ಸ್ವಚ್ಚತೆಯನ್ನೇ ಮರೆತ ಹಾವೇರಿ ಜಿಲ್ಲಾಸ್ಪತ್ರೆ..!!

ಹಾವೇರಿ :

    ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛಾ ಕಾರ್ಯ ಮತ್ತು ಶೌಚಾಲಯಗಳಿಗೆ ಸ್ವಚ್ಚತೆಯ ಸರ್ಜರಿ ಆಗದಿದ್ದರೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸುವ ಜನತೆಯ ಮತ್ತಷ್ಟು ಖಾಯಿಲೆಗಳು ಬರುವುದು ಖಂಡಿತಾ ಎನ್ನಬಹುದು.

    ಜಿಲ್ಲಾ ಆಸ್ಪತ್ರೆಯಲ್ಲಿನ ನೆಲ ಕಟ್ಟಡದಿಂದ ಹಿಡಿದು ಒಂದು ಮತ್ತು ಎರಡನೇ ಅಂತಸ್ತಿನಲ್ಲಿರುವ ಕೆಲ ಮೂಲೆಗಳಲ್ಲಿ ಅಡಿಕೆ ಎಲೆ ಮತ್ತು ಗುಟ್ಕಾ ಉಗುಳಿನ ಕಲೆಗಳ ತಾಣವಾಗಿವೆ. ಶೌಚಾಲಯಗಳು ಸಾರ್ವಜನಿಕರಿಗೆ ಬಳಕೆಗೆ ಯೋಗ್ಯವಾಗಿಲ್ಲದಿರುವುದು ಕಂಡುಬರುತ್ತದೆ. ಕಟ್ಟದ ಪ್ರತಿ ವಿಭಾದಲ್ಲಿನ ಒಂದು ಭಾಗದಲ್ಲಿನ ಪುರುಷ ಮತ್ತು ಮಹಿಳಾ ಶೌಚಾಲಯಗಳು ದುರಸ್ತಿತನಲ್ಲಿವೆ ಎಂದು ಬಾಗಿಲಿಗೆ ಅಂಟಿಸಿರುವ ಫಲಕಗಳನ್ನು ಅಂಟಿಸಿ ಅನೇಕ ತಿಂಗಳು ಗತಿಸಿದ್ದರೂ ಇಂದಿನವರೆಗೂ ದುರಸ್ತಿಮಾಡಿಸದೇ ಇರುವುದರಿಂದ ಆಯಾ ವಾರ್ಡುಗಳಲ್ಲಿ ದಾಖಲಾಗಿರುವ ರೋಗಿಗಳು ಮತ್ತು ಸಾರ್ವಜನಿಕರಿಗೆ ಬಹಳ ತೊಂದರೆ ಆಗುತ್ತಿದೆ ಎನ್ನುತ್ತಾರೆ ಆಸ್ಪತ್ರೆಗೆ ಬಂದ ಸಾರ್ವಜನಿಕರು.

     ಕೆಲ ಸಾರಿ ಸಾರ್ವಜನಿಕರು ಶೌಚಕ್ಕೆ ಹೋಗಬೇಕೆಂದರೆ ಮೇಲಿನ ಮಹಡಿಯಿಂದ ಕೆಳ ಮಹಡಿಗೆ ಬರಬೇಕಾಗುತ್ತದೆ. ಇನ್ನು ಕೆಲ ಸಾರಿ ಮಹಿಳೆಯರು ಬಾಗಿಲಲ್ಲಿ ಒಬ್ಬರನ್ನು ಕಾವಲಿಗೆ ನಿಲ್ಲಿಸಿ ಪುರುಷರ ಶೌಚಾಲಯಕ್ಕೆ ಹೋಗಿ ಬರುವ ಸನ್ನಿವೇಶಗಳು ಬರುತ್ತವೆ ಎನ್ನುತ್ತಾರೆ ಮಹಿಳೆಯರು.

