ಬೆಂಗಳೂರು
ಗೃಹ ಸಚಿವ ಎಂ.ಬಿ.ಪಾಟೀಲ್ ಲೆಟರ್ ಹೆಡ್ ನಕಲು ಮಾಡಿರುವ ಪ್ರಕರಣದ ಸಂಬಂಧ ಸಿಐಡಿ ಪೊಲೀಸರು ಬಂಧಿಸಿರುವ ಪತ್ರಕರ್ತ ಹೇಮಂತ್ ಕುಮಾರ್‍ನನ್ನು 8ನೇ ಎಸಿಎಂಎಂ ನ್ಯಾಯಾಲಯವು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಪ್ರತ್ಯೇಕ ಲಿಂಗಾಯಿತ ಧರ್ಮ ವಿಚಾರ ಸಂಬಂಧ ಎಂ.ಬಿ.ಪಾಟೀಲ್ ಅವರ ಲೆಟರ್ ಹೆಡ್ ನಕಲು ಮಾಡಿದ ಪ್ರಕರಣದಡಿ ಪೋಸ್ಟ್ ಕಾರ್ಡ್ ಪತ್ರಿಕೆಯ ಸಂಪಾದಕ ವಿಕ್ರಂ ಹೆಗ್ಡೆಗೆ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.ಈತ ನೀಡಿದ ಮಾಹಿತಿ ಮೇರೆಗೆ ಮಾಜಿ ಪತ್ರಕರ್ತ ಹೇಮಂತ್ ಕುಮಾರ್?ನನ್ನು ಸಿಐಡಿ ಪೊಲೀಸರು ಬಂಧಿಸಿ ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಭಾನುವಾರ ಆರೋಪಿಯ ತಂದೆ ಕಾರ್ಯ ಇರುವುದರಿಂದ ಬೆಳಗ್ಗೆ 11.30ರಿಂದ 2.30ವರೆಗೆ ಪೆÇಲೀಸರ ಸಮ್ಮುಖದಲ್ಲಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಅನುಮತಿ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
