ನರಕದ ದರ್ಶನ ಮಾಡಿಸುತ್ತಿರುವ ಗುರುಗದಹಳ್ಳಿ ರಸ್ತೆ

ತಿಪಟೂರು
 
    ತಾಲ್ಲೂಕಿನ ಗ್ರಾಮಗಳಾದ ಶಿವರ, ಬೇಲೂರನಹಳ್ಳಿ, ಕೊಡಿಕೊಪ್ಪಲು, ಗುರುಗದಹಳ್ಳಿ, ಗೌಡನಕಟ್ಟೆ, ಸಿಂಗೇನಹಳ್ಳಿ, ಬೆಣ್ಣೇನಹಳ್ಳಿ ಮತ್ತಿತರ ಹಳ್ಳಿಗಳಿಗೆ ಸುಮಾರು ವರ್ಷಗಳಿಂದ ರಸ್ತೆಯ ಸಂಚಾರವೇ ದುಸ್ತರವಾದಂತೆ ಕಂಡು ಬರುತ್ತಿದ್ದು ಆದರೆ ಈಗ ಹಾಸನ ಮುಖ್ಯರಸ್ತೆಯನ್ನು ಸರಿಪಡಿಸುವುದರಿಂದ ನಿಟ್ಟುಸಿರುವ ಬಿಡುವ ಸಂದರ್ಭದಲ್ಲಿ “ಹೋದೆಯ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ” ಎನ್ನುವಂತಹ ಪರಿಸ್ಥಿತಿ ಇಲ್ಲಿನ ನಾಗರೀಕರಿಗೆ ಬಂದೊದಗಿದೆ.
    ಇಷ್ಟು ದಿನ ಮುಖ್ಯರಸ್ತೆಯ ಸಮಸ್ಯೆಯನ್ನು ಎದುರಿಸಿದ ಜನರು ಈಗ ತಮ್ಮ ಗ್ರಾಮದ ರಸ್ತೆಯಲ್ಲಿ ತಿರುಗಾಡಲು ಕಷ್ಟವಾದ ಪರಿಸ್ಥಿತಿ ನಿರ್ಮಾಣವಾಗಿದ್ದು ರಸ್ತೆ ಹಾಳಾಗಿರುವುದಲ್ಲದೇ ರಸ್ತೆ ಪಕ್ಕದಲ್ಲಿ ಬೆಳೆದಿನಿಂತಿರುವ ಗಿಡಗಂಟಿಗಳು ರಸ್ತೆಯಲ್ಲಿ ಒಂದು ಬಸ್ಸು, ಟ್ರ್ಯಾಕ್ಟರ್ ಅಥವಾ ಆಟೋ ಬಂದರೆ ದ್ವಿಚಕ್ರವಾಹನ ಸವಾರರು ಮತ್ತು ಎದುರಿನಿಂದ ಬರುವ ವಾಹನಗಳು ಬೇಲಿಯ ಒಳಗೆ ಹೋಗುವ ಪರಿಸ್ಥತಿ ನಿರ್ಮಾಣವಾಗಿದೆ.
   ದ್ವಿಚಕ್ರವಾಹನ ಸವಾರರ ಪಾಡು ಹೇಳತೀರದು : ಇನ್ನು ಇದೇ ರಸ್ತೆಯಲ್ಲಿ ಶಾಲಾ ಕಾಲೇಜಿಗೆ ಮಕ್ಕಳನ್ನು ಬಿಡಲು ಮತ್ತು ಇತರೆ ಕೆಲಸಗಳಿಗಾಗಿ ತೆರಳುವ ಸಾರ್ವಜನಿಕರು ಜೀವವನ್ನು ಕೈಯಲ್ಲಿ ಹಿಡಿದು ವಾಹನ ಸವಾರಿ ಮಾಡುವಂತಾಗಿದ್ದು ಯಾವುದಾದರೂ ವಾಹನ ಬಂದರೆ ಗಿಡದೊಳಗೆ ಹೋಗಿ ಮುಖ ಮೂತಿ ಪರಚಿಕೊಳ್ಳಬೇಕು, ಇಲ್ಲ ವಾಹನಕ್ಕೆ ಗುದ್ದಿಕೊಂಡು ಪ್ರಾಣ ಕೆಳೆದುಕೊಳ್ಳು ಸ್ಥಿತಿಇದ್ದು ಸಂಬಂಧಿಸಿದ ಇಲಾಖೆಯವರು ಶೀಘ್ರವಾಗಿ ರಸ್ತೆ ಪಕ್ಕದಲ್ಲಿ ಗಿಡಗಳನ್ನಾದರು ಕತ್ತರಿಸಿ ಪ್ರಯಾಣಿಕರ ಜೀವನನ್ನು ಉಳಿಸಿಬೇಕೆಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link