ಬೆಂಗಳೂರು
ಹಲವು ಕಡೆ ಬಿಜೆಪಿ ನಾಯಕರು ಚುನಾವಣಾ ಅಕ್ರಮ ನಡೆಸುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಚುನಾವಣಾ ಆಯೋಗ ನಿರ್ಜೀವವಾಗಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡು ತ್ತಿದೆ. ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಗಳಟಿಜಿಟಿu ನಾಮಪತ್ರ ವಾಪಸ್ ಪಡೆಯುವಂತೆ ಯಡಿ ಯೂರಪ್ಪ ಒತ್ತಡ ಹಾಕಿದ್ದಾರೆ. ಚುನಾವಣಾ ಆಯೋಗ ಇದರ ಬಗ್ಗೆ ಏಕೆ ಗಮನ ಹರಿಸುತ್ತಿಲ್ಲ? ಯಡಿಯೂರಪ್ಪ ಮತ್ತು ಅವರ ತಂಡದ ಮೇಲೆ ದೂರು ದಾಖಲಿಸಲಿ.
ಆದರೆ ಚುನಾವಣಾ ಆಯೋಗ ಇದರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಇದನ್ನ ನೋಡಿದರೆ ಚುನಾವಣಾ ಆಯೋಗ ಸತ್ತು ಹೋಗಿದೆಯಾ ಇಲ್ಲ ಬಿಜೆಪಿ ಜೊತೆ ನಿಂತಿದೆಯಾ ಎಂಬ ಅನುಮಾನ ಬರುತ್ತದೆ. ಹಿರೆಕೆರೂರು, ಹೊಸಕೋಟೆ, ಗೋಕಾಕ್‍ನಲ್ಲಿ ಏನು ನಡೆಯುತ್ತಿದೆ? ವಿಜಯೇಂದ್ರ ಅವರು ಸ್ವಾಮೀಜಿಗಳ ಮೇಲೆ ಒತ್ತಡ ತಂದಿದ್ದಾರೆ. ಇದನ್ನು ನೋಡಿಯೂ ಆಯೋಗ ಸುಮ್ಮನಿರುವುದೇಕೆ ಎಂದು ಅವರು ಪ್ರಶ್ನಿಸಿದರು.
ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಉಗ್ರಪ್ಪ, ಇಟ್ಟಿಗೆ ಲಾರಿ ಇಂದ ಹಣ ಸಂಪಾದನೆ ಮಾಡಿದ್ದಾರೆ. 2018 ಮತ್ತು 2019 ರ ಚುನಾವಣೆಯಲ್ಲಿ ಎಲೆಕ್ಷನ್ ಅಧಿಕಾರಿಗೆ ಕೊಟ್ಟ ಪ್ರಮಾಣಪತ್ರ ನನ್ನ ಬಳಿ ಇದೆ. ಏಕಾಏಕಿ ಅವರ ಆದಾಯ ಹೆಚ್ಚಾಗಿದೆ. ಇಡಿ ಐಟಿ ಅವರಿಗೆ ಇದು ಕಾಣಿಸುತ್ತಿಲ್ಲವೇ? ಬಿಜೆಪಿ ಸೇರ್ಪಡೆ ಆದರೆ ಕ್ಲೀನ್ ಚಿಟ್ ಸಿಕ್ಕಿ ಬಿಟ್ಟಿದೆಯಾ? ಚುನಾವಣಾ ಆಯೋಗ ಜೀವಂತವಾಗಿದೆಯೇ? ನಿರ್ಜೀವವಾಗಿದ್ಯೋ, ಸತ್ತೋಗಿದ್ಯೋ ಗೊತ್ತಾಗುತ್ತಿಲ್ಲ. ಎಂಟಿಬಿ ಮೇಲೆ ಯಾಕೆ ಕ್ರಮಕೈಗೊಳ್ಳುತ್ತಿಲ್ಲ? ಐಟಿ, ಇಡಿ ಯಾಕೆ ಕ್ರಮ ತೆಗೆದುಕೊಳ್ತಿಲ್ಲ? ಹಣ ಕೊಡುತ್ತೇನೆ ಮತ ಹಾಕಿರಿ ಎಂದು ಮತದಾರರಿಗೆ ಅಮಿಷದ ಕೆಲಸವನ್ನು ಮತದಾರರಿಗೆ ಬಹಿರಂಗವಾಗಿಯೇ ಮಾಡುತ್ತಿದ್ದಾರೆ. ಇದು ಕಾನೂನು ಉಲ್ಲಂಘನೆಯಲ್ಲವೇ? ಚುನಾವಣಾ ಆಯೋಗ ಸುಮ್ಮನಿರುವುದೇಕೆ? ಕಾಂಗ್ರೆಸ್ ನಾಯಕರು ಸಾಲ ಪಡೆದಿದ್ದಾರೆಂಬ ಆರೋಪವನ್ನು ಎಂಟಿಬಿ ನಾಗರಾಜು ಮಾಡುತ್ತಿದ್ದಾರೆ.
ಸಿದ್ದರಾಮಯ್ಯ, ಮುನಿಯಪ್ಪ, ನಂಜೇಗೌಡರಿಗೆ ಸಾಲ ಕೊಟ್ಟಿದ್ದೀನಿ ಅಂತ ಹೇಳಿದ್ದಾರೆ. ಈ ಸಾಲದ ಬಗ್ಗೆ ಅಫಿಡವಿಟ್‍ನಲ್ಲಿ ನಮೂದಾಗಬೇಕು. ಆದರೆ ಅಫಿಡವಿಟ್‍ನಲ್ಲಿ ಏಕೆ ನಮೂದಿಸಿಲ್ಲ. ಅಫಿಡವಿಟ್‍ನಲ್ಲಿ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಇದರ ಬಗ್ಗೆ ಚುನಾವಣಾ ಆಯೋಗ ಕ್ರಮತೆಗೆದು ಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಮಾಜಿ ಸಚಿವ ಕೆ.ಜೆ.ಜಾರ್ಜ್ ಬಗ್ಗೆ ಸಿಬಿಐ ಬಿ-ರಿಪೋರ್ಟ್ ಸಲ್ಲಿಕೆ ವಿಚಾರ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ಎಷ್ಟು ಕಷ್ಟ ಅನುಭವಿಸಿದ್ದರು? ಅವರ ಮನೆಯವರಿಗೂ ನಿದ್ರೆಯಿಲ್ಲದ ದಿನಗಳಿವೆ. ಅಂತಹ ಸನ್ನಿವೇಶವನ್ನ ನೀವು ಸೃಷ್ಟಿಸಿದ್ದಿರಿ. ಆದರೆ ಇದೀಗ ಸಿಬಿಐ ಬಿ- ರಿಪೋರ್ಟ್ ಕೊಟ್ಟಿದೆ. ಸಿಬಿಐ ಇರೋದು ಕೇಂದ್ರದ ಒಡೆತನದಲ್ಲಿಯೇ. ಇದನ್ನ ಗಮನದಲ್ಲಿಟ್ಟುಕೊಂಡು ನೀವು ಜಾರ್ಜ್ ಕ್ಷಮೆಯಾಚಿಸಬೇಕು ಎಂದು ರಾಜ್ಯ ಬಿಜೆಪಿ ನಾಯಕರಿಗೆ ಉಗ್ರಪ್ಪ ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








