೆ ಸೇರಿಸಲು ಕೈಯಲ್ಲಿ ಹಣ ಇಲ್ಲದಿದ್ದರು ಸಾಲಸೂಲ ಮಾಡಿ ಮಕ್ಕಳನ್ನು ಓದಿಸಲು ಮುಂದಾಗಿದ್ದು,ಇದನ್ನು ಹರಿತು ಶಿಕ್ಷಣಾಧಿಕಾರಿಗಳು ಮತ್ತು ಡಿ.ಡಿ.ಪಿ.ಐ ರವರು ಡೊನೇಷನ್ ಹಾವಲಿ ತಪ್ಪಿಸಿ ಬೇಕಾಗಿದೆ.

      ಸರ್ಕಾರದಿಂದ ಬಂದ ಶುಲ್ಕುದ ಸುತ್ತೋಲೆ ಮಾಹಿತಿ ಕೇಳಿದರೆ ಇವರ ಹತ್ತಿರ ಮಾಹಿತಿ ಇಲ್ಲ ಎಂದು ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ ಹೇಳುತ್ತಿದ್ದು,ವಿದ್ಯಾಭ್ಯಾಸದ ಬಗ್ಗೆ ಎಷ್ಟರ ಮಟ್ಟಿಗೆ ಜವಾಬ್ದಾರಿ ಅಧಿಕಾರಿಗಳಿಗೆ ಇದೆ ಎಂಬುದು ತಿಳಿಯಬೇಕಾಗಿದೆ.ಶಿಕ್ಷಣಾಧಿಕಾರಿಗಳಿಗೆ ಇದುವರಿಗೂ ಡಿ.ಡಿ.ಪಿ.ಐ ಇಲಾಖೆಯವರು ನೀಡಲ್ಲ ಎಂದರೆ ದಾಖಲಾತಿ ಮುಗಿದ ನಂತರ ಸೂತ್ತೊಲೆ ಬಂದರೆ ಏನು ಪ್ರಯೋಜನ, ಈ ರೀತಿ ನಿರ್ಲಕ್ಷ ತೋರಿತ್ತಿರುವುದಕ್ಕೆ ಸಾಕ್ಷಯನ್ನು ಹುಡಕಬೇಕಾಗಿದ್ದು,ಶಿಕ್ಷಣಾಧಿಕಾರಿಗಳು ಜೂನ್ ತಿಂಗಳಗಿಂತ ಮೊದಲೇ ಖಾಸಗಿ ಮತ್ತು ಕಾನ್ವೆಂಟ್ ವಿದ್ಯಾಸಂಸ್ಥೆಗಳ ಮಾಲಿಕರನ್ನು ಕರೆದು ಸಭೆ ಸೆರಿಸಿ ದಾಖಲಾತಿ ಶುಲ್ಕು ಬಗ್ಗೆ ಮಾಹಿತಿ ನೀಡಬೇಕಾದ ಜವಾಬ್ದಾರಿ ಶಿಕ್ಷಣಾಧಿಕಾರಿಗಳಿಗೆ ಇರಬೇಕಾಗಿದ್ದು,

ಇವರ ಹತ್ತಿರ ಪ್ರಸ್ತುತ ದಾಖಲಾತಿ ಶುಲ್ಕುದ ಮಾಹಿತಿ ಇಲ್ಲ ಅಂದರೆ ಇದಕ್ಕೆ ಹೊಣೆಯಾರು : ಡಿ.ಡಿ.ಪಿ.ಐ ಕಣ್ಣು ಮುಚ್ಚಿ ಕುಳಿತ್ತಿದ್ದಾರೆಯೇ?

       ಮಧುಗಿರಿ ಶೈಕ್ಷಣಿಕಜಿಲ್ಲೆಯ ಡಿ.ಡಿ.ಪಿ.ಐ ಅಧಿಕಾರಿಗಳು ಇಲ್ಲಿಯವರಿಗೂ ಸಾಲಾ ಮಕ್ಕಳ ದಾಖಲಾತಿ ಶುಲ್ಕುದ ಮಾಹಿತಿ ಇನ್ನೂ ಕಳಿಸಿಲ್ಲ ಎಂದು ಶಿಕ್ಷಣಾಧಿಕಾರಿಗಳು ಪ್ರಜಾಪ್ರಗತಿಗೆ ಮಾಹಿತಿ ನೀಡಿದ್ದು,ಇದುವರಿಗೂ ಮಾಹಿತಿ ನೀಡಿಲ್ಲ ಎಂದರೆ ಡಿ.ಡಿ.ಪಿ.ಐ ಕಣ್ಣು ಮುಚ್ಚಿ ಕುಳಿತಿರ ಬಹುದೆಂದು ಅರ್ಥ, ಮಾಹಿತಿ ನೀಡುವುದರಲ್ಲಿ ಎಷ್ಟೊಂದು ನಿರ್ಲಕ್ಷವಾದರೆ,ಅಧಿಕಾರಿಗಳು ಡೊನೇಷನೆ ಹಾವಳಿ ತಪ್ಪಿಸುವುದು ಹೇಗೆ ಎಂಬ ಪ್ರಶ್ನೆ ಉಬ್ದವಾಗಿದ್ದು,ಇನ್ನು ಯಾರು ಡೊನೇಷನ್ ಹಾವಳಿ ತಪ್ಪಿಸಿ ಕ್ರಮ ಕೈಗೊಳ್ಳಲುತ್ತಾರೆ?ಶಿಕ್ಷಣಾಧಿಕಾರಿ ಪ್ರಸ್ತುತ ಸಾಲಿನಲ್ಲಿದಾರು ಪಾವಗಡ ತಾಲ್ಲೂಕಿನ ಕಾನ್ವೆಂಟ್‍ಗಳಲ್ಲಿ ಡೊನೇಷನ್ ವಸುಲಾತಿ ಬಗ್ಗೆ ಗಮನ ಹರಿಸಿ ಕಾನೂನು ಕ್ರಮ ಕೈಗೊಳ್ಳುತ್ತಾರೆಯೇ ಕಾದು ನೋಡಬೇಕಾಗಿದೆ?

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link