     ಶೌಚಾಲಯಗಳ ಕೊರತೆಯಿಂದಾಗಿ ಇರುವ ಶೌಚಾಲಯಗಳು ಬಹಳ ಗಲೀಜು ಆಗಿರುತ್ತವೆ ಇದ್ದ ಅನೇಕ ಶೌಚಾಲಯಗಳಿಗೆ ಬಾಗಿಲುಗಳಿಲ್ಲ. ಕೆಲವಕ್ಕೆ ಇದ್ದರು ಸಮರ್ಪಕವಾಗಿ ಬಾಗಿಲುಗಳನ್ನು ಹಾಕಿಕೊಳ್ಳುವುದಕ್ಕೆ ಬರುವುದಿಲ್ಲ. ಶೌಚಕ್ಕೆ ಹೋದವರು ಒಂದು ಕೈಯಲ್ಲಿ ಬಾಗಿಲನ್ನು ಹಿಡಿದಿಕೊಂಡೇ ಕುಳಿತುಕೊಳ್ಳವಂತಹ ಸ್ಥಿತಿ ಇಲ್ಲಿದೆ. ಜಿಲ್ಲಾ ಶಸ್ತ್ರ ಚಿಕಿತ್ಸಕರ ಕೊಠಡಿ ಇರುವ ಮಹಡಿಯಲ್ಲಿನ ಶೌಚಾಲಯದಲ್ಲಿನ ಎರಡು ಶೌಚಗಳಿಗೆ ಬಾಗಿಲುಗಳೇ ಇಲ್ಲದಿರುವುದನ್ನು ಕಾಣಬಹುದು.

ಶೌಚಾಲಯದ ಆವರಣದಲ್ಲೇ ಕಸ ಮುಸುರೆಗಳನ್ನು ಹಾಕುವುದಕ್ಕೆ ತೊಟ್ಟಿಗಳನ್ನು ಇಟ್ಟಿರುವುದರಿಂದ ಅಲ್ಲಿನ ಆವರ ಗಬ್ಬೆಂದು ನಾರುತ್ತಿರುತ್ತದೆ. ಅಲ್ಲಿಗೆ ಹೋಗಬೇಕೆಂದರೆ ಮೂಗಿಗೆ ಬಟ್ಟೆಯನ್ನು ಕಟ್ಟಿಕೊಂಡೇ ಹೋಗಬೇಕು ಇಲ್ಲದಿದ್ದರೆ ಅವರ ಸ್ಥಿತಿ ಅಧೋಗತಿಯಾವುಂತಾಗಿವೆ. ಈ ಹಿಂದೆ ಗಮನಿಸದ ಆಸ್ಪತ್ರೆಯ ಆವರಣಕ್ಕೂ ಇಗಿರುವದನ್ನು ಗಮನಿಸಿದರೆ ಎಷ್ಟೋ ಪಾಲು ಸುಧಾರಣೆ ಕಂಡಿದ್ದರೂ ಪ್ರಸಕ್ತ ಆಸ್ಪತ್ರೆಯಲ್ಲಿನ ಬಹುತೇಕ ಶೌಚಾಲಯಗಳಿಗೆ ಏಕೆ ಬೀಗ ಹಾಕಲಾಗಿದೆ ಎಂದು ಕೇಳಿದರೆ ದುರಸ್ತಿಯಲ್ಲಿವೆ ಎನ್ನುತ್ತಾರೆ ಸಿಬ್ಬಂದಿಗಳು.

     ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿರುವ ಎಲ್ಲ ಶೌಚಾಲಯಗಳನ್ನು ದುರಸ್ತಿ ಮಾಡಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಣೆ ಮಾಡುವತ್ತ ಇನ್ನಾದರೂ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಕ್ರಮ ಕೈಗೊಳ್ಳುವುದೇ ಕಾದು ನೋಡಬೇಕಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap